ಚೆನ್ನೈ: ಭಾನುವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಮಾರ್ಗನ್ ನಾಯಕತ್ವ ವಿಚಿತ್ರವಾಗಿತ್ತು ಎಂದು ಕೆಕೆಆರ್ಗೆ 2 ಐಪಿಎಲ್ ಟ್ರೋಫಿ ತಂದು ಕೊಟ್ಟಿರುವ ನಾಯಕ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.
ತಮ್ಮ ಮೊದಲ ಓವರ್ನಲ್ಲೇ ವಿರಾಟ್ ಕೊಹ್ಲಿ(4) ಮತ್ತು ರಜತ್ ಪಾಟಿದಾರ್(1) ವಿಕೆಟ್ ಪಡೆದಿದ್ದ ವರುಣ್ ಚಕ್ರವರ್ತಿಯನ್ನು ಪವರ್ ಪ್ಲೇ ಒಳಗೆ ಮತ್ತೆ ಬಳಸದಿದ್ದಕ್ಕೆ ಮಾರ್ಗನ್ ನಾಯಕತ್ವನ್ನು ಟೀಕಿಸಿದ್ದಾರೆ.
ಇದು ನನ್ನ ಜೀವನದಲ್ಲಿ ನಾ ಕಂಡ ವಿಲಕ್ಷಣವಾದ ನಾಯಕತ್ವ. ಅದನ್ನು ನಾನು ವಿವರಿಸಲಾರೆ ಎಂದು ಅವರು ಕ್ರಿಕ್ಬಜ್ ಸಂವಾದದ ವೇಳೆ ತಿಳಿಸಿದ್ದಾರೆ.
ವರುಣ್ ತಮ್ಮ ಮೊದಲ ಓವರ್ನಲ್ಲಿ ಎರಡು ವಿಕೆಟ್ ಪಡೆದಿದ್ದರು. ಆದರೆ, ಅವರಿಗೆ ಸ್ಪೆಲ್ನಲ್ಲಿ ಮುಂದುವರಿಸಿದ್ದರೆ ಮತ್ತೆ ವಿಕೆಟ್ ಪಡೆಯುವ ಸಾಧ್ಯತೆ ಇತ್ತು, ಆಗ ಪಂದ್ಯದಲ್ಲಿ ಹಿಡಿತ ಸಾಧಿಸುವ ಅವಕಾಶ ಸಿಗುತ್ತಿತ್ತು. ಈ ರೀತಿಯ ತಪ್ಪನ್ನು ಭಾರತೀಯ ನಾಯಕ ಮಾಡಲಿಲ್ಲ, ಒಂದು ವೇಳೆ ಮಾಡಿದ್ದರೆ ಅವರ ವಿರುದ್ಧ ಟೀಕೆಗಳ ಬಾಣಗಳು ಹೊರಬರುತ್ತಿದ್ದವು ಎಂದಿದ್ದಾರೆ.
ಗಂಭೀರ್ ಪ್ರಕಾರ್ ವರುಣ್ ಪವರ್ ಪ್ಲೇನಲ್ಲಿ ಮತ್ತೆ ಬೌಲಿಂಗ್ ನೀಡಿದ್ದರೆ, ವಿಕೆಟ್ಗಳನ್ನು ಪಡೆಯುವ ಅವಕಾಶವಿತ್ತು. ಆದರೆ, ಮಾರ್ಗನ್ 2 ನೇ ಓವರ್ನಂತರ 8ನೇ ಓವರ್ನಲ್ಲಿ ಕಣಕ್ಕಿಳಿಸಿದರು. ಅಷ್ಟರಲ್ಲಾಗಲೇ ಸೆಟ್ ಆಗಿದ್ದ ಮ್ಯಾಕ್ಸ್ವೆಲ್ 14 ಸಿಡಿಸಿದರು. ಮತ್ತೆ 3ನೇ ಓವರ್ನಲ್ಲಿ 5 ರನ್ ನೀಡಿದ ಅವರು 4ನೇ ಓವರ್ನಲ್ಲಿ ಎಬಿಡಿ ಮತ್ತು ಮ್ಯಾಕ್ಸ್ವೆಲ್ 17 ರನ್ ಚಚ್ಚಿದರು. ಒಟ್ಟಾರೆ ವರುಣ್ 4 ಓವರ್ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು.
ಇದನ್ನು ಓದಿ: ಆರ್ಸಿಬಿ ಆಪತ್ಬಾಂಧವನ ಹೆಸರಲ್ಲಿದೆ ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ