ETV Bharat / sports

ಅಂಡರ್ 19 ವಿಶ್ವಕಪ್: ದ.ಆಫ್ರಿಕಾ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್​ U19 - ದಕ್ಷಿಣ ಆಫ್ರಿಕಾ U19 vs ಇಂಗ್ಲೆಂಡ್ U19

210 ರನ್​ಗಳ ಗುರಿ ಪಡೆದ ಆಂಗ್ಲ ಯುವ ಪಡೆ ಕೇವಲ 31.2 ಓವರ್​ಗಳಲ್ಲಿ 4 ವಿಕೆಟ್ ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

U19 world cup
ಅಂಡರ್ 19 ವಿಶ್ವಕಪ್​ ಇಂಗ್ಲೆಂಡ್​ ಸೆಮಿಫೈನಲ್
author img

By

Published : Jan 27, 2022, 5:23 PM IST

ಆ್ಯಂಟಿಗುವಾ: ಅಂಡರ್​ 19 ವಿಶ್ವಕಪ್​ನ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 43.4 ಓವರ್​ಗಳಲ್ಲಿ 209 ರನ್​ಗಳಿಗೆ ಆಲೌಟ್ ಆಗಿತ್ತು. ತಂಡದ ಇತರೆ ಬ್ಯಾಟರ್​ಗಳು ಕೈಕೊಟ್ಟರೂ, ಅತ್ಯುತ್ತಮ ಫಾರ್ಮ್​​ನಲ್ಲಿರುವ ಡೆವಾಲ್ಡ್​ ಬ್ರೆವಿಸ್​ ಕೇವಲ 88 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 97 ರನ್​ಗಳಿಸಿದರು. ಇವರನ್ನು ಹೊರೆತುಪಡಿಸಿದರೆ ವಿಕೆಟ್ ಕೀಪರ್ ಗೆರ್ಹಾರ್ಡಸ್ ಮೇರಿ 27 ಮತ್ತು ಮ್ಯಾಥ್ಯೂ ಬೋಸ್ಟ್​ 22 ರನ್​ಗಳಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇಂಗ್ಲೆಂಡ್​ ಪರ ರೆಹಾನ್ ಅಹ್ಮದ್​ 48ಕ್ಕೆ 4, ಜೋಶುವಾ ಬಾಯ್ಡನ್​ 31ಕ್ಕೆ 2, ಜೇಮ್ಸ್ ಸೇಲ್ಸ್​ 33ಕ್ಕೆ 2 ಮತ್ತು ಬೆತೆಲ್ 30ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

210 ರನ್​ಗಳ ಗುರಿ ಪಡೆದ ಆಂಗ್ಲ ಯುವ ಪಡೆ ಕೇವಲ 31.2 ಓವರ್​ಗಳಲ್ಲಿ 4 ವಿಕೆಟ್ ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಆರಂಭಿಕ ಜಾಕೋಬ್ ಬೆಥೆಲ್ 42 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 88 ರನ್​ಗಳಿಸಿದರೆ, ವಿಲಿಯಮ್​ ಲಕ್ಷ್ಟನ್​ 41 ಎಸೆತಗಳಲ್ಲಿ 6 ಬೌಂಡರಿ , 2 ಸಿಕ್ಸರ್​ಗಳ ಸಹಿತ ಅಜೇಯ 47 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿದಾಟಿಸಿದರು. ನಾಯಕ ಟಾಮ್ ಪ್ರೆಸ್ಟ್​ 24 ರನ್​ಗಳಿಸಿದರು.

ಮೊದಲ ತಂಡವಾಗಿ ಸೆಮಿಫೈನಲ್ ತಲುಪಿರುವ ಇಂಗ್ಲೆಂಡ್ ಜೂನಿಯರ್ ತಂಡ ನಾಲ್ಕರ ಘಟ್ಟದ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಕ್ವಾರ್ಟರ್ ಫೈನಲ್​​ ಪಂದ್ಯದ ವಿಜೇತರನ್ನು ಫೆಬ್ರವರಿ 1ರಂದು ಎದುರಿಸಲಿದೆ.

ಇದನ್ನೂ ಒದಿ:RCB ಅಲ್ಲ, ಈ ತಂಡದ ಪರ ಆಡುವ ಇಚ್ಛೆ ವ್ಯಕ್ತಪಡಿಸಿದ ಹರ್ಷಲ್​ ಪಟೇಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.