ETV Bharat / sports

T20 world cup: ಆಸೀಸ್​ ವಿರುದ್ಧ ಕೊನೆಯವರೆಗೂ ಹೋರಾಡಿ ಸೋತ ಅಫ್ಘಾನಿಸ್ತಾನ ಆಟಗಾರರು

author img

By

Published : Nov 4, 2022, 5:10 PM IST

Updated : Nov 4, 2022, 5:59 PM IST

ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಆಟಗಾರರು ಕೊನೆಯ ಓವರ್​ನವರೆಗೂ ತಂಡದ ಗೆಲುವಿಗೆ ಹೋರಾಟ ನಡೆಸಿದರು. 168 ರನ್​ಗಳ ಗೆಲುವಿನ ಬೆನ್ನಟ್ಟಿದ ಅಫ್ಘಾನಿಸ್ತಾನ 164 ರನ್​ಗಳನ್ನು ಪೇರಿಸಿ ಕೊನೆಗೆ ಸೋಲು ಕಂಡಿತು.

t20-world-cup-australia-vs-afghanistan-match
T20 world cup: ಆಸೀಸ್​ ವಿರುದ್ಧ ಕೊನೆಯವರೆಗೂ ಹೋರಾಡಿ ಸೋತ ಅಫ್ಘಾನಿಸ್ತಾನ ಆಟಗಾರರು

ಅಡಿಲೇಡ್ (ಆಸ್ಟ್ರೇಲಿಯಾ): ಟಿ20 ವಿಶ್ವಕಪ್​ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಭಾರಿ ಪೈಪೋಟಿ ನೀಡಿ 4 ರನ್​ಗಳಿಂದ ಸೋಲು ಕಂಡಿದೆ. 168 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಆಟಗಾರರು ಕೊನೆಯ ಓವರ್​ನವರೆಗೂ ಗೆಲುವಿಗೆ ಹೋರಾಟ ನಡೆಸಿದರು.

ಅಫ್ಘಾನಿಸ್ತಾನ ತಂಡ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 168 ರನ್​ಗಳನ್ನು ಪೇರಿಸಿತು. ಈ ಗೆಲುವಿನ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಆಟಗಾರರು ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿ ಪಂದ್ಯವನ್ನು ರೋಚಕ ಘಟ್ಟಕ್ಕೆ ತೆಗೆದುಕೊಂಡು ಹೋದರು.

ಕೊನೆಯ ಓವರ್​ನಲ್ಲಿ ಅಫ್ಘಾನಿಸ್ತಾನ ಗೆಲುವಿಗೆ 22 ರನ್​ಗಳ ಅವಶ್ಯಕತೆ ಇತ್ತು. ಮೊದಲ 4 ಎಸೆತಗಳಲ್ಲಿ ರಶೀದ್​ ಖಾನ್​ ಒಂದು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕಕ್ಕೆ ತಿರುಗಿಸಿದರು. ಕೊನೆಯ 2 ಎಸೆತಗಳಲ್ಲಿ ಗೆಲುವಿಗೆ 12 ರನ್​ಗಳು ಬೇಕಾಗಿದ್ದವು. ಆದರೆ, 5ನೇ ಎಸತೆದಲ್ಲಿ 2 ರನ್​ ಮತ್ತು ಪಂದ್ಯದ ಕೊನೆ ಬಾಲ್​ನಲ್ಲಿ ಬೌಂಡರಿ ಬಾರಿಸಿದರೂ ಸೋಲೊಪ್ಪಿಕೊಳ್ಳಬೇಕಾಗಿತ್ತು.

ಕೊನೆಯವರೆಗೂ ಗೆಲುವಿಗೆ ಪ್ರಯತ್ನಿಸಿದ ರಶೀದ್ ಖಾನ್ 23 ಎಸೆತಗಳಲ್ಲಿ 4 ಸಿಕ್ಸರ್​ಗಳು ಮತ್ತು 3 ಬೌಂಡರಿಗಳ ಸಮೇತ 48 ರನ್​ಗಳನ್ನು ಬಾರಿಸಿದರು. ರಹಮಾನುಲ್ಲಾ ಗುರ್ಬಾಜ್ (30), ಇಬ್ರಾಹಿಂ ಜದ್ರಾನ್ (26), ಗುಲ್ಬದಿನ್ ವೈಸ್ (39), ದರ್ವಿಶ್ ರಸೂಲಿ (15) ಉತ್ತಮವಾಗಿ ಬ್ಯಾಟ್​ ಬೀಸಿದರು. ಒಟ್ಟಾರೆ 7 ವಿಕೆಟ್​ ನಷ್ಟಕ್ಕೆ ಅಫ್ಘಾನಿಸ್ತಾನ 164 ರನ್​ಗಳನ್ನು ಬಾರಿಸಲಷ್ಟೇ ಶಕ್ತವಾಯಿತು.

ಇನ್ನು, ಬೌಲಿಂಗ್​ನಲ್ಲೂ ಅಫ್ಘಾನಿಸ್ತಾನ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ಇನ್ಸಿಂಗ್​ನ ಆರಂಭದಿಂದಲೂ ಅಫ್ಘಾನಿಸ್ತಾನ ಬೌಲರ್​ಗಳು ಬಿಗಿ ಬೌಲಿಂಗ್​ ಮಾಡಿದರು. ಆಸೀಸ್​ ತಂಡದ ಪರ ಡೇವಿಡ್ ವಾರ್ನರ್ (25), ಕ್ಯಾಮರೂನ್ ಗ್ರೀನ್ (3), ಮಿಚೆಲ್ ಮಾರ್ಷ್ (45), ಸ್ಟೊಯಿನಿಸ್ (25), ಮ್ಯಾಕ್ಸ್‌ವೆಲ್ ಅಜೇಯ 52 ರನ್​ಗಳನ್ನು ಸಿಡಿಸಿದ್ದರು.

ಇದನ್ನೂ ಓದಿ: T20 World Cup: ಐರ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್​​ಗೆ ಜಯ.. ಸೋತ ಪಂದ್ಯದಲ್ಲಿ ಲಿಟಲ್ ಹ್ಯಾಟ್ರಿಕ್​ ಸಾಧನೆ

Last Updated : Nov 4, 2022, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.