ಬ್ರಿಸ್ಬೇನ್: ಆ್ಯಶಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಆಸ್ಟ್ರೇಲಿಯಾದ ವೇಗಿಗಳ ದಾಳಿಗೆ ಸಿಲುಕಿ ಆರಂಭದಲ್ಲೇ ಆಘಾತಕ್ಕೊಳಗಾಗಿದೆ.
-
WHAT A WAY TO START THE #ASHES! pic.twitter.com/XtaiJ3SKeV
— cricket.com.au (@cricketcomau) December 8, 2021 " class="align-text-top noRightClick twitterSection" data="
">WHAT A WAY TO START THE #ASHES! pic.twitter.com/XtaiJ3SKeV
— cricket.com.au (@cricketcomau) December 8, 2021WHAT A WAY TO START THE #ASHES! pic.twitter.com/XtaiJ3SKeV
— cricket.com.au (@cricketcomau) December 8, 2021
ಐದು ಪಂದ್ಯಗಳ ಟೆಸ್ಟ್ ಸರಣಿಯ ಪ್ರಥಮ ಪಂದ್ಯವು ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಆರಂಭಗೊಂಡಿದೆ. ಆರಂಭಿಕರಾಗಿ ರೊರಿ ಬರ್ನ್ಸ್ ಹಾಗೂ ಹಮೀದ್ ಹಸೀಬ್ ಕಣಕ್ಕಿಳಿದರು. ಆದರೆ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ರೊರಿ ಬರ್ನ್ಸ್ರನ್ನು(0) ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್ ಆಸೀಸ್‌ಗೆ ಉತ್ತಮ ಆರಂಭ ನೀಡಿದರು.
ಬಳಿಕ ನಾಲ್ಕನೇ ಓವರ್ನಲ್ಲಿ 6(9 ಎಸೆತ) ರನ್ ಗಳಿಸಿ ಆಡುತ್ತಿದ್ದ ಡೇವಿಡ್ ಮಲನ್ ಅವರನ್ನು ಜೋಶ್ ಹ್ಯಾಜಲ್‌ವುಡ್ ಪೆವಿಲಿಯನ್ಗೆ ಅಟ್ಟಿದರು. ಇದಾದ ಬಳಿಕ ಕ್ರೀಸಿಗೆ ಬಂದ ನಾಯಕ ಜೋ ರೂಟ್(0) ಕೂಡ 9 ಎಸೆತ ಎದುರಿಸಿ ಖಾತೆ ತೆರೆಯದೆ ಹ್ಯಾಜಲ್‌ವುಡ್ ಬೌಲಿಂಗ್ನಲ್ಲಿ ಔಟಾದರು. ಇದರ ಬೆನ್ನಲ್ಲೇ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಹ 5 ರನ್ ಬಾರಿಸಿ ನಾಯಕ ಕಮಿನ್ಸ್ಗೆ ಬಲಿಯಾದರು.
-
Joe Root wins the toss and chooses to bat first. Will that be the right call?
— cricket.com.au (@cricketcomau) December 7, 2021 " class="align-text-top noRightClick twitterSection" data="
The players are out in the middle #Ashes
">Joe Root wins the toss and chooses to bat first. Will that be the right call?
— cricket.com.au (@cricketcomau) December 7, 2021
The players are out in the middle #AshesJoe Root wins the toss and chooses to bat first. Will that be the right call?
— cricket.com.au (@cricketcomau) December 7, 2021
The players are out in the middle #Ashes
ಒಲಿ ಪೋಪ್ (1*) ಹಾಗೂ ಹಮೀದ್ ಹಸೀಬ್ 12 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಆಡುವ 11ರ ಬಳಗ:
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯೋನ್, ಜೋಶ್ ಹ್ಯಾಜಲ್‌ವುಡ್
ಇಂಗ್ಲೆಂಡ್: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿ.ಕೀ), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್
ಇದನ್ನೂ ಓದಿ: ಮುಂಬರುವ ಐಪಿಎಲ್ನಲ್ಲಿ ಪ್ರಸಿದ್ಧ ತಂಡವೊಂದರಲ್ಲಿ ವಿಶೇಷ ಜವಾಬ್ದಾರಿ ನಿರ್ವಹಿಸಲಿದ್ದಾರೆ ಹರ್ಭಜನ್