ಲಾರ್ಡ್ಸ್ (ಲಂಡನ್): ಆ್ಯಶಸ್ ಲಾರ್ಡ್ಸ್ ಟೆಸ್ಟ್ನ ಐದನೇ ದಿನ ಹಲವಾರು ವಿವಾದಗಳಿಗೆ ಕಾರಣವಾಯಿತು. ಈ ನಡುವೆಯೂ ಆಸ್ಟ್ರೇಲಿಯಾ 43 ರನ್ನಿಂದ ಎರಡನೇ ಆ್ಯಶಸ್ ಪಂದ್ಯವನ್ನು ಗೆದ್ದು, ಇಂಗ್ಲೆಂಡ್ ನೆಲದಲ್ಲಿ ಹ್ಯಾಟ್ರಿಕ್ ಜಯ ಬರೆಯಿತು.
ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯನ್ ಆಟಗಾರರ ನಡುವೆ ವಾದ-ವಿವಾದಗಳು, ಜೊತೆಗೆ ಸ್ಲೆಡ್ಜಿಂಗ್ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಎಂಸಿಸಿಯ ಸದಸ್ಯರು ಆಸ್ಟ್ರೇಲಿಯಾದ ಆಟಗಾರರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಇದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಆಸಿಸ್ ಆಟಗಾರರ ಬಳಿ ಕ್ಷಮೆಯನ್ನು ಕೇಳಿದೆ. ಅಲ್ಲದೇ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ನ ಮೂವರು ಸದಸ್ಯರನ್ನು ಅಮಾನತುಗೊಳಿಸಿದೆ.
-
🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023 " class="align-text-top noRightClick twitterSection" data="
">🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023
ಐದನೇ ದಿನದಾಟದ ಭೋಜನ ವಿರಾಮದ ವೇಳೆದ ಡ್ರೆಸ್ಸಿಂಗ್ ರೂಮ್ಗೆ ಆಸ್ಟ್ರೇಲಿಯನ್ ಆಟಗಾರರು ಮರಳುವಾಗ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ನ ಸದಸ್ಯ ಪ್ರೇಕ್ಷಕರು ಉಸ್ಮಾನ್ ಖವಾಜಾ ಅವರನ್ನು ನಿಂದಿಸಿದ್ದಾರೆ. ಈ ವೇಳೆ ಖವಾಜಾ ಸಹ ಪ್ರತಿಕ್ರಿಯಿಸಿದ್ದಾರೆ. ನಂತರ ಅಲ್ಲಿ ಇದ್ದ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ವಿವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರೇಕ್ಷಕರು ಆಸ್ಟ್ರೇಲಿಯಾದ ಆಟಗಾರರ ವಿರುದ್ಧ ಜಗಳ ಮಾಡಲು ಪ್ರಮುಖ ಕಾರಣ ಎಂದರೆ ಜಾನಿ ಬೈರ್‌ಸ್ಟೋವ್ ಅವರ ವಿವಾದಾತ್ಮಕ ರನ್ ಔಟ್. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನ 52 ನೇ ಓವರ್ ಆಡುವಾಗ ಕ್ಯಾಮರೂನ್ ಗ್ರೀನ್ ಬೌಲಿಂಗ್ನಲ್ಲಿ ಬಾಲ್ ಬೈರ್‌ಸ್ಟೋವ್ ಎಡ ಭಾಗದಿಂದ ಬೌನ್ಸರ್ ಆದ ಬಾಲ್ ಡಕ್ ಆಗುವ ಮೂಲಕ ಕೀಪರ್ ಅಲೆಕ್ಸ್ ಕ್ಯಾರಿ ಅವರ ಗ್ಲೌಸ್ ಸೇರಿತು.
ಓವರ್ನ ಕೊನೆಯ ಬಾಲ್ ಆದ ಕಾರಣ ಜಾನಿ ಬೈರ್‌ಸ್ಟೋವ್ ನಾನ್-ಸ್ಟ್ರೈಕರ್ನಲ್ಲಿದ್ದ ಬೆನ್ ಸ್ಟೋಕ್ ಜೊತೆ ಮಾತನಾಡಲು ತಮ್ಮ ಕ್ರೀಸ್ ಬಿಟ್ಟು ಪಿಚ್ನಲ್ಲೇ ಮುಂದೆ ನಡೆದರು. ಈ ಸಮಯದಲ್ಲಿ ಆಸಿಸ್ ಕೀಪರ್ ತನ್ನ ಕೈಯಲ್ಲಿದ್ದ ಬಾಲ್ನ್ನು ನೆರ ವಿಕೆಟ್ ಎಸೆಯುತ್ತಾರೆ. ಇದನ್ನು ಮೂರನೇ ಅಂಪೈರ್ ಔಟ್ ಎಂದು ಹೇಳುತ್ತಾರೆ. ಇದು ಇಂಗ್ಲೆಂಡ್ ಪಾಳಯದಲ್ಲಿ ಚರ್ಚೆಗೆ ಕಾರಣವಾಯಿತು.
-
Usman Khawaja was pulled back by security after speaking to one the members inside the long room 😳
— Sky Sports Cricket (@SkyCricket) July 2, 2023 " class="align-text-top noRightClick twitterSection" data="
🗣️ "I've NEVER seen scenes like that!" pic.twitter.com/2RnjiNssfw
">Usman Khawaja was pulled back by security after speaking to one the members inside the long room 😳
— Sky Sports Cricket (@SkyCricket) July 2, 2023
🗣️ "I've NEVER seen scenes like that!" pic.twitter.com/2RnjiNssfwUsman Khawaja was pulled back by security after speaking to one the members inside the long room 😳
— Sky Sports Cricket (@SkyCricket) July 2, 2023
🗣️ "I've NEVER seen scenes like that!" pic.twitter.com/2RnjiNssfw
ಈ ವಿಕೆಟ್ ಬಗ್ಗೆ ಸ್ವತಃ ಕೋಚ್ ಮೆಕಲಮ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನಿಯಮದಂತೆ ಕ್ರೀಸ್ ಬಿಡುವ ಮುನ್ನ ಅಂಪೈರ್ ಓವರ್ ಮುಗಿದಿದೆ ಎಂದು ಹೇಳಬೇಕು ಅಥವಾ ಆನ್ಫೀಲ್ಡ್ ಅಂಪೈರ್ಗೆ ಬ್ಯಾಟರ್ ಕ್ರೀಸ್ ಬಿಡುವ ಬಗ್ಗೆ ಸೂಚಿಸಬೇಕು ಎಂದಿದೆ. ಇದೆರಡೂ ಆಗದಿದ್ದ ಕಾರಣ ಇದನ್ನು ಔಟ್ ಎಂದು ಕರೆಯಲಾಗಿದೆ ಎಂಬ ಸ್ಪಷ್ಟನೆಗಳೂ ಈ ವಿಕೆಟ್ ಬಗ್ಗೆ ಇದೆ.
ಈ ಘಟನೆಯ ನಂತರ ಆಸ್ಟ್ರೇಲಿಯನ್ ಆಟಗಾರರ ಮೇಲೆ ನಿಂದನೆ ಮಾಡಲಾಯಿತು. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆ ಮಾಡಬೇಕು ಎಂದ ನಂತರ ಎಂಸಿಸಿ "ಹಿಂದಿನ ದಿನ ಆಸ್ಟ್ರೇಲಿಯನ್ ಆಟಗಾರರ ಜೊತೆ ಅನುಚಿತವಾಗಿ ನಡೆದುಕೊಂಡ ಮೂವರು ಸದಸ್ಯರನ್ನು ಅಮಾನತು ಗೊಳಿಸಲಾಗಿದೆ" ಎಂದು ಖಚಿತಪಡಿಸುತ್ತದೆ.
ಇದನ್ನೂ ಓದಿ: Ashes Test : ಬೆನ್ ಸ್ಟೋಕ್ಸ್ ಶತಕ ವ್ಯರ್ಥ.. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 43 ರನ್ಗಳ ಜಯ