ಅಬುಧಾಬಿ: ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ತಂಡವನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ಸೆಮಿಫೈನಲ್ಸ್ಗೆ ಮತ್ತಷ್ಟು ಹತ್ತಿರವಾಗಿದೆ.
ಅಬುಧಾಬಿಯ ಶೇಖ್ ಸೈಯದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಎದುರಾಳಿ ಬಾಂಗ್ಲಾದೇಶ ತಂಡವನ್ನು ಕೇವಲ 84 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಈ ಸಾಧಾರಣ ಗುರಿಯನ್ನು 13.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಚೇಸ್ ಮಾಡುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ನಾಯಕ ಟೆಂಬ ಬವೂಮ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ ಅಜೇಯ 31 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ವ್ಯಾನ್ ಡರ್ ಡಸೆನ್ 22, ಡಿಕಾಕ್ 18 ರನ್ಗಳಿಸಿದರು.
-
South Africa make it three victories in a row 📈#T20WorldCup | #SAvBAN | https://t.co/ahwmbzGcK2 pic.twitter.com/F7JrufkHTw
— T20 World Cup (@T20WorldCup) November 2, 2021 " class="align-text-top noRightClick twitterSection" data="
">South Africa make it three victories in a row 📈#T20WorldCup | #SAvBAN | https://t.co/ahwmbzGcK2 pic.twitter.com/F7JrufkHTw
— T20 World Cup (@T20WorldCup) November 2, 2021South Africa make it three victories in a row 📈#T20WorldCup | #SAvBAN | https://t.co/ahwmbzGcK2 pic.twitter.com/F7JrufkHTw
— T20 World Cup (@T20WorldCup) November 2, 2021
ಬಾಂಗ್ಲಾದೇಶದ ಪರ ತಸ್ಕಿನ್ ಅಹ್ಮದ್ 18ಕ್ಕೆ2, ಮೆಹದಿ ಹಸನ್ 19ಕ್ಕೆ1 ಮತ್ತು ನಸುಮ್ ಸಹ್ಮದ್ 22ಕ್ಕೆ1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ಬೌಲರ್ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 18.2 ಓವರ್ಗಳಲ್ಲಿ ಕೇವಲ 84 ರನ್ಗಳಿಗೆ ಸರ್ವಪತನಗೊಂಡಿತ್ತು.
8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಮೆಹೆದಿ ಹಸನ್ 27 ರನ್ ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಇವರನ್ನು ಹೊರತುಪಡಿಸಿದರೆ ಆರಂಭಿಕ ಬ್ಯಾಟರ್ ಲಿಟನ್ ದಾಸ್ (24) ಮಾತ್ರ ಬಾಂಗ್ಲಾ ಪರ 20 ರನ್‌ಗಳ ಗಡಿ ದಾಟಿದರು.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 20ಕ್ಕೆ 3, ತಬ್ರೈಜ್ ಶಮ್ಸಿ 21ಕ್ಕೆ 2,, ಎನ್ರಿಚ್ ನಾರ್ಕಿಯಾ 8ಕ್ಕೆ 3 ಹಾಗೂ ಪ್ರೆಟೋರಿಯಸ್ 11ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು.
ಇದನ್ನೂ ಓದಿ: ಟಿ20 ವಿಶ್ವಕಪ್ನಲ್ಲಿ ವೈಫಲ್ಯ: ಕೊಹ್ಲಿ ODI ನಾಯಕತ್ವದಲ್ಲಿ ಮುಂದುವರಿಯುವುದು ಅನುಮಾನ!