ETV Bharat / sports

ಆರ್​ಸಿಬಿ ಸೇರಿದ ಟಿಮ್ ಡೇವಿಡ್​.. ಐಪಿಎಲ್​ನಲ್ಲಿ ಆಡಲಿರುವ ಸಿಂಗಾಪುರ್​ನ ಮೊದಲ ಕ್ರಿಕೆಟಿಗ.. - ಆರ್​ಸಿಬಿ ಸೇರಿದ ಟಿಮ್ ಡೇವಿಡ್

25 ವರ್ಷದ ಯುವ ಆಟಗಾರ ಸಿಂಗಾಪುರ್​ ತಂಡದ ಪರ 14 ಟಿ20 ಪಂದ್ಯಗಳನ್ನ ಆಡಿದ್ದಾರೆ. ಅವರು 4 ಅರ್ಧಶತಕದ ಸಹಿತ 558 ರನ್​ ಸಿಡಿಸಿದ್ದಾರೆ. ಇದೀಗ ವಿಶ್ವದ ಶ್ರೀಮಂತ ಟಿ20 ಲೀಗ್​ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ದ್ವಿತೀಯ ಹಂತದಲ್ಲೂ ಅವಕಾಶ ಪಡೆಯುವ ಮೂಲಕ ವಿಶೇಷ ದಾಖಲೆಗೆ ಪಾತ್ರರಾಗಲಿದ್ದಾರೆ..

first Singapore international cricketer to play in IPL
ಟಿಮ್​ ಡೇವಿಡ್​
author img

By

Published : Aug 22, 2021, 3:57 PM IST

ನವದೆಹಲಿ : ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯಾರ್ಧದ ಐಪಿಎಲ್​ಗೆ ಬದಲಿ ಆಟಗಾರರನ್ನು ಘೋಷಿಸಿದೆ. ವಿಶೇಷವೆಂದರೆ ಈ ಬಾರಿ ತಂಡ ಸೇರಿರುವ ಆಟಗಾರರಲ್ಲಿ ಸಿಂಗಾಪುರ್​ನ ಟಿಮ್ ಡೇವಿಡ್​ ಮೊದಲ ಆಟಗಾರನಾಗಿ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ನ್ಯೂಜಿಲ್ಯಾಂಡ್​ನ ಯುವ ಆಟಗಾರ ಫಿನ್ ಅಲೆನ್ ದ್ವಿತೀಯಾರ್ಧದ ಐಪಿಎಲ್​ಗೆ ಅಲಭ್ಯರಾಗುತ್ತಿರುವ ಕಾರಣ ಡೇವಿಡ್​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರು ಈಗಾಗಲೇ ಬಿಬಿಎಲ್, ಪಿಎಸ್​ಎಲ್, ಟಿ20 ಬ್ಲಾಸ್ಟ್​ ಮತ್ತು ಸಿಪಿಎಲ್​ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

25 ವರ್ಷದ ಯುವ ಆಟಗಾರ ಸಿಂಗಾಪುರ್​ ತಂಡದ ಪರ 14 ಟಿ20 ಪಂದ್ಯಗಳನ್ನ ಆಡಿದ್ದಾರೆ. ಅವರು 4 ಅರ್ಧಶತಕದ ಸಹಿತ 558 ರನ್​ ಸಿಡಿಸಿದ್ದಾರೆ. ಇದೀಗ ವಿಶ್ವದ ಶ್ರೀಮಂತ ಟಿ20 ಲೀಗ್​ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ದ್ವಿತೀಯ ಹಂತದಲ್ಲೂ ಅವಕಾಶ ಪಡೆಯುವ ಮೂಲಕ ವಿಶೇಷ ದಾಖಲೆಗೆ ಪಾತ್ರರಾಗಲಿದ್ದಾರೆ.

ಅವರು ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಸಿಂಗಾಪುರ್‌ನ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟರ್ ಆಗಿ ಡೇವಿಡ್ ಗುರುತಿಸಿಕೊಳ್ಳಲಿದ್ದಾರೆ. ಇನ್ನು, ಟಿ20 ಕ್ರಿಕೆಟ್​ನಲ್ಲಿ 50 ಟಿ20 ಪಂದ್ಯಗಳನ್ನಾಡಿದ್ದು, 6 ಅರ್ಧಶತಕಗಳ ಸಹಿತ 155.84ರ ಸ್ಟ್ರೈಕ್​ರೇಟ್​ನಲ್ಲಿ 1186 ರನ್​ಗಳಿಸಿದ್ದಾರೆ.

ಇದನ್ನು ಓದಿ:ಆರ್​ಸಿಬಿಗೆ ಆನೆಬಲ.. ಹಸರಂಗ ಸೇರಿದಂತೆ ಬೆಂಗಳೂರು ತಂಡಕ್ಕೆ ಮೂವರ ಸೇರ್ಪಡೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.