ನವದೆಹಲಿ: ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಮತ್ತೆ ಮೊದಲ ಸ್ಥಾನಕ್ಕೇರಿದ್ದು, ಕೋಚ್ ರವಿಶಾಸ್ತ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಈ ಸಾಧನೆಗೆ ಪ್ರತಿಯೊಬ್ಬ ಆಟಗಾರನ ದೃಢತೆ ಮತ್ತು ಅಚಲವಾದ ಗುರಿಯೇ ಕಾರಣ. ತಂಡಕ್ಕೆ ಅನೇಕ ಅಡೆತಡೆಗಳು ಎದುರಾದರೂ ಅವುಗಳನ್ನು ಮೆಟ್ಟಿನಿಂತು ಹುಡುಗರು ಈ ಸಾಧನೆ ಮಾಡಿದ್ದಾರೆ. ನಮ್ಮ ಬಿಂದಾಸ್ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ." ಎಂದು ತಿಳಿಸಿದ್ದಾರೆ.
-
This 🇮🇳team has shown steely resolve & unwavering focus to be crowned No. 1. It is something the boys have earned fair & square. Rules changed midway but #TeamIndia overcame every hurdle along the way. My boys played tough cricket in tough times. Super proud of this bindass bunch pic.twitter.com/StzcsexCRF
— Ravi Shastri (@RaviShastriOfc) May 13, 2021 " class="align-text-top noRightClick twitterSection" data="
">This 🇮🇳team has shown steely resolve & unwavering focus to be crowned No. 1. It is something the boys have earned fair & square. Rules changed midway but #TeamIndia overcame every hurdle along the way. My boys played tough cricket in tough times. Super proud of this bindass bunch pic.twitter.com/StzcsexCRF
— Ravi Shastri (@RaviShastriOfc) May 13, 2021This 🇮🇳team has shown steely resolve & unwavering focus to be crowned No. 1. It is something the boys have earned fair & square. Rules changed midway but #TeamIndia overcame every hurdle along the way. My boys played tough cricket in tough times. Super proud of this bindass bunch pic.twitter.com/StzcsexCRF
— Ravi Shastri (@RaviShastriOfc) May 13, 2021
24 ಪಂದ್ಯಗಳಲ್ಲಿ 2,914 ಅಂಕ ಗಳಿಸಿರುವ ಭಾರತ 121 ರೇಟಿಂಗ್ ಪಾಯಿಂಟ್ಗಳನ್ನು ಪಡೆದು ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸತತ 5ನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡಿದೆ. ವಿರಾಟ್ ಕೊಹ್ಲಿ ಪಡೆಯ ವಿರುದ್ಧ ಟೆಸ್ಟ್ ಸರಣಿ ಸೋತ ನ್ಯೂಜಿಲ್ಯಾಂಡ್ ತಂಡ 120 ರೇಟಿಂಗ್ ಪಾಯಿಂಟ್ಗಳ ಮೂಲಕ 2ನೇ ಸ್ಥಾನದಲ್ಲಿದೆ. ಕಿವೀಸ್ ತಂಡ 18 ಟೆಸ್ಟ್ ಪಂದ್ಯಗಳಿಂದ 2,166 ಅಂಕಗಳನ್ನು ಸಂಪಾದಿಸಿದೆ.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯ ಪ್ರಕಾರ, ಭಾರತ ತಂಡ 121, ನ್ಯೂಜಿಲ್ಯಾಂಡ್ 120, ಇಂಗ್ಲೆಂಡ್ 109, ಆಸ್ಟ್ರೇಲಿಯಾ 108, ಪಾಕಿಸ್ತಾನ 94, ವೆಸ್ಟ್ ಇಂಡೀಸ್ 84, ದಕ್ಷಿಣ ಆಫ್ರಿಕಾ 80, ಶ್ರೀಲಂಕಾ 78, ಬಾಂಗ್ಲಾದೇಶ 46 ಮತ್ತು ಜಿಂಬಾಬ್ವೆ ತಂಡ 35 ರೇಟಿಂಗ್ ಅಂಕದೊಂದಿಗೆ 10ನೇ ಸ್ಥಾನ ಪಡೆದಿದೆ.
ಜೂನ್ 18 ರಿಂದ 22 ರವರೆಗೆ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.
ಇದನ್ನೂ ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ ಪಡೆ