ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವಿರುದ್ಧದ ಸವಾಲಿನ ಬಗ್ಗೆ ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಅವರು ಮಾತನಾಡಿದ್ದಾರೆ. ಭಾರತದ ಪ್ರಬಲ ಬೌಲಿಂಗ್ ಪಡೆಯು ನಮ್ಮ ತಂಡಕ್ಕೆ ತವರಿನ ಅಂಗಳದಲ್ಲಿನ ಅನುಭವವನ್ನೂ ಕೂಡ ಶೂನ್ಯವಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಬವುಮಾ ಅಭಿಪ್ರಾಯಪಟ್ಟಿದ್ದಾರೆ.
-
Test Match Mode 🔛#TeamIndia batters are geared up for the Boxing Day Test 😎#SAvIND pic.twitter.com/Mvkvet6Ed9
— BCCI (@BCCI) December 25, 2023 " class="align-text-top noRightClick twitterSection" data="
">Test Match Mode 🔛#TeamIndia batters are geared up for the Boxing Day Test 😎#SAvIND pic.twitter.com/Mvkvet6Ed9
— BCCI (@BCCI) December 25, 2023Test Match Mode 🔛#TeamIndia batters are geared up for the Boxing Day Test 😎#SAvIND pic.twitter.com/Mvkvet6Ed9
— BCCI (@BCCI) December 25, 2023
ನಾಳಿನ ಬಾಕ್ಸಿಂಗ್ ಡೇ ಟೆಸ್ಟ್ಗೂ ಮುನ್ನ ಪ್ರತಿಕ್ರಿಯಿಸಿರುವ ಹರಿಣಗಳ ತಂಡದ ನಾಯಕ, 'ಮೊಹಮ್ಮದ್ ಸಿರಾಜ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ ಮತ್ತು ಕಗಿಸೊ ರಬಾಡರಂತಹ ಬೌಲರ್‌ಗಳು ಸೆಂಚೂರಿಯನ್ ಅಂಗಳದಲ್ಲಿ ಪ್ರಭಾವ ತೋರಲಿದ್ದಾರೆ. ಬ್ಯಾಟರ್‌ಗಳು ಇಂತಹ ಬೌಲರ್ಗಳ ಸವಾಲು ಎದುರಿಸಿ ಆಡಬೇಕಿದೆ. ನಮಗೆ ಇಲ್ಲಿನ ಪರಿಸ್ಥಿತಿಯ ಅರಿವಿದೆ. ಪಿಚ್ಗೆ ಉತ್ತಮವಾಗಿ ಹೊಂದಿಕೊಳ್ಳುತ್ತೇವೆಂಬ ನಿರೀಕ್ಷೆ ಹೊಂದಿದ್ದೇವೆ. ಆದರೆ, ಭಾರತದ ಬೌಲಿಂಗ್ ಸಾಕಷ್ಟು ಪ್ರಬಲವಾಗಿದೆ. ಬೌಲರ್ಗಳಿಂದಲೇ ಇಷ್ಟೊಂದು ಯಶಸ್ಸು ಸಾಧಿಸಿದ್ದಾರೆ. ಬ್ಯಾಟರ್‌ಗಳು ಸವಾಲನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಯಶಸ್ಸು ಅಡಗಿದೆ ಎಂದರು.
ಮೈದಾನದಲ್ಲಿ ನಾವು ತೋರುವ ಕೌಶಲ್ಯವು ಪ್ರಮುಖ ಅಂಶವಾಗಿದೆ. ಬ್ಯಾಟರ್ ಆಗಿ ನನಗೆ, ಭಾರತದ ಬೌಲರ್‌ಗಳು ಒತ್ತಡಕ್ಕೆ ಸಿಲುಕಿಸಲು ಯತ್ನಿಸಲಿದ್ದಾರೆ. ಜೊತೆಗೆ ಅವರ ಬ್ಯಾಟಿಂಗ್ ಕ್ರಮಾಂಕವೂ ಸಹ ಬಲಿಷ್ಠವಾಗಿದೆ. ಕೆಲ ಖ್ಯಾತ ಟೆಸ್ಟ್ ಆಟಗಾರರಿದ್ದು, ಎಲ್ಲಾ ಪರಿಸ್ಥಿತಿಗಳಲ್ಲಿ ಪ್ರದರ್ಶನ ತೋರಿದ ಹುಡುಗರೂ ಇದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ, ಹೆಚ್ಚುವರಿ ಪ್ರೇರಣೆಯೊಂದಿಗೆ ನಾವು ಅತ್ಯುತ್ತಮ ಪ್ರದರ್ಶನ ತೋರಲು ಬಯಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ವಿರುದ್ಧ ತವರಿನಲ್ಲಿ ಅಜೇಯ ದಾಖಲೆಯ ಬಗ್ಗೆ ಮಾತನಾಡಿದ ಬವುಮಾ, ದಕ್ಷಿಣ ಆಫ್ರಿಕಾದ ತಂಡವಾಗಿ ಈ ದಾಖಲೆ ಕಾಪಾಡಿಕೊಂಡಿರುವುದು ಎಲ್ಲ ಆಟಗಾರರಿಗೂ ಬಹಳ ಹೆಮ್ಮೆ ಇದೆ. ಆದರೆ, ಭಾರತದ ವಿರುದ್ಧ ಆಡುವಾಗ ಕೆಲ ಸವಾಲು ಎದುರಿಸಲು ಸಿದ್ಧರಾಗಿರಬೇಕು. ಅದರ ಬಗ್ಗೆ ನಮ್ಮ ತಂಡ ಗಮನ ಹರಿಸಲಿದೆ ಎಂದು ಬವುಮಾ ಹೇಳಿದರು.
-
#TeamIndia members are here at the SuperSport Park, as they gear up for the 1st Test against South Africa.#SAvIND pic.twitter.com/NEKEpSqL7s
— BCCI (@BCCI) December 24, 2023 " class="align-text-top noRightClick twitterSection" data="
">#TeamIndia members are here at the SuperSport Park, as they gear up for the 1st Test against South Africa.#SAvIND pic.twitter.com/NEKEpSqL7s
— BCCI (@BCCI) December 24, 2023#TeamIndia members are here at the SuperSport Park, as they gear up for the 1st Test against South Africa.#SAvIND pic.twitter.com/NEKEpSqL7s
— BCCI (@BCCI) December 24, 2023
ಹರಿಣಗಳ ನಾಡಿನಲ್ಲಿ ಅನುಭವದ ಕೊರತೆ: ಭಾರತದ ಅಗ್ರ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್ನಲ್ಲಿ 40ಕ್ಕಿಂತ ಹೆಚ್ಚಿನ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 40ಕ್ಕಿಂತ ಅಧಿಕ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ, ಹರಿಣಗಳ ನಾಡಿನಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ ಭಾರತೀಯ ಬ್ಯಾಟರ್ಗಳ ಪ್ರದರ್ಶನ ತೀರಾ ಕಳಪೆಯಾಗಿದೆ. ಕೊಹ್ಲಿ 51.35ರ ಅದ್ಭುತ ಸರಾಸರಿಯಲ್ಲಿ ರನ್ ಗಳಿಸಿದ್ದು, ನಾಯಕ ರೋಹಿತ್ ನಾಲ್ಕು ಟೆಸ್ಟ್‌ಗಳಲ್ಲಿ ಕೇವಲ 15.37ರ ಸರಾಸರಿಯಲ್ಲಿ ಆಡಿದ್ದಾರೆ. ಜೈಸ್ವಾಲ್ ಮತ್ತು ಅಯ್ಯರ್ ದಕ್ಷಿಣ ಆಫ್ರಿಕಾದಲ್ಲಿ ಇನ್ನೂ ಒಂದೇ ಒಂದು ಟೆಸ್ಟ್ ಕೂಡ ಆಡಿಲ್ಲ.
2010-11ರಲ್ಲಿ ಭಾರತ ತಂಡವು ಮೂರು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿತ್ತು. ಆದರೆ, ಇದುವರೆಗೂ ಕೂಡ ದಕ್ಷಿಣ ಆಫ್ರಿಕಾದಲ್ಲಿ ಭಾರತವು ಟೆಸ್ಟ್ ಸರಣಿ ಜಯಿಸಿಲ್ಲ. ಹೀಗಾಗಿ ಮತ್ತೊಮ್ಮೆ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವಿನ ದಾಖಲೆ ಬರೆಯುವ ಅವಕಾಶವಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿ.ಕೀ) ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಡೀನ್ ಎಲ್ಗರ್, ಐಡೆನ್ ಮಾರ್ಕ್ರಮ್, ಕೀಗನ್ ಪೀಟರ್‌ಸನ್, ಡೇವಿಡ್ ಬೆಡಿಂಗ್‌ಹ್ಯಾಮ್, ಕೈಲ್ ವೆರ್ರೆನ್ನೆ (ವಿ.ಕೀ), ಜೆರಾಲ್ಡ್ ಕೋಟ್ಜಿ, ಟೋನಿ ಡಿ ಜೊರ್ಜಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ವಿಯಾನ್ ಮಲ್ಡರ್, ಲುಂಗಿ ಎನ್‌ಗಿಡಿ, ನಾಂಡ್ರೆ ಬರ್ಗರ್
ಇದನ್ನೂ ಓದಿ: ಪ್ಯಾಲಿಸ್ತೇನ್ ಜನತೆ ಬೆಂಬಲಕ್ಕೆ ಮುಂದಾದ ಕ್ರಿಕೆಟರ್ ಖವಾಜಾಗೆ ಐಸಿಸಿ ಅನುಮತಿ ನಿರಾಕರಣೆ