ಸೌತಾಂಪ್ಟನ್: ಕೊರೊನಾ ಮಹಾಮಾರಿಯಿಂದಾಗಿ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್(91) ಸಾವನ್ನಪ್ಪಿದ್ದು, ದೇಶದ ಜನರು ಕಂಬನಿ ಮಿಡಿದಿದ್ದಾರೆ. ಇವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಪ್ಲೇಯರ್ಸ್ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದು, ದಿಗ್ಗಜ ಅಥ್ಲೀಟ್ಗೆ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ.
-
#TeamIndia is wearing black armbands in remembrance of Milkha Singhji, who passed away due to COVID-19. 🙏#WTC21
— BCCI (@BCCI) June 19, 2021 " class="align-text-top noRightClick twitterSection" data="
">#TeamIndia is wearing black armbands in remembrance of Milkha Singhji, who passed away due to COVID-19. 🙏#WTC21
— BCCI (@BCCI) June 19, 2021#TeamIndia is wearing black armbands in remembrance of Milkha Singhji, who passed away due to COVID-19. 🙏#WTC21
— BCCI (@BCCI) June 19, 2021
ಭಾರತ - ನ್ಯೂಜಿಲ್ಯಾಂಡ್ ತಂಡಗಳ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ಪಂದ್ಯ ನಡೆಯುತ್ತಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ಲೇಯರ್ಸ್ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಆಗಮಿಸಿದರು. ಈ ಮೂಲಕ ದಿಗ್ಗಜ ಅಥ್ಲೀಟ್ಗೆ ಗೌರವ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿದೆ.
ಇದನ್ನೂ ಓದಿರಿ: ಜೀವನದ ಓಟ ನಿಲ್ಲಿಸಿದ ಭಾರತದ 'ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್!
ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಸೇರಿದಂತೆ ಅನೇಕರು ಟ್ವಿಟರ್ನಲ್ಲಿ ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.
ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್(91), ಇಂದು ಕೊನೆಯುಸಿರೆಳೆದಿದ್ದಾರೆ. 1958ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಚಿನ್ನ, 1958ರ ಕಾಮನ್ ವೆಲ್ತ್ನಲ್ಲಿ ಚಿನ್ನದ ಪದಕ ಗೆದ್ದು ಹೊಸ ದಾಖಲೆ ನಿರ್ಮಾಣ ಮಾಡಿದ್ದರು. ವಿಶೇಷವೆಂದರೆ ಸ್ವತಂತ್ರ ಭಾರತದಲ್ಲಿ ಭಾರತಕ್ಕೆ ಕಾಮನ್ವೆಲ್ತ್ನಲ್ಲಿ ಬಂದ ಮೊಟ್ಟ ಮೊದಲ ಸ್ವರ್ಣಪದಕ ಇದಾಗಿತ್ತು. ಇವರ ಸಾಧನೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ ಸಿಕ್ಕಿದೆ.