ಬೆಂಗಳೂರು: ನಡೆಯುತ್ತಿರುವ 2023ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದು, ಲೀಗ್ ಹಂತದ 8 ಪಂದ್ಯಗಳನ್ನು ಸುಲಭವಾಗಿ ಜಯಿಸಿದೆ. ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನೆದರ್ಲೆಂಡ್ಸ್ಗೆ 410 ರನ್ಗಳ ಬೃಹತ್ ಗುರಿ ನೀಡಿದ್ದರಿಂದ ಇದನ್ನು ಗೆದ್ದು ಅಜೇಯವಾಗಿ ವಿಶ್ವಕಪ್ನಲ್ಲಿ ಮುಂದುವರೆಯುವ ವಿಶ್ವಾಸ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದೆ. ಭಾರತ ತಂಡದ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅರ್ಧಶತಕ ಮತ್ತು ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ಅವರ ಶತಕದ ನೆರವಿನಿಂದ 410 ರನ್ ಕಲೆಹಾಕಿದೆ. ಈ ಬೃಹತ್ ಮೊತ್ತದಿಂದ ಹಲವು ದಾಖಲೆಗಳು ನಿರ್ಮಾಣವಾಗಿವೆ.
-
The local lad wows Chinnaswamy! 💯
— BCCI (@BCCI) November 12, 2023 " class="align-text-top noRightClick twitterSection" data="
A magnificent CENTURY that from KL Rahul 👏👏#TeamIndia | #CWC23 | #MenInBlue | #INDvNED pic.twitter.com/u47WSKzrXG
">The local lad wows Chinnaswamy! 💯
— BCCI (@BCCI) November 12, 2023
A magnificent CENTURY that from KL Rahul 👏👏#TeamIndia | #CWC23 | #MenInBlue | #INDvNED pic.twitter.com/u47WSKzrXGThe local lad wows Chinnaswamy! 💯
— BCCI (@BCCI) November 12, 2023
A magnificent CENTURY that from KL Rahul 👏👏#TeamIndia | #CWC23 | #MenInBlue | #INDvNED pic.twitter.com/u47WSKzrXG
ವೇಗದ ಶತಕ ಗಳಿಸಿದ ರಾಹುಲ್: ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ವೇಗದ ಶತಕ ಕೆ ಎಲ್ ರಾಹುಲ್ ಬ್ಯಾಟ್ನಿಂದ ದಾಖಲಾಗಿದೆ. ಕೇವಲ 62 ಬಾಲ್ ಎದುರಿಸಿದ ಅವರು 11 ಸಿಕ್ಸ್ ಮತ್ತು 4 ಬೌಂಡರಿಯ ಸಹಾಯದಿಂದ 100 ರನ್ ತಲುಪಿದರು. ಅಫ್ಘನ್ ವಿರುದ್ಧ ರೋಹಿತ್ ಶರ್ಮಾ 63 ಬಾಲ್ನಲ್ಲಿ ಶತಕ ಸಿಡಿಸಿದ್ದ ದಾಖಲೆಯನ್ನು ರಾಹುಲ್ ಮುರಿದಿದ್ದಾರೆ. ನಂತರದ ಸ್ಥಾನದಲ್ಲಿ ವಿರೇಂದ್ರ ಸೆಹ್ವಾಗ್ (81) ಮತ್ತು ವಿರಾಟ್ ಕೊಹ್ಲಿ (83) ಗಳಿಸಿದ ದಾಖಲೆಗಳಿವೆ.
ವಿಶ್ವಕಪ್ನ ಐದನೇ ಬೃಹತ್ ಮೊತ್ತ: ಟೀಮ್ ಇಂಡಿಯಾ ಗಳಿಸಿದ 410 ರನ್ ವಿಶ್ವಕಪ್ನಲ್ಲಿ ಐದನೇ ಬೃಹತ್ ಮೊತ್ತವಾಗಿದೆ. ಇದೇ ವರ್ಷದ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ 428 ಗಳಿಸಿದ್ದು ಮೊದಲನೇ ಸ್ಥಾನದಲ್ಲಿದೆ. ನಂತರ ಕ್ರಮವಾಗಿ ಆಸ್ಟ್ರೇಲಿಯಾ (417 -2015 ವಿಶ್ವಕಪ್), ಭಾರತ (413 - 2007 ವಿಶ್ವಕಪ್) ಮತ್ತು ದಕ್ಷಿಣ ಆಫ್ರಿಕಾ (411 - 2015 ವಿಶ್ವಕಪ್) 2 ರಿಂದ 4ನೇ ಸ್ಥಾನದಲ್ಲಿವೆ.
-
Fastest hundred for India in World Cups:
— Johns. (@CricCrazyJohns) November 12, 2023 " class="align-text-top noRightClick twitterSection" data="
62 balls by KL Rahul.
63 balls by Rohit Sharma. pic.twitter.com/ODXpxHIxA7
">Fastest hundred for India in World Cups:
— Johns. (@CricCrazyJohns) November 12, 2023
62 balls by KL Rahul.
63 balls by Rohit Sharma. pic.twitter.com/ODXpxHIxA7Fastest hundred for India in World Cups:
— Johns. (@CricCrazyJohns) November 12, 2023
62 balls by KL Rahul.
63 balls by Rohit Sharma. pic.twitter.com/ODXpxHIxA7
ವಿಶ್ವಕಪ್ನಲ್ಲಿ ಹೆಚ್ಚಿನ ಅರ್ಧಶತಕ: ನಡೆಯುತ್ತಿರುವ ವಿಶ್ವಕಪ್ನಲ್ಲಿ ತಂಡದಿಂದ ಒಟ್ಟಾರೆ 20 ಅರ್ಧಶತಕಗಳು ದಾಖಲಾಗಿವೆ. ಕಳೆದೆಲ್ಲಾ ವಿಶ್ವಕಪ್ಗಳಿಗಿಂತ ಇದು ಅತಿ ಹೆಚ್ಚಾಗಿದೆ. 2019ರಲ್ಲಿ 19, 2011 ರಲ್ಲಿ - 18 ಮತ್ತು 2003ರಲ್ಲಿ - 17 ಅರ್ಧಶತಕಗಳು ತಂಡದಿಂದ ದಾಖಲಾಗಿದ್ದವು.
-
KL Rahul created history.
— Johns. (@CricCrazyJohns) November 12, 2023 " class="align-text-top noRightClick twitterSection" data="
- He has the most runs by an Indian wicket keeper in a World Cup edition. 🇮🇳 pic.twitter.com/RzfqN4SWdY
">KL Rahul created history.
— Johns. (@CricCrazyJohns) November 12, 2023
- He has the most runs by an Indian wicket keeper in a World Cup edition. 🇮🇳 pic.twitter.com/RzfqN4SWdYKL Rahul created history.
— Johns. (@CricCrazyJohns) November 12, 2023
- He has the most runs by an Indian wicket keeper in a World Cup edition. 🇮🇳 pic.twitter.com/RzfqN4SWdY
4ನೇ ವಿಕೆಟ್ಗೆ ಅತಿ ದೊಡ್ಡ ವಿಶ್ವಕಪ್ ಜೊತೆಯಾಟ: ಇಂದಿನ ಪಂದ್ಯದಲ್ಲಿ ರಾಹುಲ್ ಮತ್ತು ಅಯ್ಯರ್ 4ನೇ ವಿಕೆಟ್ಗೆ 208 ರನ್ಗಳ ಪಾಲುದಾರಿಕೆ ಹಂಚಿಕೊಂಡರು. ಏಕದಿನ ವಿಶ್ವಕಪ್ನಲ್ಲಿ ಇದು ಭಾರತದ ಪರ ನಾಲ್ಕನೇ ವಿಕೆಟ್ ನಂತರ ಅತಿದೊಡ್ಡ ಪಾಲುದಾರಿಕೆ ಆಗಿದೆ. ಈ ಹಿಂದೆ ಧೋನಿ - ರೈನಾ (196), ವಿರಾಟ್ ಕೊಹ್ಲಿ - ಕೆ ಎಲ್ ರಾಹುಲ್ (165) ರೆಕಾರ್ಡ್ಗಳಿದ್ದವು.
-
KL Rahul created history.
— Johns. (@CricCrazyJohns) November 12, 2023 " class="align-text-top noRightClick twitterSection" data="
- He has the most runs by an Indian wicket keeper in a World Cup edition. 🇮🇳 pic.twitter.com/RzfqN4SWdY
">KL Rahul created history.
— Johns. (@CricCrazyJohns) November 12, 2023
- He has the most runs by an Indian wicket keeper in a World Cup edition. 🇮🇳 pic.twitter.com/RzfqN4SWdYKL Rahul created history.
— Johns. (@CricCrazyJohns) November 12, 2023
- He has the most runs by an Indian wicket keeper in a World Cup edition. 🇮🇳 pic.twitter.com/RzfqN4SWdY
ವಿಶ್ವಕಪ್ನಲ್ಲಿ ವಿಕೆಟ್ ಕೀಪರ್ ಗಳಿಸಿದ ಎರಡನೇ ಹೆಚ್ಚಿನ ರನ್: ಕೋಚ್ ರಾಹುಲ್ ದ್ರಾವಿಡ್ ನಂತರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಒಬ್ಬ ಗಳಿಸಿದ ದೊಡ್ಡ ಮೊತ್ತ ಇದಾಗಿದೆ. ರಾಹುಲ್ ದ್ರಾವಿಡ್ 1999 ವಿಶ್ವಕಪ್ನಲ್ಲಿ 145 ರನ್ ಕಲೆಹಾಕಿದ್ದರು. ಈ ದಾಖಲೆ ಈವರೆಗೆ ಅಗ್ರಸ್ಥಾನದಲ್ಲೇ ಇದೆ. ಕೆ ಎಲ್ ರಾಹುಲ್ 102 ರನ್ ಗಳಿಸಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಇದೇ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 96 ರನ್ ಗಳಿಸಿದ್ದು ಎರಡನೇ ಸ್ಥಾನದಲ್ಲಿತ್ತು.
ಇದನ್ನೂ ಓದಿ:ರೋ'ಹಿಟ್' ಅಬ್ಬರ: ಸಚಿನ್ ದಾಖಲೆ ಸರಿಗಟ್ಟಿದ ಶರ್ಮಾ; ಸಿಕ್ಸ್ನಲ್ಲಿ ಎಬಿಡಿ ರೆಕಾರ್ಡ್ ಉಡೀಸ್