ETV Bharat / sports

ವಿಲಿಯಮ್ಸ್​ ನೇತೃತ್ವದ ಈ ತಂಡ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ಅತ್ಯುತ್ತಮವಾದದ್ದು: ಹ್ಯಾಡ್ಲಿ ಮೆಚ್ಚುಗೆ - ಸರ್ ರಿಚರ್ಡ್​ ಹ್ಯಾಡ್ಲಿ ಮೆಚ್ಚುಗೆ

ಎರಡು ವರ್ಷಗಳ ಕಾಲ ನಡೆದ ಈ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್​ ತಂಡ ಅದ್ಭುತ ಪ್ರದರ್ಶನ ತೋರಿದೆ ಎಂದು ಹ್ಯಾಡ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತವನ್ನು 8 ವಿಕೆಟ್​ಗಳಿಂದ ಮಣಿಸಿ ಚೊಚ್ಚಲ ಐಸಿಸಿ ಟೈಟಲ್​ ಪಡೆದುಕೊಂಡಿದ್ದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್
ವಿಶ್ವ ಟೆಸ್ಟ್​ ಚಾಂಪಿಯನ್
author img

By

Published : Jun 24, 2021, 3:41 PM IST

ವೆಲ್ಲಿಂಗ್ಟನ್: ಭಾರತ ತಂಡವನ್ನು ಮಣಿಸಿ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಗೆದ್ದ ಇತಿಹಾಸ ಬರೆದಿರುವ ವಿಲಿಯಮ್ಸನ್​ ನೇತೃತ್ವದ ತಂಡವನ್ನು ನ್ಯೂಜಿಲ್ಯಾಂಡ್ ಕ್ರಿಕೆಟ್​ ಇತಿಹಾಸದದಲ್ಲಿ ಅತ್ಯಂತ ಶ್ರೇಷ್ಠ ಪಡೆ ಎಂದು ಸರ್​ ರಿಚರ್ಡ್​ ಹ್ಯಾಡ್ಲಿ ವರ್ಣಿಸಿದ್ದಾರೆ.

ಎರಡು ವರ್ಷಗಳ ಕಾಲ ನಡೆದ ಈ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್​ ತಂಡ ಅದ್ಭುತ ಪ್ರದರ್ಶನ ತೋರಿದೆ ಎಂದು ಬುಧವಾರ ಭಾರತವನ್ನು 8 ವಿಕೆಟ್​ಗಳಿಂದ ಮಣಿಸಿ ಚೊಚ್ಚಲ ಐಸಿಸಿ ಟೈಟಲ್​​ ಪಡೆದ ನಂತರ ಹ್ಯಾಡ್ಲೀ ತಮ್ಮ ದೇಶದ ತಂಡದ ಬಗ್ಗೆ ಐಸಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

" ನ್ಯೂಜಿಲ್ಯಾಂಡ್ ಕ್ರಿಕೆಟ್​ ಇತಿಹಾಸದಲ್ಲಿ ಈ ದಿನ ಅತ್ಯಂತ ವಿಶೇಷವಾದದ್ದು. ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿರುವ ಸಾಧನೆಯನ್ನು ಆಚರಿಸುವ ದಿನ. ಪಂದ್ಯದುದ್ದಕ್ಕೂ ಹಲವು ಟ್ವಿಸ್ಟ್​ ಮತ್ತು ಟರ್ನಿಂಗ್​ ಪಡೆಯುವ ಮೂಲಕ ಈ ಪಂದ್ಯ ರೋಮಾಂಚನಕಾರಿಯಾಗಿತ್ತು. ಅತ್ಯುತ್ತಮ ಭಾರತ ತಂಡದೆದುರು ಬ್ಲಾಕ್​ಕ್ಯಾಪ್ಸ್​ನ ಪ್ರಾಬಲ್ಯಯುತ ಪ್ರದರ್ಶನ. ಕೆಲವು ವರ್ಷಗಳಿಂದ ಎನ್​ಜಿಸಿ ಉತ್ತಮ ಆಟಗಾರರ ಆಳವಾದ ತಂಡವನ್ನು ಕಟ್ಟಿದೆ. ಇದು ವಿಶ್ವದಲ್ಲೇ ಅತ್ಯಂತ ಹೆಚ್ಚು ಸ್ಪರ್ಧಾತ್ಮಕ ತಂಡವಾಗಲು ನೆರವಾಗಿದೆ" ಎಂದು ಹ್ಯಾಡ್ಲಿ ತಿಳಿಸಿದ್ದಾರೆ.

ಪ್ರಸ್ತುತ ಈ ತಂಡ ನಮ್ಮ (ನ್ಯೂಜಿಲ್ಯಾಂಡ್)​ ಇತಿಹಾಸದಲ್ಲೇ ಅತ್ಯುತ್ತಮ ತಂಡ ಎಂದು ಹೇಳುವುದಕ್ಕೆ ನ್ಯಾಯೋಚಿತವಾಗಿದೆ ಎಂದು ಟೆಸ್ಟ್​ ಕ್ರಿಕೆಟ್​ನಲ್ಲಿ 400 ವಿಕೆಟ್​ ಪಡೆದ ಮೊದಲ ವೇಗಿಯಾಗಿರುವ ಹ್ಯಾಡ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಭಾರತದ ಸೋಲಿಗೆ ಅವರಿಬ್ಬರನ್ನು ಬೇಗ ಕಳೆದುಕೊಂಡಿದ್ದೇ ಕಾರಣ: ಸಚಿನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.