ಲೀಡ್ಸ್ : ಲಾರ್ಡ್ಸ್ನಲ್ಲಿ ಅದ್ವಿತೀಯ ಜಯ ಸಾಧಿಸಿದ ಹೊರೆತಾಗಿಯೂ ಭಾರತ ತಂಡದಲ್ಲಿರುವ ಕೆಲವು ದೌರ್ಬಲ್ಯಗಳನ್ನು ಇಂಗ್ಲೆಂಡ್ ನೆನಪಿನಲ್ಲಿಡಬೇಕಾಗಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ತಿಳಿಸಿದ್ದಾರೆ. ಜೊತೆಗೆ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತ ತಂಡದಲ್ಲಿ ಇನ್ನೂ ಕೆಲವು ದೌರ್ಬಲ್ಯಗಳಿವೆ. ಇದನ್ನು ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ವೇಳೆ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ರನ್ನು ಇಂಗ್ಲೆಂಡ್ ಹೊಂದಿದ್ದರೆ, ಈ ಸರಣಿಯನ್ನು ಸುಲಭವಾಗಿ ಗೆಲ್ಲಲಿದೆ ಎಂದು ನಾನು ಬಲವಾಗಿ ಹೇಳುತ್ತಿದ್ದೆ.
ಆದರೂ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಿರುಗಿ ಬೀಳಲಿದೆ ಎಂದು ಹುಸೇನ್ ಡೈಲಿ ಮೇಲ್ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ನೀವು ಭಾರತ ತಂಡದ ಬ್ಯಾಟಿಂಗ್ ಲೈನ್ ಅಪ್ ನೋಡಿದಾಗ, ರಿಷಭ್ ಪಂತ್ ಒಬ್ಬರ ಅಪಾಯಕಾರಿ ಬ್ಯಾಟ್ಸ್ಮನ್ ಆಗಿ ಕಾಣುತ್ತಾರೆ.
ಆದರೆ, ಅವರು ಎಲ್ಲಾ ಸಮಯದಲ್ಲೂ ಆಡುವುದಕ್ಕೆ ಸಾಧ್ಯವಿಲ್ಲ. 7ನೇ ಕ್ರಮಾಂಕದಲ್ಲಿ ಆಡುವ ರವೀಂದ್ರ ಜಡೇಜಾ ಅವರ ಬಗ್ಗೆಯೂ ಇದೇ ಅಭಿಪ್ರಾಯವಿದೆ. ಇನ್ನೂ ಅವರು ಲಾರ್ಡ್ಸ್ನಲ್ಲಿ ಅವರು ಏನೇ ಮಾಡಿದ್ದರೂ, ಭಾರತ ತಂಡದಲ್ಲಿ ಇನ್ನೂ ಲೋಪದೋಷಗಳ ದೊಡ್ಡದಾದ ಬಾಲವನ್ನು ಹೊಂದಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರಾಳಿಯ ಬಾಲಂಗೋಚಿಗಳ ವಿರುದ್ಧ ಸ್ಥಿರತೆ ಕಳೆದುಕೊಂಡದ್ದು ಸೋಲಿಗೆ ಕಾರಣವಾಯಿತು" ಎಂದು ಹುಸೇನ್ ಬರೆದಿದ್ದಾರೆ.
ಹೆಡಿಂಗ್ಲೆ ಫ್ಲಾಟ್ ಪಿಚ್ ಆಗಿದ್ದು, ಎರಡೂ ತಂಡಗಳಿಂದಲೂ ರನ್ ಹರಿದು ಬರಲಿದೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ. ಈ ಪಿಚ್ ಜೋ ರೂಟ್, ಜಾನಿ ಬೈರ್ಸ್ಟೋವ್, ಡೇವಿಡ್ ಮಲನ್ ಅವರ ತವರು ನೆಲವಾಗಿದ್ದು, ಅವರಿಂದಲೂ ಉತ್ತಮ ರನ್ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಶೀಘ್ರದಲ್ಲಿ ಕೊಹ್ಲಿಯಿಂದ ಒಂದು ದೊಡ್ಡ ಶತಕ ಹೊರ ಬರಲಿದೆ : ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ