ದಿ ಓವೆಲ್(ಲಂಡನ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಇಂಗ್ಲೆಂಡ್ ನೀಡಿದ್ದ 111ರನ್ಗಳ ಗುರಿ ಬೆನ್ನತ್ತಿದ ಭಾರತ 18.4 ಓವರ್ಗಳಲ್ಲಿ ಯಾವುದೇ ವಿಕೆಟ್ನಷ್ಟವಿಲ್ಲದೇ 114ರನ್ಗಳಿಕೆ ಮಾಡಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ದಿ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ್ದು, 25 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 110 ರನ್ಗಳಿಕೆ ಮಾಡಿ, ಭಾರತಕ್ಕೆ 111ರನ್ಗಳ ಸುಲಭ ಟಾರ್ಗೆಟ್ ನೀಡಿತು. ಸುಲಭ ರನ್ಗಳ ಗುರಿ ಬೆನ್ನತ್ತಿದ ಭಾರತ ಯಾವುದೇ ವಿಕೆಟ್ನಷ್ಟವಿಲ್ಲದೇ ಗೆಲುವಿನ ನಗೆ ಬೀರಿದೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅಜೇಯ 76ರನ್ಗಳಿಕೆ ಮಾಡಿದರೆ, ಶಿಖರ್ ಧವನ್ ಅಜೇಯ 31ರನ್ಗಳಿಸಿದರು. ಈ ಮೂಲಕ 18. 4ಓವರ್ಗಳಲ್ಲಿ ಯಾವುದೇ ವಿಕೆಟ್ನಷ್ಟವಿಲ್ಲದೇ 114ರನ್ಗಳಿಕೆ ಮಾಡಿ, ಗೆಲುವು ಸಾಧಿಸಿದೆ.
-
A clinical performance from #TeamIndia to beat England by 10 wickets 👏👏
— BCCI (@BCCI) July 12, 2022 " class="align-text-top noRightClick twitterSection" data="
We go 1️⃣-0️⃣ up in the series 👌
Scorecard ▶️ https://t.co/8E3nGmlNOh #ENGvIND pic.twitter.com/zpdix7PmTf
">A clinical performance from #TeamIndia to beat England by 10 wickets 👏👏
— BCCI (@BCCI) July 12, 2022
We go 1️⃣-0️⃣ up in the series 👌
Scorecard ▶️ https://t.co/8E3nGmlNOh #ENGvIND pic.twitter.com/zpdix7PmTfA clinical performance from #TeamIndia to beat England by 10 wickets 👏👏
— BCCI (@BCCI) July 12, 2022
We go 1️⃣-0️⃣ up in the series 👌
Scorecard ▶️ https://t.co/8E3nGmlNOh #ENGvIND pic.twitter.com/zpdix7PmTf
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಬುಮ್ರಾ ಮೊದಲ ಓವರ್ನಲ್ಲೇ ಆಘಾತ ನೀಡಿದರು. ತಾವು ಎಸೆದ ಮೊದಲ ಓವರ್ನಲ್ಲಿ ಜಾಸನ್ ರಾಯ್(0) ವಿಕೆಟ್ ಪಡೆದುಕೊಂಡರು. ಇದರ ಬೆನ್ನಲ್ಲೇ ಜೋ ರೂಟ್(0) ಕೂಡ ಬುಮ್ರಾಗೆ ಬಲಿಯಾದರು. ಇದರ ಬೆನ್ನಲ್ಲೇ ಮೈದಾನಕ್ಕೆ ಬಂದ ಸ್ಟೋಕ್ಸ್(0) ಕೂಡ ಬುಮ್ರಾ ಓವರ್ನಲ್ಲಿ ಖಾತೆ ತೆರೆಯುವುದಕ್ಕೂ ಮೊದಲೇ ಪೆವಿಲಿಯನ್ ಸೇರಿಕೊಂಡರು.
ಟೆಸ್ಟ್ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ಬೈರ್ಸ್ಟೋ(7)ರನ್ಗಳಿಕೆ ಮಾಡಿ ಬುಮ್ರಾಗೆ ಬಲಿಯಾದರೆ, ಲಿವಿಗ್ಸ್ಟೋನ್(0) ಔಟಾದರು. ಹೀಗಾಗಿ, ಇಂಗ್ಲೆಂಡ್ ತಂಡ 26 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಕ್ಯಾಪ್ಟನ್ ಬಟ್ಲರ್ ಹಾಗೂ ಮೊಯಿನ್ ಅಲಿ ಸ್ವಲ್ಪ ಹೊತ್ತು ಜೊತೆಯಾಟ ಆಡಿದರು. ಆದರೆ, 14ರನ್ಗಳಿಕೆ ಮಾಡಿದ್ದಾಗ ಪ್ರಸಿದ್ಧ್ ಕೃಷ್ಣ ಎಸೆದ ಓವರ್ನಲ್ಲಿ ಮೊಯಿನ್ ವಿಕೆಟ್ ಒಪ್ಪಿಸಿದರು. 30ರನ್ಗಳಿಕೆ ಮಾಡಿದ್ದ ಬಟ್ಲರ್ ಕೂಡ ಶಮಿಗೆ ಔಟಾದರು.
ಕೊನೆಯದಾಗಿ ಡೇವಿಡ್ ವಿಲ್ಲಿ(21) ಓವರ್ಟೊನ್(8), ಕೇರ್ಸ್(15)ರನ್ಗಳಿಕೆ ಮಾಡಿ, ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ತಂಡ ಕೊನೆಯದಾಗಿ 25.2 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 110ರನ್ಗಳಿಕೆ ಮಾಡಿತು.ಭಾರತದ ಪರ ಬೌಲಿಂಗ್ನಲ್ಲಿ ಮಿಂಚು ಹರಿಸಿದ ಜಸ್ಪ್ರೀತ್ ಬುಮ್ರಾ 6ವಿಕೆಟ್ ಪಡೆದುಕೊಂಡರೆ, ಮೊಹಮ್ಮದ್ ಶಮಿ 3 ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.
ಇದನ್ನೂ ಓದಿರಿ: ಬುಮ್ರಾ, ಶಮಿ ದಾಳಿಗೆ ನಲುಗಿದ ಆಂಗ್ಲರು.. ಟೀಂ ಇಂಡಿಯಾ ಗೆಲುವಿಗೆ 111 ರನ್ ಟಾರ್ಗೆಟ್
ಇಂಗ್ಲೆಂಡ್ ನಾಲ್ವರು ಬ್ಯಾಟರ್ಗಳು ಶೂನ್ಯಕ್ಕೆ ಔಟ್: ಬುಮ್ರಾ ಎಸೆದ ಓವರ್ನಲ್ಲಿ ಜೇಸನ್ ರಾಯ್(0), ರೂಟ್(0), ಲಿವಿಗ್ಸ್ಟೋನ್(0) ಶೂನ್ಯಕ್ಕೆ ಔಟಾದರೆ, ಬೈರ್ಸ್ಟೋ 7 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇನ್ನೂ ಶಮಿ ಓವರ್ನಲ್ಲಿ ಬೆನ್ ಸ್ಟೋಕ್ಸ್(0) ವಿಕೆಟ್ ಒಪ್ಪಿಸಿದರು.
ಏಕದಿನ ಕ್ರಿಕೆಟ್ನಲ್ಲಿ ಬುಮ್ರಾ ದಾಖಲೆ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಜಸ್ಪ್ರಿತ್ ಬುಮ್ರಾ ಹೊಸದೊಂದು ದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಸಲ 6 ವಿಕೆಟ್ ಕಬಳಿಕೆ ಮಾಡಿದ್ದಾರೆ. 7 ಓವರ್ ಬೌಲಿಂಗ್ ಮಾಡಿದ ಯಾರ್ಕರ್ ಕಿಂಗ್ ಬುಮ್ರಾ ಕೇವಲ 19ರನ್ ನೀಡಿ, ಪ್ರಮುಖ 6 ವಿಕೆಟ್ ಕಿತ್ತಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡನೇ ಸಲ 5 ವಿಕೆಟ್ ಕಬಳಿಕೆ ಮಾಡಿರುವ ಸಾಧನೆ ಮಾಡಿದ್ದಾರೆ.