ನವದೆಹಲಿ : ಇಂದಿನಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಾದ ಬಳಿಕ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ -20 ಸರಣಿ ನಡೆಯಲಿದೆ. ಈ ಟೂರ್ನಿ ಆಗಸ್ಟ್ 3 ರಿಂದ ಆರಂಭವಾಗಲಿದೆ. ಇದಕ್ಕಾಗಿ ಭಾರತ ತಂಡದ ಆಟಗಾರರು ಕೂಡ ಸಜ್ಜಾಗಿದ್ದಾರೆ. ಈ ನಡುವೆ ಟಿ - 20 ಸರಣಿಯಲ್ಲಿ ಕಣಕ್ಕಿಳಿಯುವ ಉತ್ಸಾಹದಲ್ಲಿ ಯುವ ಬ್ಯಾಟ್ಸ್ ಮನ್ ತಿಲಕ್ ವರ್ಮಾ ಅವರು ಜುಲೈ 27 ರಂದು ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.
-
Tilak Varma on the way to West Indies.
— Johns. (@CricCrazyJohns) July 27, 2023 " class="align-text-top noRightClick twitterSection" data="
He is part of T20I's, all the best Tilak. pic.twitter.com/fasZ2LAmf8
">Tilak Varma on the way to West Indies.
— Johns. (@CricCrazyJohns) July 27, 2023
He is part of T20I's, all the best Tilak. pic.twitter.com/fasZ2LAmf8Tilak Varma on the way to West Indies.
— Johns. (@CricCrazyJohns) July 27, 2023
He is part of T20I's, all the best Tilak. pic.twitter.com/fasZ2LAmf8
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ 20 ವರ್ಷದ ಎಡಗೈ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಕಳೆದ ಎರಡು ವರ್ಷಗಳಿಂದ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ತಿಲಕ್‌ಗೆ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಅವಕಾಶ ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಸುವರ್ಣ ಅವಕಾಶ ಸಿಕ್ಕಂತೆ ಆಗುತ್ತದೆ. ಈವರೆಗೆ ಐಪಿಎಲ್‌ನಲ್ಲಿ ತಿಲಕ್ 25 ಪಂದ್ಯಗಳನ್ನಾಡಿದ್ದು, 38.95 ರ ಸರಾಸರಿಯಲ್ಲಿ 740 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಕೂಡ ದಾಖಲಾಗಿವೆ.
ಟ್ರಿನಿಡಾಡ್‌ನಲ್ಲಿ ಆಗಸ್ಟ್ 3ರಿಂದ ಆರಂಭವಾಗಲಿರುವ ಟಿ-20 ಸರಣಿಯಿಂದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ತಂಡದಿಂದ ಹೊರಗುಳಿದಿದ್ದಾರೆ. ಅದಕ್ಕಾಗಿ ಐಪಿಎಲ್ ನಲ್ಲಿ ಯಶಸ್ವಿ ನಾಯಕನಾಗಿ ಗುಜರಾತ್ ಟೈಟಾನ್ಸ್ ಒಂದು ಬಾರಿ ಫೈನಲ್ಗೆ ಕರೆದುಕೊಂಡ ಹೋದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಹಾಗೂ ತಂಡದಲ್ಲಿ ಬಹುತೇಕ ಯುವ ಆಟಗಾರರಿದ್ದು, ತಿಲಕ್ ವರ್ಮಾ ಒಬ್ಬರು.
ಇದನ್ನೂ ಓದಿ : ವಿರಾಟ್ ಪ್ಲೇಸ್ನಲ್ಲಿ ಆಡಿ ಟೆಸ್ಟ್ನಲ್ಲಿ ವೇಗದ ಫಿಫ್ಟಿ ಬಾರಿಸಿದ ಇಶಾನ್ ಕಿಶನ್, 4ನೇ ಕ್ರಮಾಂಕಕ್ಕೆ ಸೂಚಿಸಿದ್ದು ಯಾರು ಗೊತ್ತಾ?
ಎಲ್ಲಾ ಯುವ ಆಟಗಾರಿಗೆ ಈ ಸರಣಿಯೂ ತಮ್ಮ ಸಾರ್ಮಥ್ಯವನ್ನು ಪ್ರರ್ದಶನ ಮಾಡಲು ಹಾಗೂ ಮುಂಬರುವ ಅನೇಕ ಸರಣಿಗಳಲ್ಲಿ ಭಾರತದ ಪರ ಆಡುವ ಅವಕಾಶ ಪಡೆಯುವ ಜೊತೆಗೆ ಟಿ-20 ವಿಶ್ವಕಪ್ ತಂಡದಲ್ಲೂ ಸ್ಥಾನ ಗಿಟ್ಟಿಕೊಳ್ಳಲು ಉತ್ತಮ ವೇದಿಕೆ ಆಗಿದೆ. ಆದರೆ ತಿಲಕ್ ಅವರಿಗೆ 11ರ ಬಳಗದಲ್ಲಿ ಸ್ಥಾನ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ಭಾರತದ ಟಿ-20 ತಂಡ ಇಂತಿದೆ : ಇಶಾನ್ ಕಿಶನ್ (ವಿಕೀ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೀ), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್ , ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.
ಇದನ್ನೂ ಓದಿ : 'ಸದ್ಯ ಭಾರತ ತಂಡ ಉತ್ತಮ ಸ್ಥಿತಿಯಲ್ಲಿದೆ'.. ಆಟಗಾರರ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ