ಆ್ಯಂಟಿಗುವಾ(ವೆಸ್ಟ್ ಇಂಡೀಸ್): ಅಂಡರ್-19 ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತದ ವಿರುದ್ಧ ರನ್ಗಳಿಕೆ ಮಾಡಲು ಹರಸಾಹಸ ಪಟ್ಟಿರುವ ಹಾಲಿ ಚಾಂಪಿಯನ್ ಬಾಂಗ್ಲಾದೇಶ ಕೇವಲ 111ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತದ ಗೆಲುವಿಗೆ 112ರನ್ ಸುಲಭ ಟಾರ್ಗೆಟ್ ನೀಡಿದೆ.
19 ವರ್ಷದೊಳಗಿನ ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಆರಂಭದಿಂದಲೂ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಆರಂಭಿಕರಾಗಿ ಕಣಕ್ಕಿಳಿದ ಇಸ್ಲಾಂ(2), ಹುಸೈನ್(1)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇದಾದ ನಂತರ ಮೈದಾನಕ್ಕೆ ಬಂದ ನಬೀಲ್ ಕೂಡ 7ರನ್ಗಳಿಕೆ ಮಾಡಿ ರವಿ ಕುಮಾರ್ ಬೌಲಿಂಗ್ನಲ್ಲಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಮೊಲ್ಹಾ 17ರನ್ಗಳಿಕೆ ಮಾಡಿದ್ರೆ, ಮೆಹರೊಬ್(30) ಹಾಗೂ ಜಮಾನ್ 16ರನ್ ಗಳಿಸಿದ್ದು, ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. ಉಳಿದಂತೆ ಯಾವುದೇ ಪ್ಲೇಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಟೀಂ ಇಂಡಿಯಾ ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಪರ ರವಿ ಕುಮಾರ್ 3 ವಿಕೆಟ್, ಒಸ್ತ್ವಾಲ್ 2 ವಿಕೆಟ್ ಪಡೆದರೆ, ರವೀಂದ್ರನ್, ತಾಂಬೆ ಹಾಗೂ ರಘುವಂಶಿ ತಲಾ 1 ವಿಕೆಟ್ ಉರುಳಿಸಿದರು.
ಇದನ್ನೂ ಓದಿರಿ: 'ನಮ್ಮ ಕಾಲದಲ್ಲಿ ಈ ನಿಯಮ ಜಾರಿಯಲ್ಲಿದ್ದಿದ್ದರೆ ಸಚಿನ್ ಲಕ್ಷ ರನ್ ಸಿಡಿಸುತ್ತಿದ್ರು': ಅಖ್ತರ್!
ಗ್ರೂಪ್ ಹಂತದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದ್ದು, ಕೆನಡಾ ಮತ್ತು ಯುಎಇ ವಿರುದ್ಧ ಗೆಲುವು ದಾಖಲಿಸಿ, ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ.
-
Innings Break!
— BCCI (@BCCI) January 29, 2022 " class="align-text-top noRightClick twitterSection" data="
Superb show with the ball by #BoysInBlue! 👏
3⃣ wickets for Ravi Kumar
2⃣ wickets for Vicky Ostwal
1⃣ wicket each for Rajvardhan Hangargekar, Kaushal Tambe & Angkrish Raghuvanshi
Over to our batters now. #U19CWC #INDvBAN
Scorecard ▶️ https://t.co/bAqD0JhIg3 pic.twitter.com/gwyRG53hL2
">Innings Break!
— BCCI (@BCCI) January 29, 2022

Scorecard ▶️ https://t.co/bAqD0JhIg3 pic.twitter.com/gwyRG53hL2Innings Break!
— BCCI (@BCCI) January 29, 2022
Superb show with the ball by #BoysInBlue! 👏
3⃣ wickets for Ravi Kumar
2⃣ wickets for Vicky Ostwal
1⃣ wicket each for Rajvardhan Hangargekar, Kaushal Tambe & Angkrish Raghuvanshi
Over to our batters now. #U19CWC #INDvBAN
Scorecard ▶️ https://t.co/bAqD0JhIg3 pic.twitter.com/gwyRG53hL2
ಕಳೆದ ಆವೃತ್ತಿಯ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಬಾಂಗ್ಲಾದೇಶ ಚಾಂಪಿಯನ್ ಆಗಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಇದೀಗ ಕಾಯುತ್ತಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ದಾಖಲಿಸಿರುವ ಇಂಗ್ಲೆಂಡ್, ಆಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ಈಗಾಗಲೇ ಸಮಿಫೈನಲ್ಗೆ ಲಗ್ಗೆಯಿಟ್ಟಿವೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ