ಮುಂಬೈ: ಆರಂಭಿಕ ಹಿನ್ನಡೆಯ ಹೊರೆತಾಗಿಯೂ ರಾಹುಲ್ ತೆವಾಟಿಯಾ ಮತ್ತು ಶಿವಂ ದುಬೆ ಅವರ ಉಪಯುಕ್ತ ರನ್ಗಳ ಕೊಡುಗೆಯಿಂದ ರಾಜಸ್ಥಾನ್ ರಾಯಲ್ಸ್ ಕೊಹ್ಲಿ ಬಳಗಕ್ಕೆ 178 ಟಾರ್ಗೆಟ್ ನೀಡಿದೆ.
43 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ರಾಜಸ್ಥಾನ್ಗೆ ರಾಹುಲ್ ತೆವಾಟಿಯಾ (40) ಮತ್ತು ಶಿವಂ ದುಬೆ(46) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 177ಕ್ಕೇರಿಸಿದರು.
ಬ್ಯಾಟಿಂಗ್ ಸ್ನೇಹಿ ವಾಂಖೆಡೆಯಲ್ಲಿ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಟಾಸ್ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಬೌಲರ್ಗಳು ಪವರ್ ಪ್ಲೇನಲ್ಲೇ ಜೋಸ್ ಬಟ್ಲರ್(8), ಮನನ್ ವೊಹ್ರಾ(7) ಮತ್ತು ಡೇವಿಡ್ ಮಿಲ್ಲರ್(0) 3 ವಿಕೆಟ್ ಪಡೆದು ಆರಂಭಿಕ ಮುನ್ನಡೆ ದೊರೆಕಿಸಿಕೊಟ್ಟರು. ನಂತರ 8ನೇ ಓವರ್ನಲ್ಲಿ ಕಣಕ್ಕಿಳಿದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 21 ರನ್ಗಳಿಸಿದ್ದ ನಾಯಕ ಸಂಜು ಸಾಮ್ಸನ್ ವಿಕೆಟ್ ಪಡೆದರು.
-
Innings Break!
— IndianPremierLeague (@IPL) April 22, 2021 " class="align-text-top noRightClick twitterSection" data="
Three wickets apiece for Mohammed Siraj and Harshal Patel as #RCB restrict #RR to a total of 177/9 at The Wankhede.#RCB chase coming up shortly. Stay tuned
Scorecard - https://t.co/ZB2JNOhWcL #VIVOIPL pic.twitter.com/n9UYQxeouJ
">Innings Break!
— IndianPremierLeague (@IPL) April 22, 2021
Three wickets apiece for Mohammed Siraj and Harshal Patel as #RCB restrict #RR to a total of 177/9 at The Wankhede.#RCB chase coming up shortly. Stay tuned
Scorecard - https://t.co/ZB2JNOhWcL #VIVOIPL pic.twitter.com/n9UYQxeouJInnings Break!
— IndianPremierLeague (@IPL) April 22, 2021
Three wickets apiece for Mohammed Siraj and Harshal Patel as #RCB restrict #RR to a total of 177/9 at The Wankhede.#RCB chase coming up shortly. Stay tuned
Scorecard - https://t.co/ZB2JNOhWcL #VIVOIPL pic.twitter.com/n9UYQxeouJ
ರಾಯಲ್ಸ್ಗೆ ಚೇತರಿಕೆ ನೀಡಿದ ತೆವಾಟಿಯಾ-ಪರಾಗ್ ಜೊತೆಯಾಟ
43 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು 100 ರ ಗಡಿ ದಾಟುವುದು ಅನುಮಾನ ಎಂಬ ಸ್ಥಿತಿಯಲ್ಲಿದ್ದ ವೇಳೆ ಯುವ ಆಟಗಾರರಾದ ಶಿವಂ ದುಬೆ ಮತ್ತು ರಿಯಾನ್ ಪರಾಗ್ 5ನೇ ವಿಕೆಟ್ಗೆ 66 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಸಂದರ್ಭದಲ್ಲಿ ದಾಳಿಗಿಳಿದ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ 16 ಎಸೆತಗಳಲ್ಲಿ 25 ರನ್ಗಳಿಸಿದ್ದ ಪರಾಗ್ ವಿಕೆಟ್ ಪಡೆದು ಅಪಾಯಕಾರಿಯಾಗುತ್ತಿದ್ದ ಜೊತೆಯಾಟವನ್ನು ಬ್ರೇಕ್ ಮಾಡಿದರು.
ಪರಾಗ್ ಬೆನ್ನಲ್ಲೇ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ್ದ ದುಬೆ ಕೇನ್ ರಿಚರ್ಡ್ಸನ್ ಬೌಲಿಂಗ್ನಲ್ಲಿ ಮ್ಯಾಕ್ಸ್ವೆಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ವಿಕೆಟ್ಗಳು ಬೀಳುತ್ತಿದ್ದರು ಸ್ಫೋಟಕ ಆಟ ಮುಂದುವರಿಸಿದ ತೆವಾಟಿಯಾ 23 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 40 ರನ್ಗಳಿಸಿ 19ನೇ ಓವರ್ನಲ್ಲಿ ಸಿರಾಜ್ಗೆ 3ನೇ ವಿಕೆಟ್ ರೂಪದಲ್ಲಿ ಔಟಾದರು. ಮೋರಿಸ್ 10 ಮತ್ತು ಶ್ರೇಯಸ್ ಗೋಪಾಲ್ 7 ರನ್ಗಳಿಸಿದರು.
ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 27ಕ್ಕೆ 3, ಹರ್ಷಲ್ ಪಟೇಲ್ 47ಕ್ಕೆ 3, ಜೆಮೀಸನ್ 29ಕ್ಕೆ1, ವಾಷಿಂಗ್ಟನ್ ಸುಂದರ್ 23ಕ್ಕೆ 1 ಮತ್ತು ರಿಷರ್ಡ್ಸನ್ 29ಕ್ಕೆ1 ವಿಕೆಟ್ ಪಡೆದು ಮಿಂಚಿದರು.