ETV Bharat / sports

ಗ್ರೇಮ್ ಸ್ಮಿತ್, ಧೋನಿ ನಾಯಕತ್ವದಲ್ಲಿ ಆಡಿರುವುದಕ್ಕೆ ನಾನು ಅದೃಷ್ಟವಂತ: ಫಾಫ್​ ಡು ಪ್ಲೆಸಿಸ್​ - ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​

ದಕ್ಷಿಣ ಆಫ್ರಿಕಾದ ಸರ್ವಶ್ರೇಷ್ಠ ನಾಯಕನಾಗಿರುವ ಗ್ರೇಮ್ ಸ್ಮಿತ್​ ನಾಯಕತ್ವದಲ್ಲಿ ನಾನು ಬೆಳೆದಿದ್ದೇನೆ. ನಂತರ 10 ವರ್ಷಗಳ ಕಾಲ ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲಮಿಂಗ್ ಅಂತಹ ಅದ್ಭುತ ನಾಯಕರ ಜೊತೆಯಲ್ಲಿ ಕಳೆಯುವ ಅವಕಾಶ ಸಿಕ್ಕಿದ್ದ ನನ್ನ ಅದೃಷ್ಠ ಎಂದು ಪ್ಲೆಸಿಸ್​ ಹೇಳಿದ್ದಾರೆ.

There's similarity in MS and my captaincy style: Faf du Plessis
ಎಂಎಸ್ ಧೋನಿ - ಡುಪ್ಲೆಸಿಸ್​
author img

By

Published : Mar 13, 2022, 6:04 PM IST

ಬೆಂಗಳೂರು: 2022ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲು ಸಿದ್ಧರಾಗಿರುವ ಫಾಫ್​ ಡು ಪ್ಲೆಸಿಸ್​​ ನಾಯಕತ್ವದ ವಿಚಾರದಲ್ಲಿ ಕ್ಯಾಪ್ಟನ್ ​ಕೂಲ್​ ಧೋನಿ ಮತ್ತು ತಮ್ಮಲ್ಲಿ ಕೆಲವು ಸಾಮ್ಯತೆಗಳಿವೆ ಎಂದು ಹೇಳಿದ್ದಾರೆ.

ಶನಿವಾರ ದಕ್ಷಿಣ ಆಫ್ರಿಕಾದ 37 ವರ್ಷದ ಡುಪ್ಲೆಸಿಸ್​ರನ್ನು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2022ರ ಆವೃತ್ತಿಗೆ ನಾಯಕನನ್ನಾಗಿ ನೇಮಕ ಮಾಡಿದೆ. 2012ರಿಂದ 2021ರವರೆಗೆ ಪ್ಲೆಸಿಸ್​ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್​ಜೈಂಟ್ಸ್ ತಂಡದಲ್ಲಿ ಆಡಿದ್ದರು.

" ನನ್ನ ಕ್ರಿಕೆಟ್ ಪಯಣದಲ್ಲಿ ಕೆಲವು ಅದ್ಭುತ ನಾಯಕರ ಜೊತೆ ಕಳೆದಿರುವುದಕ್ಕೆ ನಾನು ಅದೃಷ್ಟವಂತ. ದಕ್ಷಿಣ ಆಫ್ರಿಕಾದ ಸರ್ವಶ್ರೇಷ್ಠ ನಾಯಕನಾಗಿರುವ ಗ್ರೇಮ್ ಸ್ಮಿತ್​ ನಾಯಕತ್ವದಲ್ಲಿ ನಾನು ಬೆಳೆದಿದ್ದೇನೆ. ನಂತರ 10 ವರ್ಷಗಳ ಕಾಲ ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲಮಿಂಗ್ ಅಂತಹ ಅದ್ಭುತ ನಾಯಕರ ಜೊತೆಯಲ್ಲಿದ್ದೆ. ಧೋನಿ ಮತ್ತು ನಾನು ತುಂಬಾ ಶಾಂತ ಮನಸ್ಥಿತಿಯನ್ನು ಉಳ್ಳವರಾಗಿದ್ದು, ಈ ವಿಚಾರದಲ್ಲಿ ಅವರ ಮತ್ತು ನನ್ನ ನಾಯಕತ್ವ ಶೈಲಿಯಲ್ಲಿ ಸಾಮ್ಯತೆ ಇದೆ ಎಂದು ನಾನು ಭಾವಿಸುತ್ತೇನೆ" ಎಂದು ನೂತನ ಆರ್​ಸಿಬಿ ನಾಯಕ ಹೇಳಿದ್ದಾರೆ.

ಆದರೆ ನಾನು ದಕ್ಷಣ ಆಫ್ರಿಕಾ ತಂಡವನ್ನು ನಿರ್ವಹಿಸಿದ ರೀತಿಗೂ ಧೋನಿ ನಾಯಕತ್ವಕ್ಕೂ ಸಂಪೂರ್ಣ ವಿರುದ್ಧವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

ತಮಾಷೆಯ ವಿಚಾರವೆಂದರೆ, ನಾನು ಚೆನ್ನೈ ತಂಡದಲ್ಲಿ ಆಡಲು ಶುರು ಮಾಡಿದಾಗ, ನಾಯಕತ್ವ ಮತ್ತು ಮುಂದಾಳುತನದ ವಿಚಾರದಲ್ಲಿ ನನ್ನದೇ ಆದ ಕಲ್ಪನೆ ಹೊಂದಿದ್ದೆ. ಆದರೆ ನಾನು ಆಲೋಚಿಸಿದ ರೀತಿಗೆ ಧೋನಿ ಸಂಪೂರ್ಣ ವಿಭಿನ್ನವಾಗಿದ್ದರು ಎಂದು 7 ಕೋಟಿ ರೂ.ಗಳಿಗೆ ಆರ್​ಸಿಬಿ ಸೇರಿರುವ ಡುಪ್ಲೆಸಿಸ್​ ತಿಳಿಸಿದ್ದಾರೆ.

ನಮ್ಮದೇ ಆದ ಶೈಲಿ ಮುಖ್ಯ

ಎಂಸ್​ ಧೋನಿ ನಾಯಕತ್ವ ನಿಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಪ್ಲೆಸಿಸ್​," ನಾನು ಇಲ್ಲಿಯವರೆಗೆ ಕಲಿತಿರುವುದೇನೆಂದರೆ, ಎಲ್ಲರೂ ವಿಭಿನ್ನ ಶೈಲಿಯನ್ನು ಹೊಂದಿರುತ್ತಾರೆ,ಆದರೆ ತಂಡವನ್ನು ಮುನ್ನಡೆಸುವಾಗ ನೀವು ನಿಮ್ಮದೇ ಆದ ಸ್ವಂತ ಶೈಲಿಯನ್ನು ಹೊಂದುವುದು ಅಗತ್ಯವಾಗಿದೆ. ಏಕೆಂದರೆ ನೀವು ಒತ್ತಡದಲ್ಲಿದ್ದಾಗ ಅದೇ ನಿಮ್ಮ ಮುಂದೆ ಬರುವ ವಿಷಯವಾಗಿದೆ. ಹಾಗಾಗಿ ನಾನು ಕೊಹ್ಲಿಯಂತಾಗಲು ಪ್ರಯತ್ನಿಸಲ್ಲ ಮತ್ತು ಧೋನಿಯಂತಾಗಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಧೋನಿ ಜೊತೆಗೆ ಆಡಿದ್ದರಿಂದ ನನ್ನ ನಾಯಕತ್ವದ ಬೆಳವಣಿಗೆಗೆ ಮತ್ತು ಪ್ರಬುದ್ಧತೆಯ ಬೆಳೆವಣಿಗೆಗೆ ತುಂಬಾ ನೆರವಾಗಿದೆ. ಅವರೊಬ್ಬ ಶ್ರೇಷ್ಠ ನಾಯಕ ಮತ್ತು ಟ್ರೋಫಿಗಳ ವಿಷಯದಲ್ಲಿ ಬಹುಶಃ ವಿಶ್ವದ ಅತ್ಯಂತ ಯಶಸ್ವಿ ನಾಯಕ. ಅವರ ಜೊತೆ ದಶಕದ ಕಾಲ ಪಯಣಿಸಿದ್ದು ನನ್ನ ಅದೃಷ್ಟ ಎಂದು ಆರ್​ಸಿಬಿ ನಾಯಕ ಹೇಳಿದ್ದಾರೆ.

ಇದನ್ನೂ ಓದಿ:ಹೊರಗಿನಿಂದ ಬಂದ ನನಗೆ ತಂಡದ ನಾಯಕತ್ವ ನೀಡಿರುವುದಕ್ಕೆ ಆರ್​ಸಿಬಿಗೆ ಕೃತಜ್ಞನಾಗಿರುತ್ತೇನೆ: ಡುಪ್ಲೆಸಿಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.