ETV Bharat / sports

T20 World Cup: ಟೀಂ ಇಂಡಿಯಾ ಬೌಲಿಂಗ್​ ದಾಳಿಗೆ ಪಾಕ್ ತತ್ತರ​.. ಭಾರತಕ್ಕೆ 160 ರನ್​ ಗುರಿ

author img

By

Published : Oct 23, 2022, 3:56 PM IST

ಟಿ20 ವಿಶ್ವಕಪ್​ನ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 159 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ಭಾರತದ ಕರಾರುವಾಕ್​ ಬೌಲಿಂಗ್​ ದಾಳಿಗೆ ಪಾಕ್​ ತತ್ತರಿಸಿತು.

t20-world-cup-live-india-vs-pakistan
ಭಾರತ ಬೌಲಿಂಗ್​ ದಾಳಿಗೆ ತತ್ತರಿಸಿದ ಪಾಕ್

ಮೆಲ್ಬರ್ನ್​(ಆಸ್ಟ್ರೇಲಿಯಾ): ಟಿ20 ವಿಶ್ವಕಪ್​ನ ಸೂಪರ್​ 12 ಹಂತದ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಭಾರತ 159 ರನ್​ಗೆ ಕಟ್ಟಿಹಾಕಿತು. ಆರಂಭದಿಂದಲೇ ಪಾಕ್​ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ ಬಹುನಿರೀಕ್ಷೆಯ ಪಂದ್ಯದಲ್ಲಿ ಘನತೆಗೆ ತಕ್ಕ ಆಟವಾಡಿತು. ಯುವ ವೇಗಿ ಅರ್ಷದೀಪ್​ ಸಿಂಗ್​, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾರ ಮಾರಕ ಬೌಲಿಂಗ್​ ದಾಳಿಯಿಂದ ಪಾಕ್​ ತಂಡವನ್ನು ಪುಡಿಗಟ್ಟಿತು.

ಭಾರತಕ್ಕೆ ಕನಸಿನ ಆರಂಭ: ಪಾಕ್​ ತಂಡದ ಆಧಾರ ಸ್ತಂಭಗಳಾದ ನಾಯಕ ಬಾಬರ್​ ಅಜಂ ಮತ್ತು ಮೊಹಮದ್​ ರಿಜ್ವಾನ್​ರನ್ನು ಬೇಗನೇ ಔಟ್​ ಮಾಡಿದ ಭಾರತ ಕನಸಿನ ಆರಂಭ ಪಡೆಯಿತು. ಇನ್ನಿಂಗ್ಸ್​ನ 2 ನೇ ಓವರ್​ನ ಮೊದಲ ಎಸೆತದಲ್ಲಿಯೇ ಬಾಬರ್​ ಅಜಂರನ್ನು ಅರ್ಷದೀಪ್​ ಸಿಂಗ್​ ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಪಾಕ್​ ನಾಯಕ ಸೊನ್ನೆಗೆ ಔಟಾದರು. ಬಳಿಕ ಹೊಡಿಬಡಿ ಆಟಗಾರ ಮೊಹಮದ್​ ರಿಜ್ವಾನ್​ 4 ರನ್​ಗೆ ಪಂಜಾಬ್​ ವೇಗಿಗೆ ವಿಕೆಟ್​ ಒಪ್ಪಿಸಿದರು.

ಮಸೂದ್​, ಅಹ್ಮದ್​ ಹೋರಾಟ: ತಂಡ ದಿಢೀರ್​ ಕುಸಿತಕ್ಕೆ ಒಳಗಾಗುವ ಭೀತಿಯಲ್ಲಿದ್ದ ತಂಡವನ್ನು ಶಾನ್​ ಮಸೂದ್​ ಮತ್ತು ಇಫ್ತಿಖಾರ್​ ಅಹ್ಮದ್​ ತಡೆದರು. ಉತ್ತಮ ಬ್ಯಾಟ್​ ಬೀಸಿದ ಇಬ್ಬರು ಅರ್ಧಶತಕ ಗಳಿಸಿದರು. ಮಸೂದ್​ ನಿಧಾನಗತಿಯ ಬ್ಯಾಟ್​ ಮಾಡಿ ಔಟಾಗದೇ 52 ರನ್​ ಗಳಿಸಿದರು.

ಇಫ್ತಿಖಾರ್​ ಅಹ್ಮದ್​ ಆರಂಭದಲ್ಲಿ ನಿಧಾನವಾಗಿ ಆಡಿದರೂ ಲಯ ಕಂಡುಕೊಂಡ ಬಳಿಕ ಬಿರುಸಿನ ಬ್ಯಾಟ್​ ಮಾಡಿ 51 ರನ್​ ಬಾರಿಸಿದರು. ಇದರಲ್ಲಿ 4 ಸಿಕ್ಸರ್​, 2 ಬೌಂಡರಿ ಇದ್ದವು. ಇಫ್ತಿಖಾರ್​ ಔಟಾದ ಬಳಿಕ ತಂಡ ಮತ್ತೆ ಕುಸಿತ ಕಂಡಿತು. ನಾಲ್ವರು ಬ್ಯಾಟರ್​ಗಳು ಎರಡಂಕಿ ಮೊತ್ತ ದಾಟಲಿಲ್ಲ. ಕೊನೆಯಲ್ಲಿ ಶಾಹೀನ್​ ಆಫ್ರಿದಿ 16 ರನ್​ ಚಚ್ಚಿದರು.

ಪಾಕ್​ಗೆ ವೇಗಿಗಳ ಡಬಲ್​ ಸ್ಟ್ರೋಕ್​: ವೇಗಿಗಳ ವೈಫಲ್ಯದಿಂದ ತಂಡ ಪಂದ್ಯಗಳನ್ನು ಕೈಚೆಲ್ಲುತ್ತಿದ್ದುದು ಚಿಂತೆಗೆ ಕಾರಣವಾಗಿತ್ತು. ಪಾಕ್​​ ವಿರುದ್ಧದ ಪಂದ್ಯದಲ್ಲಿ ಮಿಂಚಿದ ವೇಗಿಗಳು ಕರಾರುವಾಕ್​ ದಾಳಿ ಮಾಡಿದರು. ಹಾರ್ದಿಕ್​ ಪಾಂಡ್ಯಾ, ಅರ್ಷದೀಪ್​ ಸಿಂಗ್​ ತಲಾ 3 ವಿಕೆಟ್​ ಪಡೆದರೆ, ಭುವನೇಶ್ವರ್​ ಕುಮಾರ್​, ಮೊಹಮದ್​ ಶಮಿ ತಲಾ 1 ವಿಕೆಟ್​ ಕಿತ್ತರು.

ಓದಿ: ಟಿ20 ವಿಶ್ವಕಪ್‌: ಪಾಕ್‌ ಎದುರು ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.