ETV Bharat / sports

ಟಿ20 ವಿಶ್ವಕಪ್​ ಸೆಮಿಫೈನಲ್: ಆಂಗ್ಲರಿಗೆ ಸೆಡ್ಡು ಹೊಡೆದು ಚೊಚ್ಚಲ ಬಾರಿಗೆ ಫೈನಲ್ ತಲುಪುವುದೇ ಕಿವೀಸ್? - ಟಿ20 ವಿಶ್ವಕಪ್ 2021

2019ರ ಏಕದಿನ ವಿಶ್ವಕಪ್​ನಲ್ಲಿ ಎರಡೂ ತಂಡಗಳು ಫೈನಲ್ ತಲುಪಿದ್ದವು. ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್​ ನಡೆಸಲಾಗಿತ್ತು. ಆದರೆ ಸೂಪರ್ ಓವರ್​ ಟೈ ಆಗಿದ್ದರಿಂದ ಹೆಚ್ಚು ಬೌಂಡರಿ ಸಿಡಿಸಿದ ಆಧಾರದ ಮೇಲೆ ಇಂಗ್ಲೆಂಡ್​ ತಂಡ ಚಾಂಪಿಯನ್ ಆಗಿತ್ತು. ನಂತರ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ನ್ಯೂಜಿಲ್ಯಾಂಡ್ ತಂಡ ಫೈನಲ್​ನಲ್ಲಿ ಭಾರತವನ್ನು ಮಣಿಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು.

ಟಿ20 ವಿಶ್ವಕಪ್  ಸೆಮಿಫೈನಲ್
ಟಿ20 ವಿಶ್ವಕಪ್ ಸೆಮಿಫೈನಲ್
author img

By

Published : Nov 10, 2021, 6:17 AM IST

ಅಬುಧಾಬಿ: ಕಳೆದ ಎರಡೂ ಐಸಿಸಿ ಟ್ರೋಫಿಗಳಲ್ಲಿ ತಲಾ ಒಂದನ್ನು ಜಯಿಸಿರುವ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಬುಧವಾರ ನಡೆಯಲಿರುವ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ಮುಖಾ ಮುಖಿಯಾಗಲಿವೆ.

2019ರ ಏಕದಿನ ವಿಶ್ವಕಪ್​ನಲ್ಲಿ ಎರಡೂ ತಂಡಗಳು ಫೈನಲ್ ತಲುಪಿದ್ದವು. ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್​ ನಡೆಸಲಾಗಿತ್ತು. ಆದರೆ ಸೂಪರ್ ಓವರ್​ ಟೈ ಆಗಿದ್ದರಿಂದ ಹೆಚ್ಚು ಬೌಂಡರಿ ಸಿಡಿಸಿದ ಆಧಾರದ ಮೇಲೆ ಇಂಗ್ಲೆಂಡ್​ ತಂಡ ಚಾಂಪಿಯನ್ ಆಗಿತ್ತು. ನಂತರ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ನ್ಯೂಜಿಲ್ಯಾಂಡ್ ತಂಡ ಫೈನಲ್​ನಲ್ಲಿ ಭಾರತವನ್ನು ಮಣಿಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು.

2021ರ ಟಿ20 ವಿಶ್ವಕಪ್​ನಲ್ಲಿ ಎರಡೂ ತಂಡಗಳು ತಲಾ 4 ಪಂದ್ಯಗಳಲ್ಲಿ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದುಕೊಂಡಿವೆ. ಬುಧವಾರ ಅಬುಧಾಬಿಯಲ್ಲಿ ಮೊದಲ ಸೆಮಿಫೈನಲ್​ನಲ್ಲಿ ಮತ್ತೆ ಮುಖಾಮುಖಿಯಾಗಲಿದ್ದು, ಮತ್ತೊಮ್ಮೆ 2019ರ ರೋಚಕ ಕ್ಷಣ ಮರು ಸೃಷ್ಟಿಯಾಗುವುದನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್​ಗೂ ಮುನ್ನ ದೊಡ್ಡ ಆಘಾತವಾಗಿದೆ. ಆರಂಭಿಕ ಬ್ಯಾಟರ್ ಜೇಸನ್ ರಾಯ್​ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಟೂರ್ನಿ ಮಧ್ಯೆಯೇ ತೈಮಲ್ ಮಿಲ್ಸ್ ಗಾಯಕ್ಕೊಳಗಾಗಿದ್ದರು. ಈ ಕಾರಣದಿಂದಲೇ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದರು. ಫೈನಲ್ ಪಂದ್ಯದಲ್ಲಿ ಡೇವಿಡ್ ವಿಲ್ಲೆ ಅಥವಾ ಟಾಮ್ ಕರ್ರನ್​ ಆಡುವ ಸಾಧ್ಯತೆಯಿದೆ.

ಇತ್ತ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಬಿಟ್ಟರೆ ಎಲ್ಲಾ ಪಂದ್ಯಗಳಲ್ಲೂ ಪ್ರಾಬಲ್ಯ ಪ್ರದರ್ಶಿಸಿರುವ ನ್ಯೂಜಿಲ್ಯಾಂಡ್​ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮುಖಾಮುಖಿ: ಎರಡೂ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 13ರಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯ ಸಾಧಿಸಿದೆ. ಕಿವೀಸ್​ 7ರಲ್ಲಿ ಜಯ ಸಾಧಿಸಿದ್ದರೆ, ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.

ಸಂಭಾವ್ಯ ತಂಡಗಳು:

ಇಂಗ್ಲೆಂಡ್: ಜೋಸ್ ಬಟ್ಲರ್ (ವಿಕೀ), ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಮೊಯೀನ್ ಅಲಿ, ಇಯಾನ್ ಮಾರ್ಗನ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಆದಿಲ್ ರಶೀದ್

ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೀ), ಗ್ಲೇನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಅ್ಯಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್

ಇದನ್ನು ಓದಿ:ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಟೀಂ​ ಇಂಡಿಯಾ ಆಯ್ಕೆ: ರೋಹಿತ್​ ಕ್ಯಾಪ್ಟನ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.