ETV Bharat / sports

Tokyo Olympics: 4ನೇ ದಿನ ಪದಕ ಬೇಟೆಗಿಳಿಯುವ ಭಾರತೀಯ ಅಥ್ಲೀಟ್​ಗಳು ಇವರೇ ನೋಡಿ..

author img

By

Published : Jul 25, 2021, 9:35 PM IST

ವಿಶ್ವದ 3 ನೇ ಕ್ರಮಾಂಕದ ಚೀನಾ ತೈಪೆ ಜೋಡಿ ಲಿ ಯಾಂಗ್ ಮತ್ತು ವಾಂಗ್ ಚಿ-ಲಿನ್ ವಿರುದ್ಧದ ರೋಮಾಂಚಕ ಗೆಲುವು ದಾಖಲಿಸಿರುವ ಸಾತ್ವಿಕ್​ ಮತ್ತು ಚಿರಾಗ್ ಸೋಮವಾರ ಮತ್ತೊಂದು ಕಠಿಣ ಸವಾಲು ಎದುರಿಸಲಿದ್ದಾರೆ. ವಿಶ್ವದ 10 ನೇ ಶ್ರೇಯಾಂಕದ ಭಾರತೀಯ ಜೋಡಿ ಇಂಡೋನೇಷ್ಯಾದ ಸವಾಲು ಎದುರಿಸಲಿದೆ.

ಜುಲೈ 26ರ ಭಾರತೀಯರ ವೇಳಾಪಟ್ಟಿ
ಜುಲೈ 26ರ ಭಾರತೀಯರ ವೇಳಾಪಟ್ಟಿ

ಹೈದರಾಬಾದ್: ಟೋಕಿಯೊ ಒಲಿಂಪಿಕ್ಸ್‌ನ ಮೂರನೇ ದಿನ ಭಾರತ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಪದಕ ಪಡೆಯುವ ಭಾರಿ ಭರವಸೆ ಮೂಡಿಸಿದ್ದ ಖ್ಯಾತ ಶೂಟರ್​ಗಳಾದ ಮನು ಭಾಕರ್, ದಿವ್ಯಾನ್ಶ್ ಸಿಂಗ್ ಪನ್ವಾರ್, ಯಶಸ್ವಿನಿ ದೇಸ್ವಾಲ್ ಮತ್ತು ದೀಪಕ್ ಕುಮಾರ್ ಪದವಿರಲಿ ಫೈನಲ್​ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸದ್ಯಕ್ಕೆ ಮೀರಾಬಾಯಿ ಚನು ಪಡೆದಿರುವ ಬೆಳ್ಳಿ ಪದಕ ಭಾರತದ ಪಾಲಿನ ಏಕೈಕ ಪದಕವಾಗಿದೆ.

ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾ ವಿರುದ್ಧ 7-1 ಗೋಲುಗಳಿಂದ ಹೀನಾಯ ಸೋಲನುಭವಿಸಿದೆ. ಆದರೆ, ಮೇರಿ ಕೋಮ್ ಮತ್ತು ಮನಿಕಾ ಬಾತ್ರಾ ಅವರ ಇಂದಿನ ಗೆಲುವುಗಳು ಮತ್ತು ರೋವರ್‌ಗಳಾದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವುದು ಭಾರತ ಭಾನುವಾರ ಪಡೆದ ಸಂಭ್ರಮದ ಕ್ಷಣಗಳಾಗಿವೆ.

ಆದರೆ 2020ರ ಟೋಕಿಯೊ ಒಲಿಂಪಿಕ್ಸ್‌ನ ನಾಲ್ಕನೇ ದಿನವಾದ ಜುಲೈ 26 ರಂದು ಕೆಲವು ಇವೆಂಟ್​ಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ. ಇವರಲ್ಲಿ ಗಮನಹರಿಸಬೇಕಾದ ಕ್ರೀಡಾಪಟುಗಳು ಮತ್ತು ತಂಡದ ಮಾಹಿತಿ ಇಲ್ಲಿದೆ.

ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ - ಬ್ಯಾಡ್ಮಿಂಟನ್

ವಿಶ್ವದ 3 ನೇ ಕ್ರಮಾಂಕದ ಚೀನಾ ತೈಪೆ ಜೋಡಿ ಲಿ ಯಾಂಗ್ ಮತ್ತು ವಾಂಗ್ ಚಿ-ಲಿನ್ ವಿರುದ್ಧದ ರೋಮಾಂಚಕ ಗೆಲುವಿನ ದಾಖಲಿಸಿರುವ ಸಾತ್ವಿಕ್​ ಮತ್ತು ಚಿರಾಗ್ ಸೋಮವಾರ ಮತ್ತೊಂದು ಕಠಿಣ ಸವಾಲನ್ನು ಎದುರಿಸಲಿದ್ದಾರೆ. ವಿಶ್ವದ 10 ನೇ ಶ್ರೇಯಾಂಕದ ಭಾರತೀಯ ಜೋಡಿ ಇಂಡೋನೇಷ್ಯಾದ ಸವಾಲನ್ನು ಎದುರಿಸಲಿದೆ.

ಸುತೀರ್ಥ ಮುಖರ್ಜಿ - ಟೇಬಲ್ ಟೆನಿಸ್

ತಮ್ಮ ಚೊಚ್ಚಲ ಒಲಿಂಪಿಕ್ ಪಂದ್ಯದಲ್ಲಿ ಏಳು ಗೇಮ್​ಗಳ ರೋಚಕ ಸ್ಪರ್ಧೆಯಲ್ಲಿ ಸ್ವೀಡನ್‌ನ 80 ನೇ ಶ್ರೇಯಾಂಕದ ಲಿಂಡಾ ಬರ್ಗ್​ಸ್ಟಾರ್ಮ್​ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದಾರೆ. ಅವರು ಸೋಮವಾರ 55 ನೇ ಸ್ಥಾನದಲ್ಲಿರುವ ಪೋರ್ಚುಗಲ್‌ನ ಚೀನಾ ಮೂಲದ ಪ್ಯಾಡ್ಲರ್ ಫೂ ಯು ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಮನಿಕಾ ಬಾತ್ರಾ - ಟೇಬಲ್ ಟೆನಿಸ್

ಭಾರತೀಯ ಸ್ಟಾರ್​ ಟೇಬಲ್ ಟೆನಿಸ್‌ ಆಟಗಾರ್ತಿ ಮನಿಕಾ ಬಾತ್ರಾ ಒಲಿಂಪಿಕ್ಸ್​ನಲ್ಲಿ ಉತ್ತಮ ರೂಪ ಪಡೆದುಕೊಂಡಿದ್ದಾರೆ. ಅವರು ಭಾನುವಾರ ವಿಶ್ವದ 32 ನೇ ಕ್ರಮಾಂಕದ ಉಕ್ರೇನ್‌ನ ಮಾರ್ಗರಿಟಾ ಪೆಸೊಟ್ಸ್ಕಾ ಅವರನ್ನು 4-3ರಿಂದ ಹಾಗೂ ಮೊದಲ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌ನ ಟಿನ್-ಟಿನ್ ಹೋ ವಿರುದ್ಧ 4-0 ಅಂತರದಿಂದ ಗೆಲವು ಸಾಧಿಸಿದ್ದರು.

63 ನೇ ಶ್ರೇಯಾಂಕದ ಭಾರತೀಯ ಪ್ಯಾಡ್ಲರ್, ಮೂರನೇ ಸುತ್ತಿನಲ್ಲಿ ಆಸ್ಟ್ರೀಯಾದ ವಿಶ್ವದ 16 ನೇ ಕ್ರಮಾಂಕದ ಸೋಫಿಯಾ ಪೋಲ್ಕನೋವಾ ವಿರುದ್ಧ ಕಠಿಣ ಸವಾಲನ್ನು ಎದುರಿಸಬೇಕಾಗಿದೆ.

ಅಂಗದ್ ವೀರ್ ಸಿಂಗ್ ಬಜ್ವಾ - ಶೂಟಿಂಗ್

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಸ್ಕೀಟ್ ಕ್ವಾಲಿಫೈಯರ್​ನಲ್ಲಿ ಮೊದಲ 3 ಸಿರೀಸ್​ನಲ್ಲಿ 73 ಅಂಕ ಪಡೆದು 11ನೇ ಸ್ಥಾನದಲ್ಲಿರುವ ಅಂಗದ್ ವೀರ್ ಸಿಂಗ್ ಬಜ್ವಾ ಸೋಮವಾರ ನಡೆಯಲಿರುವ ಎರಡು ಸಿರೀಸ್​ನಲ್ಲಿ ತಮ್ಮ ಗುರಿಯನ್ನು ಮುಂದುವರಿಸಲಿದ್ದಾರೆ. ಈ ವಿಭಾಗದಲ್ಲಿ ಕೇವಲ 6 ಮಂದಿಗೆ ಮಾತ್ರ ಫೈನಲ್​ಗೆ ಅವಕಾಶವಿದ್ದು, 11ರಲ್ಲಿರುವ ಅಂಗದ್​ ಫೈನಲ್​ ಪ್ರವೇಶಿಸುವರೆ ಎಂಬು ಕೂತೂಹಲವಿದೆ.

ಪುರುಷರ ಅರ್ಚರಿ ತಂಡ

ಅತನು ದಾಸ್, ಪ್ರವೀಣ್ ಜಾಧವ್, ತರುಣದೀಪ್ ರಾಯ್ ಅವರನ್ನೊಳಗೊಂಡ ಭಾರತೀಯ ಪುರುಷರ ತಂಡ ಸೋಮವಾರ ಕಣಕ್ಕಿಳಿಯಲಿದ್ದಾರೆ. ಪ್ರಸ್ತುತ ವಿಶ್ವದ 9 ನೇ ಸ್ಥಾನದಲ್ಲಿರುವ ಭಾರತೀಯ ತಂಡವು ಶ್ರೇಯಾಂಕದ ಸ್ಪರ್ಧೆಯಲ್ಲಿ ನೀಡಿದ ಕಳಪೆ ಸಾಧನೆಯಿಂದಾಗಿ ಕೆಳ ಕ್ರಮಾಂಕದಲ್ಲಿ ಸ್ಥಾನ ಪಡೆದಿದೆ.

ಇದೀಗ ನಾಲ್ಕನೇ ದಿನದ ಒಲಿಂಪಿಕ್ಸ್ ಕೂಟದಲ್ಲಿ ಅವರು 32 ರ ಸುತ್ತಿಗೆ ಪ್ರವೇಶಿಸಬಹುದೇ ಎಂದು ಕಾದು ನೋಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.