ETV Bharat / sports

ಕ್ರಿಕೆಟ್​ಗೆ ಬೆಂಬಲ ಸೂಚಿಸಿದ ತಾಲಿಬಾನ್.. ಟಿ20 ವಿಶ್ವಕಪ್​ನಲ್ಲಿ ಆಡಲಿದೆ ಅಫ್ಘಾನಿಸ್ತಾನ್​.. - ಅಫ್ಘಾನಿಸ್ತಾನ ಪಾಕಿಸ್ತಾನ ಸರಣಿ

ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ತಾಲಿಬಾನ್‌ನ ರಾಜಕೀಯ ನಾಯಕ ಅನಸ್ ಹಕ್ಕಾನಿ, ಅಫ್ಘಾನಿಸ್ತಾನ ತಂಡದ ನಾಯಕ ಹಷ್ಮತುಲ್ಲಾ ಶಾಹಿದಿ ಮತ್ತು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಅಸದುಲ್ಲಾ ಮತ್ತು ನೂರ್ ಅಲಿ ಜಾದ್ರನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Taliban assured  to support Afghanistan cricket
ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿ
author img

By

Published : Aug 23, 2021, 4:40 PM IST

Updated : Aug 23, 2021, 4:50 PM IST

ಕಾಬೂಲ್ : ಅಫ್ಘಾನಿಸ್ತಾನವನ್ನು ಬಹುಪಾಲು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು​, ಎಲ್ಲಾ ರಂಗದಲ್ಲೂ ತಮ್ಮ ಅಧಿಪತ್ಯ ಸ್ಥಾಪಿಸುತ್ತಿದ್ದಾರೆ. ಈಗಷ್ಟೇ ವಿಶ್ವದ ಟಾಪ್​ ತಂಡಗಳೊಡನೆ ಗುರುತಿಸಿಕೊಳ್ಳುತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ತಾಲಿಬಾನ್ ತಿಳಿಸಿದೆ ಎನ್ನಲಾಗಿದೆ.

ತಾಲಿಬಾನ್ ಅಧಿಪತ್ಯದ ನಂತರ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ತಂಡ ಆಡುವುದೇ? ಇಲ್ಲವೇ? ಎಂಬ ಪ್ರಶ್ನೆ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ಕ್ರಿಕೆಟ್ ಮಂಡಳಿ ಜೊತೆ ಮಾತುಕತೆ ನಡೆಸಿರುವ ತಾಲಿಬಾನ್​, ತಮ್ಮ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡಿದೆ.

ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ತಾಲಿಬಾನ್‌ನ ರಾಜಕೀಯ ನಾಯಕ ಅನಸ್ ಹಕ್ಕಾನಿ, ಅಫ್ಘಾನಿಸ್ತಾನ ತಂಡದ ನಾಯಕ ಹಷ್ಮತುಲ್ಲಾ ಶಾಹಿದಿ ಮತ್ತು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಅಸದುಲ್ಲಾ ಮತ್ತು ನೂರ್ ಅಲಿ ಜಾದ್ರನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕ್ರಿಕೆಟ್ ವಲಯಕ್ಕೆ ಧೈರ್ಯ ತುಂಬಿರುವ ಹಕ್ಕಾನಿ ಕ್ರಿಕೆಟಿಗರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವ ಪ್ರತಿಜ್ಞೆ ಮಾಡಿದರು. 1996 ರಿಂದಲೂ ಅವರು ಕ್ರಿಕೆಟ್ ತಂಡಕ್ಕೆ ಭರವಸೆ ನೀಡುತ್ತಿದ್ದಾರೆ.

ಇದನ್ನು ಓದಿ:ಭಾರತದ ಜತೆಗೆ ಈ ತಂಡವೇ ಫೈನಲ್ ಪ್ರವೇಶಿಸುವ ನನ್ನ ನೆಚ್ಚಿನ ತಂಡ : ದಿನೇಶ್ ಕಾರ್ತಿಕ್

Last Updated : Aug 23, 2021, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.