ETV Bharat / sports

ಟಿ20 ವಿಶ್ವಕಪ್​ನಲ್ಲಿ ವಿರಾಟ್​ ವಿಕ್ರಮ.. ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆ ಪುಡಿ - ಬಾಂಗ್ಲಾ ವಿರುದ್ಧ ವಿರಾಟ್​ ದಾಖಲೆ

ಟಿ20 ವಿಶ್ವಕಪ್​ನಲ್ಲಿ ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ ಹೊಸ ದಾಖಲೆ ಬರೆದರು. ಮಹೇಲಾ ಜಯವರ್ಧನೆ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು.

world-cup
ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆ ಪುಡಿ
author img

By

Published : Nov 2, 2022, 2:59 PM IST

Updated : Nov 2, 2022, 3:44 PM IST

ಅಡಿಲೇಡ್​(ಆಸ್ಟ್ರೇಲಿಯಾ): ಚೇಸ್​ ಮಾಸ್ಟರ್​ ವಿರಾಟ್ ಕೊಹ್ಲಿ ಬತ್ತಳಿಕೆಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಟಿ 20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ವಿಶ್ವದ ಮೊದಲ ಬ್ಯಾಟರ್​ ಎಂಬ ದಾಖಲೆ ಬರೆದರು. ಶ್ರೀಲಂಕಾದ ಲೆಜೆಂಡರಿ ಬ್ಯಾಟರ್​ ಮಹೇಲಾ ಜಯವರ್ಧನೆ ಹೆಸರಲ್ಲಿದ್ದ ಈ ದಾಖಲೆಯನ್ನು ಪುಡಿ ಮಾಡಿದರು.

ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್​ನಲ್ಲಿ 1016 ರನ್​ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ವಿರಾಟ್​ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 28 ರನ್​ ಗಳಿಸಿದಾಗ ಈ ದಾಖಲೆ ಮುರಿಯಿತು. ವಿರಾಟ್​ ಇದಕ್ಕೂ ಮೊದಲು ಅವರು 989 ರನ್​ ಗಳಿಸಿದ್ದರು.

ಚುಟುಕು ಕ್ರಿಕೆಟ್​ನಲ್ಲಿ ಮಹೇಲಾ ಜಯವರ್ಧನೆ 1016 ರನ್​ಗಳನ್ನು 31 ಪಂದ್ಯಗಳಲ್ಲಿ ಗಳಿಸಿದ್ದರು. ವಿರಾಟ್​ ಕೊಹ್ಲಿ ಈ ದಾಖಲೆಯನ್ನು 24 ನೇ ಪಂದ್ಯದಲ್ಲಿ ಪೂರ್ಣಗೊಳಿಸಿದರು. ಕ್ರಿಸ್​ಗೇಲ್​ 33 ಪಂದ್ಯಗಳಲ್ಲಿ 965 ರನ್​ ಗಳಿಸಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ನಾಯಕ ರೋಹಿತ್​ ಶರ್ಮಾ 35 ಪಂದ್ಯಗಳಾಡಿದ್ದು, 904 ರನ್​ ಗಳಿಸಿದ್ದಾರೆ. ತಿಲಕರತ್ನೆ ದಿಲ್ಯಾನ್​ 897 ರನ್​ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.

ಓದಿ: ICC Ranking : ಮೊದಲ ಸ್ಥಾನಕ್ಕೇರಿದ ಸೂರ್ಯ ಕುಮಾರ್​ ಯಾದವ್​

Last Updated : Nov 2, 2022, 3:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.