ETV Bharat / sports

ಟಿ 20 ವಿಶ್ವಕಪ್​: ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ವಿರುದ್ಧ ಸೆಣಸೋರ್ಯಾರು? - ಗ್ರೂಪ್​ 2 ರಲ್ಲಿ ಮುಗಿಯದ ಸೆಣಸು

ಟಿ 20 ವಿಶ್ವಕಪ್ ಗುಂಪು ಹಂತದ ಪಂದ್ಯಗಳ ಮುಕ್ತಾಯದಲ್ಲಿದೆ. ಗ್ರೂಪ್​ 1 ರಿಂದ ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ಸೆಮಿಫೈನಲ್​ ಹಂತಕ್ಕೆ ತಲುಪಿದರೆ, ಗ್ರೂಪ್​ 2 ರಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶದ ಮಧ್ಯೆ ಪೈಪೋಟಿ ಮುಂದುವರಿದಿದೆ.

t20-world-cup
ಟಿ 20 ವಿಶ್ವಕಪ್
author img

By

Published : Nov 5, 2022, 7:11 PM IST

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಗುಂಪು ಹಂತದ ಪಂದ್ಯಗಳು ಮುಕ್ತಾಯದ ಹಂತದಲ್ಲಿವೆ. ಗ್ರೂಪ್​ 1 ರಲ್ಲಿ ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ಸೆಮಿಫೈನಲ್​ ತಲುಪಿವೆ. ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ವಿಶ್ವಕಪ್​ನಿಂದ ಹೊರಬಿದ್ದು ತವರು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಗ್ರೂಪ್​ 2 ರಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ರೇಸ್​ನಲ್ಲಿದ್ದು, ಕೊನೆಯ ಪಂದ್ಯ ಸೆಮೀಸ್​ ಹಣೆಬರಹ ಬರೆಯಲಿವೆ.

ಕ್ರಿಕೆಟ್​ ಶಿಶುಗಳಾದ ಐರ್ಲೆಂಡ್​, ನೆದರ್​ಲ್ಯಾಂಡ್ಸ್​, ಜಿಂಬಾಬ್ವೆ ತಂಡಗಳು ಬಲಿಷ್ಠ ತಂಡಗಳಿಗೆ ದಂಗು ಬಡಿಸಿವೆ. ಜಿಂಬಾಬ್ವೆ ಪಾಕಿಸ್ತಾನದ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿದ್ದಲ್ಲದೇ, ಆ ತಂಡದ ಸೆಮಿಫೈನಲ್​ ಹಾದಿಗೆ ಮುಳ್ಳಾಯಿತು. ಬ್ಯಾಟಿಂಗ್​ ಪಡೆಯನ್ನೇ ಹೊಂದಿರುವ ಇಂಗ್ಲೆಂಡ್​ಗೆ, ಐರ್ಲೆಂಡ್​ ಕನಸಲ್ಲೂ ಕಾಡುವಂತೆ ಸೋಲುಣಿಸಿತು. ಇದು ಆ ತಂಡಗಳ ಮುಂದಿನ ಹಾದಿಗೆ ಅಡ್ಡಿಯುಂಟು ಮಾಡಿದವು.

ಪಾಯಿಂಟ್​ ಪಟ್ಟಿ
ಪಾಯಿಂಟ್​ ಪಟ್ಟಿ

ಆಸೀಸ್​ಗೆ ತವರಲ್ಲೇ ಮುಖಭಂಗ: ಕಳೆದ ಆವೃತ್ತಿಯ ಚಾಂಪಿಯನ್​ ಆಗಿರುವ ಆಸ್ಟ್ರೇಲಿಯಾ 2022 ರ ಟಿ20 ವಿಶ್ವಕಪ್​ ಅನ್ನು ತನ್ನದೇ ನೆಲದಲ್ಲಿ ಆಯೋಜಿಸಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಆಸೀಸ್​ ಅದೃಷ್ಟದಾಟದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದು ತವರಿನ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟು ಮಾಡಿದೆ. ತವರು ನೆಲದ ಲಾಭ ಪಡೆದು ಈ ಬಾರಿಯೂ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದ್ದ ತಂಡಕ್ಕೆ ಮಳೆ ಮತ್ತು ಅದೃಷ್ಟ ಎರಡೂ ಕೈಕೊಟ್ಟವು. 1 ಪಂದ್ಯ ಮಳೆಗೆ ಆಹುತಿಯಾಗಿತ್ತು.

ಬಡ್ತಿ ಪಡೆದ ನ್ಯೂಜಿಲ್ಯಾಂಡ್​ ಇಂಗ್ಲೆಂಡ್​: ಮೊದಲ ಗುಂಪಿನಲ್ಲಿ ಉತ್ತಮ ರನ್​ ರೇಟ್​ ಆಧಾರದ ಮೇಲೆ ನ್ಯೂಜಿಲ್ಯಾಂಡ್​ ಮೊದಲ ತಂಡವಾಗಿ ಸೆಮಿಫೈನಲ್​ ತಲುಪಿದರೆ, ಎರಡನೇ ತಂಡವಾಗಿ ಇಂಗ್ಲೆಂಡ್​ ಬಡ್ತಿ ಪಡೆಯಿತು. ಗುಂಪಿನಲ್ಲಿದ್ದ ಶ್ರೀಲಂಕಾ, ಆಸ್ಟ್ರೇಲಿಯಾ, ಐರ್ಲೆಂಡ್​, ಅಫ್ಘಾನಿಸ್ತಾನ ಮನೆಯ ದಾರಿ ಹಿಡಿದವು.

ಗ್ರೂಪ್​ 2 ರಲ್ಲಿ ಮುಗಿಯದ ಸೆಣಸು: ಇನ್ನು ಗ್ರೂಪ್​ 2 ರಲ್ಲಿ ಸೆಮಿಫೈನಲ್ ಹಣಾಹಣಿಗೆ ಇನ್ನೂ ತೆರೆ ಬಿದ್ದಿಲ್ಲ. ಭಾರತ ಮತ್ತು ದಕ್ಷಿಣ ಆಫ್ರಿಕಾ ಇನ್ನೊಂದು ಪಂದ್ಯ ಗೆದ್ದಲ್ಲಿ ಸೆಮಿಫೈನಲ್ ನೇರ ಪ್ರವೇಶ ಪಡೆಯಲಿವೆ. ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳು ಇನ್ನೂ ರೇಸ್​ನಲ್ಲಿದ್ದು, ಭಾರತ, ಹರಿಣಗಳ ಸೋಲಿಗೆ ಕಾಯುತ್ತಿವೆ.

ಒಂದು ವೇಳೆ ಜಿಂಬಾಬ್ವೆ ವಿರುದ್ಧ ಭಾರತ, ನೆದರ್​ಲ್ಯಾಂಡ್ಸ್​ ವಿರುದ್ಧ ದಕ್ಷಿಣ ಆಫ್ರಿಕಾ ಸೋತಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಗೆದ್ದು ರನ್​ರೇಟ್​ ಆಧಾರದ ಮೇಲೆ ಸೆಮೀಸ್​ಗೆ ಎಂಟ್ರಿ ಪಡೆಯುವ ಅವಕಾಶ ಇದೆ. ಬಾಂಗ್ಲಾಗೂ ನಾಲ್ಕರಘಟ್ಟಕ್ಕೆ ಅಷ್ಟೇನೂ ಅವಕಾಶ ಇಲ್ಲದಿದ್ದರೂ ಅದೃಷ್ಟದ ಹಾದಿಯಲ್ಲಿದೆ.

ಗೆಲುವೊಂದೇ ಭಾರತಕ್ಕಿರುವ ಮಾರ್ಗ: ಎರಡನೇ ಗುಂಪಿನಲ್ಲಿರುವ ಭಾರತ ಆಡಿರುವ 4 ಪಂದ್ಯಗಳಲ್ಲಿ 3 ಗೆದ್ದು, 1 ಸೋತು 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನವೆಂಬರ್​​ 6 ರಂದು ನಡೆಯುವ ಜಿಂಬಾಬ್ವೆ ವಿರುದ್ಧ ಗೆದ್ದು 8 ಅಂಕಗಳೊಂದಿಗೆ ಏಕಮೇವವಾಗಿ ನಾಲ್ಕರಘಟ್ಟಕ್ಕೆ ತಲುಪಲಿದೆ. ದಕ್ಷಿಣ ಆಫ್ರಿಕಾ ಕೂಡ ನೆದರ್​ಲ್ಯಾಂಡ್ಸ್​ ವಿರುದ್ಧ ಗೆದ್ದರೆ 7 ಅಂಕಗಳೊಂದಿಗೆ ಭಾರತದ ಜೊತೆ ಸೆಮೀಸ್​ಗೆ ತಲುಪಲಿದೆ.

ಓದಿ: ಶ್ರೀಲಂಕಾ ಸೋಲಿಸಿ ಇಂಗ್ಲೆಂಡ್​ ಸೆಮೀಸ್​ಗೆ ಲಗ್ಗೆ.. ಟೂರ್ನಿಯಿಂದ ಆತಿಥೇಯ ಆಸ್ಟ್ರೇಲಿಯಾ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.