ETV Bharat / sports

3ನೇ ಟೆಸ್ಟ್ ಭೋಜನ ವಿರಾಮಕ್ಕೆ ಇಂಗ್ಲೆಂಡ್ 182ಕ್ಕೆ2 ​: 104 ರನ್​ಗಳ ಮುನ್ನಡೆ ಸಾಧಿಸಿದ ಆಂಗ್ಲರು​

author img

By

Published : Aug 26, 2021, 6:17 PM IST

ಗುರುವಾರ 2ನೇ ದಿನ ಬ್ಯಾಟಿಂಗ್ ಮುಂದುವರಿಸಿದ ಅವರಿಬ್ಬರು ಕೇವಲ 15 ರನ್​ಗಳ ಅಂತರದಲ್ಲಿ ವಿಕೆಟ್​ ಒಪ್ಪಿಸಿದರು. 153 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 61 ರನ್​ಗಳಿಸಿದ್ದ ಬರ್ನ್ಸ್​ ಶಮಿ ಬೌಲಿಂಗ್​ನಲ್ಲಿ ಬೌಲ್ಡ್ ಆದರೆ, 195 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 68 ರನ್​ಗಳಿಸಿದ್ದ ಹಮೀದ್​ ಜಡೇಜಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

England reach 182-2 at lunch on day 2
ಭಾರತ ಇಂಗ್ಲೆಂಡ್ ಟೆಸ್ಟ್​

ಲೀಡ್ಸ್: ಭಾರತದ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ 104 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಭೋಜನ ವಿರಾಮಕ್ಕೆ ಮುನ್ನ 2 ವಿಕೆಟ್ ಕಳೆದುಕೊಂಡು 182 ರನ್​ಗಳಿಸಿದೆ.

ಲೀಡ್​ನ ಹೆಡಿಂಗ್ಲೆಯಲ್ಲಿ ಟಾಸ್​​ ಗೆದ್ದ ಬ್ಯಾಟಿಂಗ್ ಮಾಡಿದ್ದ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 78 ರನ್​ಗಳಿಗೆ ಆಲೌಟ್ ಆಗಿತ್ತು. ನಂತರ ಇಂಗ್ಲೆಂಡ್​ ಮೊದಲ ದಿನದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 120 ರನ್​ಗಳಿಸಿತ್ತು. ರೋರಿ ಬರ್ನ್ಸ್ ಅಜೇಯ 52 ರನ್ ಮತ್ತು ಹಸೀಬ್ ಹಮೀದ್ ಅಜೇಯ 60 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಗುರುವಾರ 2ನೇ ದಿನ ಬ್ಯಾಟಿಂಗ್ ಮುಂದುವರಿಸಿದ ಅವರಿಬ್ಬರು ಕೇವಲ 15 ರನ್​ಗಳ ಅಂತರದಲ್ಲಿ ವಿಕೆಟ್​ ಒಪ್ಪಿಸಿದರು. 153 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 61 ರನ್​ಗಳಿಸಿದ್ದ ಬರ್ನ್ಸ್​ ಶಮಿ ಬೌಲಿಂಗ್​ನಲ್ಲಿ ಬೌಲ್ಡ್ ಆದರೆ, 195 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 68 ರನ್​ಗಳಿಸಿದ್ದ ಹಮೀದ್​ ಜಡೇಜಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

ಪ್ರಸ್ತುತ ಡೇವಿಡ್ ಮಲನ್​ 27 ಮತ್ತು ನಾಯಕ ಜೋ ರೂಟ್​ 14 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇದಕ್ಕು ಮೊದಲ ದಿನ ಪ್ರಚಂಡ ಬೌಲಿಂಗ್ ಪ್ರದರ್ಶನ ತೋರಿದ್ದ ಇಂಗ್ಲೆಂಡ್ ಬೌಲರ್ಸ್ ಭಾರತವನ್ನು ಕೇವಲ 78 ಕ್ಕೆ ಕಟ್ಟಿಹಾಕಿದ್ದರು. ಜೇಮ್ಸ್​ ಆ್ಯಂಡರ್ಸನ್ 6ಕ್ಕೆ3, ಆಲ್ಲಿ ರಾಬಿನ್​ಸನ್​ 16ಕ್ಕೆ2, ಸ್ಯಾಮ್ ಕರ್ರನ್ 23ಕ್ಕೆ2, ಕ್ರೇಗ್ ಓವರ್​ಟರ್ನ್​ 14ಕ್ಕೆ 3 ವಿಕೆಟ್​ ಪಡೆದು ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ರೋಹಿತ್ ಶರ್ಮಾ(19) ಮತ್ತು ರಹಾನೆ (18) ಮಾತ್ರ ಎರಡಂಕಿ ಮೊತ್ತ ದಾಖಲಿಸಿದ್ದರು.

ಇದನ್ನು ಓದಿ:ಪಿಚ್​ ಮೃದುವಾಗಿದ್ದು, ಬೇಗ ಸೀಮರ್​​ಗಳಿಗೆ ನೆರವಾಯಿತು:ರಿಷಭ್ ಪಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.