ETV Bharat / sports

ಐಸಿಸಿ ಟಿ-20 ರ್ಯಾಕಿಂಗ್​ ಪಟ್ಟಿ: 6 ವರ್ಷಗಳ ಬಳಿಕ ಭಾರತಕ್ಕೆ ನಂ.1 ಸ್ಥಾನ - india got T-20 ranked No.1

ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್​ಸ್ವೀಪ್​ ಸಾಧಿಸಿದ ಬಳಿಕ ಐಸಿಸಿ ಪ್ರಕಟಿಸಿದ ಟಿ-20 ರ್ಯಾಕಿಂಗ್ ಪಟ್ಟಿಯಲ್ಲಿ ಭಾರತ 6 ವರ್ಷಗಳ ಬಳಿಕ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ..

T20Is
ರ್ಯಾಕಿಂಗ್​ ಪಟ್ಟಿ
author img

By

Published : Feb 21, 2022, 12:23 PM IST

ಕೋಲ್ಕತ್ತಾ : ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್​ಸ್ವೀಪ್​ ಸಾಧಿಸಿದ ಬಳಿಕ ಐಸಿಸಿ ಪ್ರಕಟಿಸಿದ ಟಿ-20 ರ್ಯಾಕಿಂಗ್ ಪಟ್ಟಿಯಲ್ಲಿ ಭಾರತ 6 ವರ್ಷಗಳ ಬಳಿಕ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ರ್ಯಾಕಿಂಗ್​ ಪಟ್ಟಿಯಲ್ಲಿ 269 ರೇಟಿಂಗ್​ಗಳೊಂದಿಗೆ ಇಂಗ್ಲೆಂಡ್​ ತಂಡದ ಜೊತೆಗೆ ಭಾರತ ಅಗ್ರಸ್ಥಾನ ಹಂಚಿಕೊಂಡಿದೆ. ಇನ್ನು ಪಾಕಿಸ್ತಾನ(266), ನ್ಯೂಜಿಲೆಂಡ್ (255) ಮತ್ತು ದಕ್ಷಿಣ ಆಫ್ರಿಕಾ (253) ರೇಟಿಂಗ್​ ಪಡೆಯುವುದರ ಮೂಲಕ ಅಗ್ರ 5 ಸ್ಥಾನ ಪಡೆದುಕೊಂಡಿವೆ.

ಇದಕ್ಕೂ ಮುನ್ನ ಅಂದರೆ 12ನೇ ಫೆಬ್ರವರಿ 2016ರಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್​ ದೋನಿ ಅವರ ಸಾರಥ್ಯದಲ್ಲಿ ಭಾರತ ಟಿ-20ಯಲ್ಲಿ ಮೊದಲ ಸ್ಥಾನ ಪಡೆದಿತ್ತು.

ಕೆರೆಬಿಯನ್ನರ ವಿರುದ್ಧ ಮೂರನೇ ಟಿ20ಯಲ್ಲಿ ಭಾರತ 17 ರನ್‌ಗಳ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 3-0ಯಿಂದ ವಶಪಡಿಸಿಕೊಂಡಿತು.

ಇದಕ್ಕೂ ಮೊದಲು ಏಕದಿನ ಸರಣಿಯಲ್ಲೂ 3-0 ಅಂತರದಿಂದ ವೆಸ್ಟ್​ ಇಂಡೀಸ್​ ಮುಗ್ಗರಿಸಿತ್ತು. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T-20 ಸರಣಿ ಗುರುವಾರದಿಂದ (ಫೆ.24) ಆರಂಭವಾಗಲಿದೆ.

ಓದಿ: ಅರ್ಧಶತಕ ಚಚ್ಚಿ ಕೈ ಜೋಡಿಸಿ ಸೂರ್ಯ 'ನಮಸ್ಕಾರ': ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.