ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ತಮ್ಮ ಕ್ರಿಕೆಟ್ ಬದುಕಿನಲ್ಲೇ ಅಮೋಘ ಫಾರ್ಮ್‌ನಲ್ಲಿದ್ದಾರೆ. ಲೀಲಾಜಾಲವಾಗಿ ಬ್ಯಾಟ್ ಬೀಸಿ ಎದುರಾಳಿ ಬೌಲರ್‌ಗಳನ್ನು ದಂಡಿಸುವ ರೀತಿಯೇ ಇದಕ್ಕೆ ಸಾಕ್ಷಿ. ಇದಕ್ಕೊಂದು ಹೊಸ ನಿದರ್ಶನ ನಿನ್ನೆ ಆಸ್ಟ್ರೇಲಿಯಾದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಪಂದ್ಯ.
ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾದ ಈ ಬಲಗೈ ಆಟಗಾರ ಕ್ರೀಸ್ ಕಚ್ಚಿ ನಿಂತರು ಎಂದರೆ ಪ್ರತಿಸ್ಪರ್ಧಿ ತಂಡದ ಜಂಘಾಬಲ ಉಡುಗುವುದಂತೂ ನಿಶ್ಚಿತ ಎನ್ನಲೇಬೇಕು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಾಗ ಸೂರ್ಯಕುಮಾರ್ ಯಾದವ್ ಮೇಲೆ ಅಂಥ ನಿರೀಕ್ಷೆಗಳೇನೂ ಇರಲಿಲ್ಲ. ಆದ್ರೆ ಅಂಗಣಕ್ಕಿಳಿದವರೇ ಅಭಿಮಾನಿಗಳಿಗೆ ತಮ್ಮ ಬ್ಯಾಟಿಂಗ್ ವೈಖರಿಯ ಮೂಲಕ ರಸದೌತಣ ನೀಡಿದರು. ಅದರಲ್ಲೂ ಅವರು ಬಾರಿಸಿದ ಒಂದು ಹೊಡೆತವಂತೂ ಕ್ರಿಕೆಟ್ ಪ್ರಿಯರನ್ನು ಅಕ್ಷರಶ: ಹುಚ್ಚೆಬ್ಬಿಸಿತು. ಈ ಆಕರ್ಷಕ ಸಿಕ್ಸರ್ ನೋಡಿ.
-
Superb Surya!
— ICC (@ICC) November 6, 2022 " class="align-text-top noRightClick twitterSection" data="
Iconic moments like this from every game will be available as officially licensed ICC digital collectibles with @0xfancraze.
Visit https://t.co/8TpUHbQikC today to see if this could be a Crictos of the Game. pic.twitter.com/EMo1LVMxKv
">Superb Surya!
— ICC (@ICC) November 6, 2022
Iconic moments like this from every game will be available as officially licensed ICC digital collectibles with @0xfancraze.
Visit https://t.co/8TpUHbQikC today to see if this could be a Crictos of the Game. pic.twitter.com/EMo1LVMxKvSuperb Surya!
— ICC (@ICC) November 6, 2022
Iconic moments like this from every game will be available as officially licensed ICC digital collectibles with @0xfancraze.
Visit https://t.co/8TpUHbQikC today to see if this could be a Crictos of the Game. pic.twitter.com/EMo1LVMxKv
ಈ ಶಾಟ್ ಅರೆಕ್ಷಣ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಣ್ಣರಳಿಸಿ ನೋಡುವಂತಿತ್ತು. ಜಿಂಬಾಬ್ವೆಯ ವೇಗಿ ನಗವಾರ ಎಸೆದ ಆಫ್ ಸೈಡ್ ಫುಲ್ ಟಾಸ್ ಅನ್ನು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಮೂಲಕ ನೇರವಾಗಿ ಸಿಕ್ಸರ್‌ಗಟ್ಟಿದ ರೀತಿಯಂತೂ ಮಂತ್ರಮುಗ್ಧಗೊಳಿಸುವಂತಿತ್ತು. ಆಗ ಸ್ಟೇಡಿಯಂನಲ್ಲಿದ್ದವರು ಸುಪರ್ಬ್ ಸೂರ್ಯ, ಸೂರ್ಯ ಎಂದೆಲ್ಲಾ ಪ್ರತಿಭಾವಂತ ಬ್ಯಾಟರ್‌ನ ಗುಣಗಾನ ಮಾಡಿದರು. ಅಷ್ಟು ಮಾತ್ರವಲ್ಲ, ಕ್ರಿಕೆಟ್ ತಜ್ಞರಿಗೂ ಸೂರ್ಯ ಕುಮಾರ್ ಬ್ಯಾಟಿಂಗ್ ಇಷ್ಟವಾಗಿದೆ.
ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ ಅಮೋಘ 62 ರನ್ ಸಿಡಿಸಿದರು. ಇದರಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು. ಟೂರ್ನಿಯಲ್ಲಿ ಈವರೆಗೆ 225 ರನ್ ಗಳಿಸಿದ್ದಾರೆ.
ಇದನ್ನೂಓದಿ: ವಿರಾಟ್ ಕೊಹ್ಲಿಯೂ ಸಾಧಿಸದ ದಾಖಲೆ ಬರೆದ ಸೂರ್ಯಕುಮಾರ್.. ಏನದು?