ETV Bharat / sports

ಲಂಕಾದಲ್ಲಿ ಕ್ವಾರಂಟೈನ್​ ಮುಗಿಸಿದ ಧವನ್ ಪಡೆ: ಸ್ವಿಮ್ಮಿಂಗ್​ ಪೂಲ್​ನಲ್ಲಿ ಫುಲ್ ಜಾಲಿ - ಶಿಖರ್ ಧವನ್​​ ಪಡೆ

ಲಂಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ಟೀಂ ಇಂಡಿಯಾದ ಮತ್ತೊಂದು ಪಡೆ ಲಂಕಾಗೆ ತೆರಳಿದ್ದು, ಇದೀಗ ಯಶಸ್ವಿಯಾಗಿ ಕ್ವಾರಂಟೈನ್ ಮುಗಿಸಿದೆ.

Team india
Team india
author img

By

Published : Jul 1, 2021, 9:55 PM IST

ಕೊಲಂಬೊ: ಶಿಖರ್​ ಧವನ್​ ನೇತೃತ್ವದ ಟೀಂ ಇಂಡಿಯಾ ಲಂಕಾ ವಿರುದ್ಧದ ಟಿ-20 ಹಾಗೂ ಏಕದಿನ ಕ್ರಿಕೆಟ್​ ಸರಣಿ ಆಡಲು ಅಲ್ಲಿಗೆ ತೆರಳಿದ್ದು, ಇಂದು ಯಶಸ್ವಿಯಾಗಿ ಕ್ವಾರಂಟೈನ್​​ ಮುಗಿಸಿದೆ. ನಾಳೆಯಿಂದ ತಂಡದ ಎಲ್ಲ ಪ್ಲೇಯರ್ಸ್​ ತರಬೇತಿಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಗಬ್ಬರ್ ಸಿಂಗ್​ ಖ್ಯಾತಿಯ ಶಿಖರ್​ ಧವನ್​ ನಾಯಕತ್ವದ ಯುವಪಡೆ ಜುಲೈ 13ರಿಂದ ಲಂಕಾ ವಿರುದ್ಧ ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ಭಾಗಿಯಾಗಲಿದ್ದು, ಇದೀಗ ಕೊಲಂಬೊ ಹೋಟೆಲ್​ನಲ್ಲಿ ಉಳಿದುಕೊಂಡು ಕ್ವಾರಂಟೈನ್​ ಮುಗಿಸಿದೆ.

Team india
ಸ್ವಿಮ್ಮಿಂಗ್​ ಪೂಲ್​ನಲ್ಲಿ ಯಂಗ್ ಇಂಡಿಯಾ ಜಾಲಿ ಮೂಡ್

ಎಲ್ಲ ಪ್ಲೇಯರ್ಸ್ ಯಶಸ್ವಿಯಾಗಿ ಕ್ವಾರಂಟೈನ್​ ಮುಗಿಸುತ್ತಿದ್ದಂತೆ ಹೋಟೆಲ್​​ನ ಸ್ವಿಮ್ಮಿಂಗ್​ ಪೂಲ್​​ನಲ್ಲಿ ಒಟ್ಟಿಗೆ ಎಂಜಾಯ್ ಮಾಡಿದ್ದು, ಕೆಲಹೊತ್ತು ವಾಲಿಬಾಲ್​ ಕೂಡ ಆಡಿದ್ದಾರೆ. ಇದರ ಫೋಟೋವೊಂದನ್ನು ಭಾರತೀಯ ಕ್ರಿಕೆಟ್​ ಮಂಡಳಿ ಶೇರ್ ಮಾಡಿಕೊಂಡಿದೆ. ತಂಡದಲ್ಲಿ ಬಹುತೇಕವಾಗಿ ಯುವ ಪಡೆಯಿಂದ ಕೂಡಿದ್ದು, ದಿ ವಾಲ್​ ಖ್ಯಾತಿಯ ರಾಹುಲ್​ ದ್ರಾವಿಡ್​ ಕೋಚ್​ ಆಗಿದ್ದಾರೆ. ಶ್ರೀಲಂಕಾಗೆ ಹಾರುವುದಕ್ಕೂ ಮೊದಲು ಎಲ್ಲ ಪ್ಲೇಯರ್ಸ್​​​ ಮುಂಬೈನಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್​ಗೊಳಗಾಗಿದ್ದರು.

Team india
ಯಶಸ್ವಿಯಾಗಿ ಕ್ವಾರಂಟೈನ್​ ಮುಗಿಸಿದ ಶಿಖರ್ ಪಡೆ

ಇದನ್ನೂ ಓದಿರಿ: WTC ಫೈನಲ್​ ಗೆದ್ದ ಮೇಲೆ ಕೊಹ್ಲಿ​ ಅವರನ್ನು ಅಪ್ಪಿ ಎದೆಗೊರಗಿದ್ದೇಕೆ? ಮಾಹಿತಿ ಬಿಚ್ಚಿಟ್ಟ ವಿಲಿಯಮ್ಸನ್‌!

ಲಂಕಾ ವಿರುದ್ಧದ ಸರಣಿಗಾಗಿ ಶಿಖರ್​ ಧವನ್​, ಭುವನೇಶ್ವರ್ ಕುಮಾರ್​, ಪೃಥ್ವಿ ಶಾ, ದೇವದತ್ ಪಡಿಕ್ಕಲ್​, ಋತುರಾಜ್​​ ಗಾಯಕ್‌ವಾಡ್​, ಸೂರ್ಯಕುಮಾರ್​, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ, ನಿತೀಶ್ ರಾಣಾ, ಇಶನ್​ ಕಿಶನ್​(ವಿ.ಕೀ), ಸಂಜು ಸ್ಯಾಮ್ಸನ್​( ವಿ.ಕೀ), ಯಜುವೇಂದ್ರ ಚಹಲ್​, ಆರ್​.ಚಹರ್​, ಕೆ.ಗೌತಮ್​, ಕುಲ್ದೀಪ್ ಯಾದವ್​, ವರುಣ್​ ಚಕ್ರವರ್ತಿ, ದೀಪಕ್​ ಚಹರ್​, ನವದೀಪ್​ ಸೈನಿ ಹಾಗೂ ಚೇತನ್ ಸಕಾರಿಯಾ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.