ಲಂಡನ್: ಟೀಂ ಇಂಡಿಯಾ ಕ್ರಿಕೆಟ್ನ ಮುಖ್ಯ ಕೋಚ್ ರವಿಶಾಸ್ತ್ರಿ ಕಳೆದ ಕೆಲ ತಿಂಗಳಿಂದ ಕೊಹ್ಲಿ ಪಡೆ ಜೊತೆ ಇಂಗ್ಲೆಂಡ್ನಲ್ಲಿದ್ದು, ಇದರ ಮಧ್ಯೆ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿ, ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರವಿಶಾಸ್ತ್ರಿ ಮನೆಯಲ್ಲಿ ಐದು ಶ್ವಾನಗಳಿದ್ದು, ಅವುಗಳಿಗೆ ಬೌನ್ಸರ್, ಬೀಮರ್, ಫ್ಲಿಪ್ಪರ್, ಸ್ಕಿಪರ್ ಹಾಗೂ ಯಾರ್ಕರ್ ಎಂದು ಹೆಸರಿಟ್ಟಿದ್ದಾರೆ. ಅವು ಒಟ್ಟಿಗೆ ಊಟ ಮಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ಟೀಂ ಇಂಡಿಯಾ ಕೋಚ್, "Miss you guys. see you soon" ಎಂದು ಬರೆದುಕೊಂಡಿದ್ದಾರೆ.
-
My buddies Bouncer, Beamer, Flipper, Skipper, Yorker tucking in to their lunch on a rare sunny day on the west coast in India 🇮🇳. Miss you guys . See you soon 🤗 pic.twitter.com/lA8XC9P0eb
— Ravi Shastri (@RaviShastriOfc) August 23, 2021 " class="align-text-top noRightClick twitterSection" data="
">My buddies Bouncer, Beamer, Flipper, Skipper, Yorker tucking in to their lunch on a rare sunny day on the west coast in India 🇮🇳. Miss you guys . See you soon 🤗 pic.twitter.com/lA8XC9P0eb
— Ravi Shastri (@RaviShastriOfc) August 23, 2021My buddies Bouncer, Beamer, Flipper, Skipper, Yorker tucking in to their lunch on a rare sunny day on the west coast in India 🇮🇳. Miss you guys . See you soon 🤗 pic.twitter.com/lA8XC9P0eb
— Ravi Shastri (@RaviShastriOfc) August 23, 2021
ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆಡಲು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದ ಟೀಂ ಇಂಡಿಯಾ ಇಂಗ್ಲೆಂಡ್ನಲ್ಲಿ ಉಳಿದುಕೊಂಡಿದ್ದು, ಸದ್ಯ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ.
ಇದನ್ನೂ ಓದಿರಿ: ಶೀಘ್ರದಲ್ಲಿ ಕೊಹ್ಲಿಯಿಂದ ಒಂದು ದೊಡ್ಡ ಶತಕ ಹೊರ ಬರಲಿದೆ : ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ
ಸದ್ಯ ಎರಡು ಟೆಸ್ಟ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಮೊದಲ ಪಂದ್ಯ ಡ್ರಾ ಆಗಿದ್ದು, ಲಾರ್ಡ್ಸ್ ಮೈದಾನದಲ್ಲಿ ನಡೆದ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 151ರನ್ಗಳ ಗೆಲುವು ಸಾಧಿಸಿ, 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.