ಮುಂಬೈ: ಐಪಿಎಲ್ ರಿಟೆನ್ಷನ್ ಮುಗಿಯುತ್ತಿದ್ದಂತೆ ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಮುಖ್ಯ ಕೋಚ್ಗಳಾದ ಆ್ಯಂಡಿ ಫ್ಲವರ್ ಮತ್ತು ಟ್ರೆವರ್ ಬೇಲಿಸ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ಮಾಜಿ ಇಂಗ್ಲೆಂಡ್ ಕೋಚ್ಗಳು ನೂತನ ಲಖನೌ ಫ್ರಾಂಚೈಸಿಗೆ ಸೇರುವ ಸಾಧ್ಯತೆಯಿದೆ.
ಇದು ನಿಜ, ಆ್ಯಂಡಿ ಪಂಜಾಬ್ ಕಿಂಗ್ಸ್ ತೊರೆದಿದ್ದಾರೆ. ಅವರು ತಮ್ಮ ಅವಕಾಶಗಳನ್ನು ವಿಕಸನಗೊಳಿಸಿಕೊಳ್ಳಲು ಬಯಸಿದ್ದಾರೆ. ನಾವು ಅದನ್ನು ಗೌರವಿಸುತ್ತೇವೆ ಎಂದು ಪಂಜಾಬ್ ಕಿಂಗ್ಸ್ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ. ಆದರೆ, ಜಿಂಬಾಬ್ವೆ ಮಾಜಿ ನಾಯಕ ಕೆರಿಬಿಯನ್ ಪ್ರೀಮಿಯರ್ ಕಿಂಗ್ಸ್ನಲ್ಲಿ ತಮ್ಮ ನೇತೃತ್ವದ ಸೇಂಟ್ ಲೂಸಿಯಾ ಜೌಕ್ಸ್ ತಂಡಕ್ಕೆ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಫ್ಲವರ್ ಕನ್ನಡಿಗ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಖ್ಯ ಕೋಚ್ ಆಗಿದ್ದರು.
ಇದನ್ನೂ ಓದಿ:ಮುಂಬೈಗೆ ಇಷ್ಟವಿಲ್ಲದಿದ್ದರೂ ಈ ಕಾರಣದಿಂದ ಹಾರ್ದಿಕ್ ಪಾಂಡ್ಯ ಕೈಬಿಟ್ಟಿದೆ!