ETV Bharat / sports

T20 World Cup|2007ರ ಇತಿಹಾಸ ಮರುಸೃಷ್ಟಿಸಲು ಪ್ರತಿಯೊಬ್ಬರೂ ಪ್ರಯತ್ನಿಸಲಿದ್ದೇವೆ: ರೋಹಿತ್ - ಭಾರತ ಕ್ರಿಕೆಟ್​ ತಂಡದಿಂದ ಇತಿಹಾಸ ಸೃಷ್ಟಿ

ಈ ವರ್ಷದ ಐಸಿಸಿ ಟಿ20 ವಿಶ್ವಕಪ್​ನಲ್ಲೂ ಪ್ರತಿಯೊಬ್ಬರೂ ಇತಿಹಾಸವನ್ನು ಮರು ಸೃಷ್ಟಿಸುವುದಕ್ಕಾಗಿ ನಮ್ಮಿಂದಾಗುವುದನ್ನೆಲ್ಲಾ ಮಾಡಲಿದ್ದೇವೆ. ನಾವು ಅದಕ್ಕಾಗಿಯೇ ಬಂದಿದ್ದೇವೆ. ಮತ್ತೊಮ್ಮೆ ಸಾಧಿಸೋಣ. ನಾನು ಇಲ್ಲಿಗೆ ಗೆಲ್ಲುವುದಕ್ಕಾಗಿಯೇ ಇದ್ದೇನೆ ಎಂದು ರೋಹಿತ್ ಬರೆದುಕೊಂಡಿದ್ದಾರೆ.

T20 World Cup
ರೋಹಿತ್ ಶರ್ಮಾ
author img

By

Published : Sep 29, 2021, 8:34 PM IST

Updated : Sep 29, 2021, 9:09 PM IST

ನವದೆಹಲಿ: ಅಕ್ಟೋಬರ್​ 17ರಿಂದ ಯುಎಇಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್​ನಲ್ಲಿ ತಂಡದ ಪ್ರತಿಯೊಬ್ಬ ಸದಸ್ಯರೂ ಸೇರಿ 2007ರ ಟಿ20 ವಿಶ್ವಕಪ್​ನಲ್ಲಿನ ತೋರಿದ ಚಮತ್ಕಾರವನ್ನು ಮತ್ತೆ ಸಂಭವಿಸುವಂತೆ ಮಾಡುತ್ತೇವೆ ಎಂದು ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2007ರ ಚೊಚ್ಚಲ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಭಾರತದ ಮೂರು ಪಂದ್ಯಗಳನ್ನಾಡಿದ್ದರು. ಮೂರು ಪಂದ್ಯಗಳಲ್ಲೂ ಅಜೇಯರಾಗುಳಿದಿದ್ದ ಅವರು ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 50 ರನ್​ಗಳಿಸಿ ಗೆಲುವಿನ ರೂವಾರಿ ಎನಿಸಿದ್ದರು.

"ಸೆಪ್ಟೆಂಬರ್​ 24, 2007. ಜೋಹನ್ಸ್​ ಬರ್ಗ್​ನಲ್ಲಿ ನೂರು ಕೋಟಿ ಭಾರತೀಯರ ಕನಸು ನನಸಾದ ದಿನ. ಅಂದು ನಮ್ಮಂತಹ ಅನಾನುಭವಿಗಳ ತಂಡ ವಿಶ್ವಕಪ್​ನಲ್ಲಿ ಆಡಿ ಇತಿಹಾಸ ನಿರ್ಮಿಸುತ್ತದೆ ಎಂದು ಯಾರು ಯೋಚಿಸಿದ್ದರು?. ಅದು ಸಂಭವಿಸಿ 14 ವರ್ಷಗಳಾಗಿವೆ. ನಾವು ಬಹಳ ದೂರ ಸಾಗಿದ್ದೇವೆ. ಸಾಕಷ್ಟು ಇತಿಹಾಸಗಳನ್ನು ನಿರ್ಮಿಸಿದ್ದೇವೆ. ನಾನು ಕೆಲವು ಹಿನ್ನಡೆಗಳನ್ನು ಹೊಂದಿದ್ದೇವೆ. ಕಷ್ಟಗಳನ್ನು ಅನುಭವಿಸಿದ್ದೇವೆ. ಆದರೆ ಅದು ಎಂದಿಗೂ ನಮ್ಮ ಉತ್ಸಾಹವನ್ನು ತಡೆಯಲಾಗಲಿಲ್ಲ. ಏಕೆಂದರೆ ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ವಿಜಯಕ್ಕಾಗಿ ನಮ್ಮಿಂದಾಗುವುದನ್ನೆಲ್ಲಾ ಮಾಡುತ್ತೇವೆ" ಎಂದು ರೋಹಿತ್ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

"ಈ ವರ್ಷದ ಐಸಿಸಿ ಟಿ20 ವಿಶ್ವಕಪ್​ನಲ್ಲೂ ನಾವು ಪ್ರತಿಯೊಬ್ಬರೂ ಇತಿಹಾಸವನ್ನು ಮರು ಸೃಷ್ಟಿಸುವುದಕ್ಕಾಗಿ ನಮ್ಮಿಂದಾಗುವುದನ್ನೆಲ್ಲಾ ಮಾಡಲಿದ್ದೇವೆ. ನಾವು ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆ. ಮತ್ತೊಮ್ಮೆ ಸಾಧಿಸೋಣ ಭಾರತ. ನಾನು ಇಲ್ಲಿಗೆ ಗೆಲ್ಲುವುದಕ್ಕೆ ಇದ್ದೇನೆ" ಎಂದು ಸ್ಫೂರ್ತಿದಾಯಕ ವಾಕ್ಯಗಳನ್ನು ಬರೆದಿದ್ದಾರೆ.

ಪ್ರಸ್ತುತ ಭಾರತ ತಂಡದ ಎಲ್ಲಾ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳಲ್ಲಿ ಐಪಿಎಲ್​ ಆಡುತ್ತಿದ್ದಾರೆ. ಅಕ್ಟೋಬರ್​ 24ರಂದು ಪಾಕಿಸ್ತಾನದ ವಿರುದ್ಧ ಕೊಹ್ಲಿ ಪಡೆ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: ಮುಂದಿನ 2 ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗಬೇಕು: ಗವಾಸ್ಕರ್

Last Updated : Sep 29, 2021, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.