ETV Bharat / sports

ಏಕದಿನ ಪಂದ್ಯದಲ್ಲಿ 127 ಎಸೆತಗಳಲ್ಲಿ 230 ರನ್​ ಚಚ್ಚಿದ ಟ್ರಾವಿಸ್ ಹೆಡ್​ - Travis Head makes history hammering 230 i

ಟ್ರಾವಿಸ್ ಹೆಡ್​ ಈ ಪಂದ್ಯದಲ್ಲಿ 230 ರನ್​ಗಳಿಸುವ ಮೂಲಕ 50 ಓವರ್​ಗಳ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರ 2 ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಆದರು. ಈ ಹಿಂದೆ 2015ರಲ್ಲಿ ವೆಸ್ಟ್ ಆಸ್ಟ್ರೇಲಿಯಾ ವಿರುದ್ಧ 202 ರನ್​ಗಳಿಸಿದ್ದರು. ಇದೀಗ ಎರಡನೇ ಬಾರಿ ದ್ವಿಶತಕ ಸಾಧನೆ ಮಾಡಿದ್ದಾರೆ.

Travis head scored record 230 runs
ಟ್ರಾವಿಸ್ ಹೆಡ್​ 230 ರನ್ಸ್
author img

By

Published : Oct 13, 2021, 12:03 PM IST

ಸೌತ್​ ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಟ್ರಾವಿಸ್​ ಹೆಡ್​ ಗುರುವಾರ ನಡೆದ ಆಸ್ಟ್ರೇಲಿಯಾ ಡೊಮೆಸ್ಟಿಕ್ ಏಕದಿನ ಟೂರ್ನಿಯಲ್ಲಿ ಕ್ವೀನ್ಸ್​ಲ್ಯಾಂಡ್​ ವಿರುದ್ಧ ಆಕರ್ಷಕ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ 50 ಓವರ್​ಗಳ ಪಂದ್ಯದಲ್ಲಿ 2 ದ್ವಿಶತಕ ಸಿಡಿಸಿ ಆಸೀಸ್​ನ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಟೂರ್ನಿಯ 2ನೇ ಪಂದ್ಯದಲ್ಲಿ ಕ್ವೀನ್ಸ್​ಲ್ಯಾಂಡ್ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್​ ಆಸ್ಟ್ರೇಲಿಯಾ 48 ಓವರ್​ಗಳ ಪಂದ್ಯದಲ್ಲಿ 8 ವಿಕೆಟ್ ಕಳೆದುಕೊಂಡು 391 ರನ್​ಗಳಿಸಿದೆ. ನಾಯಕ ಟ್ರಾವಿಸ್ ಹೆಡ್​ ಕೇವಲ 127 ಎಸೆತಗಳಲ್ಲಿ 28 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 230 ರನ್​ಗಳಿಸಿದ ಬೃಹತ್ ಮೊತ್ತಕ್ಕೆ ಕಾರಣರಾದರು. ಇವರಿಗೆ ಸಾಥ್ ನೀಡಿದ ಜಾಕ್​ ವೆದರ್ಲೆಂಡ್​ 97 ರನ್​ಗಳಿಸಿದರು.​

ಟ್ರಾವಿಸ್ ಹೆಡ್​ ಈ ಪಂದ್ಯದಲ್ಲಿ 230 ರನ್​ಗಳಿಸುವ ಮೂಲಕ 50 ಓವರ್​ಗಳ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರ 2 ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಆದರು. ಈ ಹಿಂದೆ 2015ರಲ್ಲಿ ವೆಸ್ಟ್ ಆಸ್ಟ್ರೇಲಿಯಾ ವಿರುದ್ಧ 202 ರನ್​ಗಳಿಸಿದ್ದರು. ಇದೀಗ ಎರಡನೇ ಬಾರಿ ದ್ವಿಶತಕ ಸಾಧನೆ ಮಾಡಿದ್ದಾರೆ.

ಭಾರತದ ರೋಹಿತ್ ಶರ್ಮಾ 50 ಓವರ್​ಗಳ ಕ್ರಿಕೆಟ್​ನಲ್ಲಿ 3 ಬಾರಿ, ಇಂಗ್ಲೆಂಡ್​ನ ಆಲಿಸ್ಟೈರ್ ಬ್ರೌನ್​ 2 ಬಾರಿ ದ್ವಿಶತಕ ಸಿಡಿಸಿದ್ದಾರೆ. ಇದೀಗ ಹೆಡ್ ಒಂದಕ್ಕಿಂತ ಹೆಚ್ಚುಬಾರಿ ದ್ವಿಶತಕ ಸಿಡಿಸಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದನ್ನು ಓದಿ:ಕನ್ನಡಿಗನ ಹಿಂದೆ ಫ್ರಾಂಚೈಸಿಗಳ ದಂಡು..: ಅನ್‌ಲಕ್ಕಿ ಪಂಜಾಬ್​ ಬಿಟ್ಟು ಬರಲಿದ್ದಾರಾ ರಾಹುಲ್?:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.