ಮುಂಬೈ: ಒಮಾನ್ ಮತ್ತು ಯುಎಇಯಲ್ಲಿ ನಡೆಯುತ್ತಿರುವ 2021ರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡದ ಟ್ರೋಪಿ ಗೆಲ್ಲುವ ನೆಚ್ಚಿನ ತಂಡವಾಗಿದೆ, ಇಲ್ಲಿನ ಪರಿಸ್ಥಿತಿ ಅವರಿಗೆ ಸೂಕ್ತವಾಗಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
ಗಲ್ಫ್ ರಾಷ್ಟ್ರದ ಪರಿಸ್ಥಿತಿ ಹೆಚ್ಚು ಕಡಿಮೆ ಉಪಖಂಡದಂತಿರುವುದರಿಂದ ವಿರಾಟ್ ಕೊಹ್ಲಿ ಬಳಗ ವಿಶ್ವಕಪ್ ಎತ್ತಿ ಹಿಡಿಯಲು ಅತ್ಯುತ್ತಮ ಅವಕಾಶ ಹೊಂದಿದೆ. ಇದೇ ಅವರನ್ನು ಟೂರ್ನಮೆಂಟ್ನಲ್ಲಿ ಅತ್ಯಂತ ಅಪಾಯಕಾರಿ ತಂಡವನ್ನಾಗಿ ಮಾಡಿದೆ ಎಂದು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
"ಯಾವುದೇ ಪಂದ್ಯಾವಳಿಯಲ್ಲಿ, ಒಂದು ನಿರ್ದಿಷ್ಟ ತಂಡ ಗೆಲ್ಲುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಗೆಲ್ಲಲು ಎಷ್ಟು ಅವಕಾಶವಿದೆ ಎಂಬುದರ ಬಗ್ಗೆ ಅಷ್ಟೆ ಹೇಳಬಹುದು. ನನ್ನ ಪ್ರಕಾರ ಈ ಟೂರ್ನಮೆಂಟ್ಅನ್ನು ಗೆಲ್ಲುವ ಇತರ ತಂಡಗಳಿಗಿಂತ ಭಾರತಕ್ಕೆ ಹೆಚ್ಚಿನ ಅವಕಾಶವಿದೆ, ಅವರು ಅನುಭವವುಳ್ಳ ಟಿ-20 ಆಟಗಾರರನ್ನು ಹೊಂದಿದ್ದಾರೆ. ಅದಕ್ಕಾಗಿ ಈ ರೀತಿಯ ಪರಿಸ್ಥಿತಿಗಳಲ್ಲಿ ಭಾರತ ನೆಚ್ಚಿನ ತಂಡ "ಎಂದು ಇಂಜಮಾಮ್ ಭಾರತ ಏಕೆ ಟ್ರೋಫಿ ಎತ್ತಿ ಹಿಡಿಯುವ ತಂಡ ಎನ್ನುವುದನ್ನು ವಿವರಿಸಿದ್ದಾರೆ.
ಭಾರತ ತಂಡದ ಬ್ಯಾಟರ್ಸ್ ಮತ್ತು ಬೌಲರ್ಸ್ ಇಲ್ಲಿನ ಪಿಚ್ಗಳಲ್ಲಿ ಸಾಕಷ್ಟು ಆಡಿದ ಅನುಭವ ಹೊಂದಿದ್ದಾರೆ. ಇತ್ತೀಚಿಗೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆದಿದ್ದು, ಅಲ್ಲಿ ಭಾರತೀಯ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಪಡೆ ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಭಾರತ ತಂಡದ ಆರಾಮದಾಯಕ ಜಯ ಸಾಧಿಸಿದ್ದನ್ನು ಪ್ರಶಂಸಿಸಿದ್ದಾರೆ.
ಇದನ್ನು ಓದಿ:ಭಾರತ ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿ, ಬಲಶಾಲಿ ತಂಡ ಹೊಂದಿದೆ ಎಂದ ಸ್ಟೀವ್ ಸ್ಮಿತ್