ETV Bharat / sports

Vijay Hazare: ತಮಿಳುನಾಡು ವಿರುದ್ಧ ಮತ್ತೆ ಮುಗ್ಗರಿಸಿದ ಕರ್ನಾಟಕ, 151 ರನ್​ಗಳ ಹೀನಾಯ ಸೋಲು

ಆರಂಭಿಕ ಬ್ಯಾಟರ್​ ಎನ್​ ಜಗದೀಶನ್​ 101 ಎಸೆತಗಳಲ್ಲಿ 9 ಬೌಂಡರಿ ಸಹಿತ 102, ಸಾಯಿ ಕಿಶೋರ್​ 71 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್​ಗಳ ಸಹಿತ 61, ಶಾರುಕ್​ ಖಾನ್​ ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್​ಗಳ ಮೂಲಕ ಅಜೇಯ 79 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

Tamilunadu enter to semifinal after beat Karnataka by 151 runs
ಕರ್ನಾಟಕ vs ತಮಿಳುನಾಡು ವಿಜಯ ಹಜಾರೆ ಕ್ವಾರ್ಟರ್ ಫೈನಲ್
author img

By

Published : Dec 21, 2021, 5:32 PM IST

ಜೈಪುರ: ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್​ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ 151 ರನ್​ಗಳಿಂದ ಸೋಲುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಇತ್ತ ತಮಿಳುನಾಡು ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಜೈಪುರದಲ್ಲಿ ನಡೆದ 2ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ ಕರ್ನಾಟಕದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. 50 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 354 ರನ್​ಗಳಿಸಿದರು.

ಆರಂಭಿಕ ಬ್ಯಾಟರ್​ ಎನ್​ ಜಗದೀಶನ್​ 101 ಎಸೆತಗಳಲ್ಲಿ 9 ಬೌಂಡರಿ ಸಹಿತ 102, ಸಾಯಿ ಕಿಶೋರ್​ 71 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್​ಗಳ ಸಹಿತ 61, ಶಾರುಕ್​ ಖಾನ್​ ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್​ಗಳ ಮೂಲಕ ಅಜೇಯ 79 ರನ್​ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಕರ್ನಾಟಕ ಪರ ಪ್ರಸಿಧ್ ಕೃಷ್ಣ 57ಕ್ಕೆ 2, ಪ್ರವೀಣ್ ದುಬೆ 67ಕ್ಕೆ 3 ವಿಕೆಟ್, ಕಾರಿಯಪ್ಪ 46ಕ್ಕೆ 1 ವಿಕೆಟ್ ಪಡೆದರು. ವೈಶಾಕ್​ (79ಕ್ಕೆ1) ಮತ್ತು ಪ್ರತೀಕ್ ಜೈನ್​ 79 ರನ್​ ನೀಡಿ ದುಬಾರಿಯಾದರು.

355 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ 39 ಓವರ್​ಗಳಲ್ಲಿ 203 ರನ್​ಗಳಿಗೆ ಸರ್ವಪತನ ಕಂಡಿತು. ಭರವಸೆಯ ಬ್ಯಾಟರ್ ದೇವದತ್​ ಪಡಿಕಲ್​ ಶೂನ್ಯಕ್ಕೆ ಔಟಾದರೆ, ನಾಯಕ ಮನೀಶ್ ಪಾಂಡೆ 9 ರನ್​ಗಳಿಗೆ ಔಟಾಗಿದ್ದರಿಂದ ಕರ್ನಾಟಕ ಚೇತರಿಸಿಕೊಳ್ಳಲು ವಿಫಲವಾಯಿತು. ರೋಹನ್ ಕಡಮ್ 24, ಕೃಷ್ಣಮೂರ್ತಿ ಸಿದ್ಧಾರ್ಥ್​ 29, ಅಭಿನವ್ ಮನೋಹರ್​ 34, ಶ್ರೀನಿವಾಸ್​ ಶರತ್​ 43 , ಪ್ರವೀಣ್ ದುಬೆ 26 ರನ್​ಗಳಿಸಿದರು.

ತಮಿಳುನಾಡು ಪರ ಆರ್​ ಸಿಲಂಬರಸನ್​ 36ಕ್ಕೆ 4, ವಾಷಿಂಗ್ಟನ್ ಸುಂದರ್​ 43ಕ್ಕೆ 3 ವಿಕೆಟ್ ಪಡೆದರೆ, ಸಂದೀಪ್​ ವಾರಿಯ್​, ಸಾಯಿ ಕಿಶೋರ್​ ಮತ್ತು ಎಂ ಸಿದ್ಧಾರ್ಥ್​ ತಲಾ ಒಂದು ವಿಕೆಟ್ ಪಡೆದು ಬೃಹತ್ ಜಯದೊಂದಿಗೆ ತಮಿಳುನಾಡು ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ದರು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ 5 ವಿಕೆಟ್​ಗಳಿಂದ ಉತ್ತರ ಪ್ರದೇಶ ತಂಡವನ್ನು ಮಣಿಸಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಯುಪಿ ನೀಡಿದ 207 ರನ್​ಗಳ ಸಾಧಾರಣ ಗುರಿಯನ್ನು ಹಿಮಾಚಲ 45.3 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಬುಧವಾರ ನಡೆಯುವ ಮತ್ತೆರಡು ಕ್ವಾರ್ಟರ್ ಫೈನಲ್​ನಲ್ಲಿ ಸರ್ವೀಸಸ್​ ಮತ್ತು ಕೇರಳ ಹಾಗೂ ಸೌರಾಷ್ಟ್ರ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ: ರವಿಶಾಸ್ತ್ರಿಯ ಆ ಒಂದು ಹೇಳಿಕೆ ನನ್ನ ಮನಸ್ಸನ್ನು ಪುಡಿ ಪುಡಿ ಮಾಡಿತ್ತು: ಅಶ್ವಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.