ETV Bharat / sports

ಟಿ20 ವಿಶ್ವಕಪ್: ಭಾರತ-ಪಾಕಿಸ್ತಾನ ನಡುವಿನ ರೋಚಕ ಕದನಗಳ ಫ್ಲಾಶ್‌ಬ್ಯಾಕ್‌

author img

By

Published : Oct 21, 2022, 10:34 PM IST

ಭಾರತದ ಟ್ರಂಪ್​ ಕಾರ್ಡ್ ಬೌಲರ್​ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ಅಂತಾರಾಷ್ಟ್ರೀಯ ಟಿ 20 ವಿಶ್ವ ಕಪ್​ಗೆ ಅಣಿಯಾಗಿದೆ. ಶಮಿ ಬೂಮ್ರಾ ಅವರ ಸ್ಥಾನವನ್ನು ತುಂಬುತ್ತಿದ್ದಾರೆ. ಅವರೊಂದಿಗೆ ಅನುಭವಿ ಭುವನೇಶ್ವರ್​ ಕುಮಾರ್​ ಸಾಥ್​ನೀಡಲಿದ್ದಾರೆ. ಆಸ್ಟ್ರೇಲಿಯಾದ ವೇಗದ ಪಿಚ್​ನಲ್ಲಿ ಭಾರತದ ಮೊದಲ ಸಾಂಪ್ರದಾಯಿಕ ಎದುರಾಲಿಗಳೊಂದಿಗಿನ ಪಂದ್ಯದಲ್ಲಿ ಈ ಅವಳಿ ವೇಗಿಗಳು ಹೇಗೆ ಸ್ಪೆಲ್​ ಮಾಡುತ್ತಾರೆ ಎಂಬುದು ನೋಡಬೇಕಿದೆ.

Top encounters between India and Pakistan at T20 World Cup Head to Head
ಭಾರತ ಮತ್ತು ಪಾಕಿಸ್ತಾನದ ಅವಿಸ್ಮರಣೀಯ ಮುಖಾಮುಖಿಗಳು

ಇದೇ ಭಾನುವಾರ ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್​ ಟಿ20 ಕ್ರಿಕೆಟ್ ಪಂದ್ಯ ನಡೆಯಲಿದೆ. ಏಷ್ಯಾ ಕಪ್​ನಲ್ಲಿ ಭಾರತವು ಪಾಕಿಸ್ತಾನದೆದುರು ಸೋಲನುಭವಿಸಿತ್ತು. ವಿಶ್ವಕಪ್​ನ ಈ ಪಂದ್ಯದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಬ್ಲೂ ಬಾಯ್ಸ್​ ರೆಡಿಯಾಗಿದ್ದಾರೆ.

ದಾಖಲೆಗಳ ಪ್ರಕಾರ, ವಿನ್ನಿಂಗ್​ ಫೇವ​ರೆಟ್​ ಟೀಂ ಭಾರತವೇ. ಆದರೂ ಪಾಕಿಸ್ತಾನದ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ. ಭಾನುವಾರದ ಪಂದ್ಯಕ್ಕೂ ಮುನ್ನ ಇಂಡೋ-ಪಾಕ್​ನ ಅವಿಸ್ಮರಣೀಯ ಆರು ಪಂದ್ಯಗಳ ಒಂದು ಮೆಲುಕು ಇಲ್ಲಿದೆ.

1. ಬಾಲ್​ ಔಟ್​ ಮೂಲಕ ಗೆಲುವು: 2007ರಲ್ಲಿ ಟೈ ಆದ ಪಂದ್ಯವನ್ನು ಭಾರತ ಬಾಲ್​ ಔಟ್​ ಮುಖಾಂತರ ಗೆದ್ದುಕೊಂಡಿತ್ತು. ಮೊದಲ ಟಿ20 ವಿಶ್ವಕಪ್​ನಲ್ಲಿ ಸೂಪರ್​ ಓವರ್​ನ ಪರಿಚಯ ಆಗಿರಲಿಲ್ಲ. ಪಂದ್ಯ ಟೈ ಆದಾಗ ಒಂದು ಓವರ್​ಗಳ ಬಾಲ್​ಔಟ್‌ ಆಡಿಸಲಾಗುತ್ತಿತ್ತು.

2. 2007 ವಿಶ್ವಕಪ್​ ಫೈನಲ್​ ಮ್ಯಾಚ್: ಫೈನಲ್​ ಪಂದ್ಯದಲ್ಲಿ ಧೋನಿಯ ಚಾಣಾಕ್ಷ ಫೀಲ್ಡ್ ಸೆಟ್ ಮತ್ತು ಮೈದಾನದಲ್ಲಿ ಮಾಡಿದ ಕೊನೆ ಕ್ಷಣದ ಬದಲಾವಣೆಗೆ ಕ್ರಿಕೆಟ್​ ದಿಗ್ಗಜರೇ ಬೆರಗಾಗಿದ್ದರು. ಗೌತಮ್​ ಗಂಭಿರ್​ ಅವರು ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಪಾಕಿಸ್ತಾನಕ್ಕೆ 158 ರನ್​ಗಳ ಗುರಿಯನ್ನು ಭಾರತ ನೀಡಿತ್ತು. ಭಾರತ ಬೌಲಿಂಗ್​ನಲ್ಲಿ ಇರ್ಫಾನ್ ಪಠಾಣ್ 16ಕ್ಕೆ ಮೂರು ವಿಕೆಟ್​ ಪಡೆಯುವ ಮುಲಕ ಅದ್ಭುತ ಸ್ಪೆಲ್ ಮಾಡಿದ್ದರು. ಆದರೆ ಮಿಸ್ಬಾ ಉಲ್​ ಹಕ್​ ಮತ್ತೊಂದು ಬದಿಯಲ್ಲಿ ತಂಡದ ಗೆಲುವಿಗೆ ಪ್ರಯತ್ನಿಸುತ್ತಿದ್ದರು.

ಈ ಪಂದ್ಯದ ಆರಂಭದಲ್ಲಿ ಜೋಗಿಂದರ್​ ದುಬಾರಿಯಾಗಿದ್ದೂ ಅಲ್ಲದೇ ವಿಕೆಟ್​ ಕೂಡ ಪಡೆದಿರಲಿಲ್ಲ. ಕೊನೆಯ ಓವರ್​ನಲ್ಲಿ ಸೀಮಿತ ರನ್ ಇದ್ದಾಗ ಮತ್ತೆ ಜೋಗಿಂದರ್​ ​ಕೈಗೆ ಧೋನಿ ಬಾಲ್​ ನೀಡಿದಾಗ ಕ್ರಿಕೆಟ್​ ಪ್ರೇಮಿಗಳು ಕ್ಯಾಪ್ಟನ್​ ಕೂಲ್‌ರನ್ನು ಮನಬಂದಂತೆ ಬೈದಿದ್ದರು. ಅಚ್ಚರಿ ಎಂಬಂತೆ ಕೊನೆಯ ಓವರ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಪಡೆದ ಜೋಗಿಂದರ್​ ಮೆಚ್ಚುಗೆ ಗಳಿಸಿದ್ದರು. ಅಲ್ಲದೇ ಕೊನೆಯ ಬಾಲ್​ಗೆ 6ರನ್​ ಬೇಕಿದ್ದಾಗ, ವಿಕೆಟ್ ಕೀಪರ್​ ಹಿಂದೆ ಶ್ರೀಶಾಂತ್‌ರನ್ನು ನಿಲ್ಲಿಸಿದ್ದ ಧೋನಿ, ಕ್ಯಾಚ್ ಬಗ್ಗೆ ಪೂರ್ವ ನಿರ್ಧಾರ ಮಾಡಿದ್ದರು. ಈ ಫೀಲ್ಡಿಂಗ್​ ಬದಲಾವಣೆ ಅಚ್ಚರಿಗೆ ಕಾರಣವಾಗಿತ್ತು. ಈ ಮೂಲಕ ಭಾರತ ಐದು ರನ್​ನಿಂದ ಗೆದ್ದು ಚೊಚ್ಚಲ ವಿಶ್ವಕಪ್​ ಮಡಿಲಿಗೆ ಹಾಕಿಕೊಂಡಿತ್ತು.

3. 2012ರಲ್ಲಿ 8 ವಿಕೆಟ್‌ಗಳಿಂದ ರೋಚಕ ಗೆಲುವು: ಭಾರತ ಈ ಪಂದ್ಯವನ್ನು ವಿರಾಟ್​ ಕೊಹ್ಲಿ ಅವರ ಒನ್​ ಮ್ಯಾನ್​ ಶೋನಿಂದ ಗೆದ್ದುಕೊಂಡಿತ್ತು. ಸೆಹ್ವಾಗ್​ ಮತ್ತು ಯುವರಾಜ್​ ಸಿಂಗ್​ ವಿಕೆಟ್​ ನಂತರ ಏಕಾಂಗಿ ಆಟಕ್ಕೆ ಮುಂದಾದ ಕೊಹ್ಲಿ ಅಗ್ರೆಸಿವ್​ ಆಗಿ ಆಡುತ್ತಾ 78 ರನ್​ ಗಳಿಸಿ ತಂಡಕ್ಕೆ ವಿಜಯ ತಂದಿಟ್ಟಿದ್ದರು.

4. 2014ರಲ್ಲಿ 7 ವಿಕೆಟ್‌ಗಳಿಂದ ಗೆಲುವು: ಪಾಕ್‌ ತಂಡ ಉಮರ್ ಅಕ್ಮಲ್ ಅವರ 33 ರನ್‌ಗಳ ಸಹಾಯದಿಂದ ಭಾರತಕ್ಕೆ 130 ರನ್ ​ಗಳ ಗುರಿ ನೀಡಿತ್ತು. ಭಾರತ ಈ ಗುರಿಯನ್ನು ವಿರಾಟ್​ 36 ರನ್​, ಶಿಖರ್​ ಧವನ್ ಮತ್ತು ಸುರೇಶ್​ ರೈನಾರ 30 ಮತ್ತು 35 ರನ್​ ಕೊಡುಗೆಯಿಂದ ಏಳು ವಿಕೆಟ್​ಗಳಿಂದ ಗೆದ್ದಿತ್ತು.

5. 2016ರಲ್ಲಿ ಕೊಹ್ಲಿಯ ವಿರಾಟ್​ ಪ್ರದರ್ಶನ: ಪಂದ್ಯವನ್ನು ಮಳೆಯ ಪರಿಣಾಮ 18 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಶೋಯೆಬ್ ಮಲಿಕ್ 26 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಆಗಿದ್ದರೆ, ಉಳಿದಂತೆ ಉಮರ್ ಅಕ್ಮಲ್ ಮತ್ತು ಅಹ್ಮದ್ ಶೆಹಜಾದ್ ಮಾತ್ರ 20 ರನ್‌ಗಳಿಸಿ ಪಾಕಿಸ್ತಾನ 5 ವಿಕೆಟ್‌ಗಳ ನಷ್ಟಕ್ಕೆ 118 ರನ್‌ಗಳ ಸಾಧಾರಣ ಗುರಿ ನೀಡಿತ್ತು. ರೋಹಿತ್ ಶರ್ಮಾ (11ಕ್ಕೆ 10) ಮತ್ತು ಶಿಖರ್ ಧವನ್ (15ಕ್ಕೆ 6) ಬೇಗ ವಿಕೆಟ್​ ಒಪ್ಪಿಸಿದ್ದರು. ಇದರಿಂದ ಭಾರತ ಆರಂಭಿಕ ಕುಸಿತ ಕಂಡಿತ್ತು. ಆದರೆ ವಿರಾಟ್ ಕೊಹ್ಲಿ 37 ಎಸೆತದಲ್ಲಿ 55 ರನ್ ಗಳಿಸಿದ್ದರಿಂದ ಭಾರತ 13 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಈ ಅವಿಸ್ಮರಣೀಯ ಆಟದ ನಂತರ ವಿರಾಟ್​ ಸ್ಟ್ಯಾಂಡ್‌ನಲ್ಲಿದ್ದ ಸಚಿನ್ ತೆಂಡೂಲ್ಕರ್‌ಗೆ ನಮಿಸಿದ್ದರು.

6. 2021ರಲ್ಲಿ ಭಾರತದೆದುರು ಗೆದ್ದ ಪಾಕ್​: ಭಾರತ ಬ್ಯಾಟಿಂಗ್​ ವೈಫಲ್ಯ ಕಂಡಿತಾದರೂ ವಿರಾಟ್ ಅವರ ಅರ್ಧ ಶತಕ ಮತ್ತು ಪಂತ್​ ಅವರ 39 ರನ್ ಬಲದಿಂದ 151 ರನ್‌ಗಳ ಉತ್ತಮ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಬಾಬರ್ ಅಜಮ್ 68 ರನ್​ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅಜೇಯ 79 ರನ್‌ ಕೊಡುಗೆ ಪಾಕಿಸ್ತಾನಕ್ಕೆ 10 ವಿಕೆಟ್​ಗಳ ಗೆಲುವು ದೊರಕಿಸಿತ್ತು.

ಇಂಡೋ ಪಾಕ್​ ಹೆಡ್​ ಟು ಹೆಡ್: ಭಾರತ ಪಾಕಿಸ್ತಾನ ಟಿ20 ವಿಶ್ವಕಪ್​ನಲ್ಲಿ 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಭಾರತ 4 ಪಂದ್ಯ ಗೆದ್ದಿದೆ. ಪಾಕಿಸ್ತಾನ 1 ಪಂದ್ಯದಲ್ಲಿ ಜಯಗಳಿಸಿದೆ. ಮೊದಲ ಪಂದ್ಯ ಟೈ ಆಗಿ ಬೌಲ್-ಔಟ್ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ಈವರೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡ ಕ್ರಿಕೆಟಿಗರಿವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.