ETV Bharat / sports

ಟಿ-20 ವಿಶ್ವಕಪ್​: ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಾ ಫಿಟ್​!

ಪಾಕ್​ ವಿರುದ್ಧದ ಪಂದ್ಯದಲ್ಲಿ ಬಲ ಭುಜಕ್ಕೆ ಪೆಟ್ಟು ತಿಂದು ಸ್ಕ್ಯಾನ್​ಗೆ ಒಳಪಟ್ಟಿದ್ದ ಹಾರ್ದಿಕ್ ಪಾಂಡ್ಯಾ ಫಿಟ್​ ಆಗಿದ್ದಾರೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.

Hardik
Hardik
author img

By

Published : Oct 25, 2021, 11:25 PM IST

ದುಬೈ: ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭುಜದ ನೋವಿನಿಂದಾಗಿ ಸ್ಕ್ಯಾನ್​ಗೊಳಪಟ್ಟಿದ್ದ ಟೀಂ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾ ಫಿಟ್​ ಆಗಿದ್ದು, ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯಕ್ಕೆ ಲಭ್ಯವಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಮೂಡಿದ್ದ ಆತಂಕ ದೂರವಾಗಿದೆ.

ವಿಶ್ವಕಪ್​​ನಲ್ಲಿ ಪಾಕ್​ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯಾ ಭುಜದ ನೋವಿಗೊಳಗಾಗಿದ್ದ ಕಾರಣ ತಕ್ಷಣವೇ ಸ್ಕ್ಯಾನ್​ಗೊಳಪಟ್ಟಿದ್ದರು. ಅವರ ಗಾಯದ ಸ್ವರೂಪದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ, ಪರಿಶೀಲನೆ ನಡೆಸಲು ಸ್ಕ್ಯಾನ್​ಗೆ ಒಳಪಟ್ಟಿದ್ದರು ಎಂದು ಬಿಸಿಸಿಐ ಮಾಹಿತಿ ಹಂಚಿಕೊಂಡಿತ್ತು. ಇದೀಗ ಅದರ ರಿಪೋರ್ಟ್​ ಬಂದಿದೆ. ಯಾವುದೇ ರೀತಿಯ ನೋವು ಕಾಣಿಸಿಕೊಂಡಿಲ್ಲವಾದರಿಂದ ಮುಂದಿನ ಪಂದ್ಯಕ್ಕೆ ಲಭ್ಯವಿದ್ದಾರೆಂದು ಬಿಸಿಸಿಐ ಮಾಹಿತಿ ತಿಳಿಸಿದೆ.

ಇದನ್ನೂ ಓದಿರಿ: T20 ವಿಶ್ವಕಪ್​​: ಸ್ಕಾಟ್ಲೆಂಡ್​ ವಿರುದ್ಧ ದಾಖಲೆಯ 130ರನ್​ಗಳ ಜಯ ಸಾಧಿಸಿದ ಆಫ್ಘನ್​

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಲು ಕಣಕ್ಕಿಳಿದಿದ್ದ ಹಾರ್ದಿಕ್​ ಪಾಂಡ್ಯಾ, ತಾವು ಎದುರಿಸಿದ್ದ 8 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 11ರನ್​ಗಳಿಕೆ ಮಾಡಿದ್ದರು. ಆದರೆ ಪಾಕ್​ ಎಸೆದ ಕೊನೆಯ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದ್ದರು.

ಗಾಯಕ್ಕೊಳಗಾಗಿ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್​ ಪಾಂಡ್ಯಾ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಪ್ರತಿನಿಧಿಸಿದ್ದರು. ಈ ವೇಳೆ ಅವರು ಬೌಲಿಂಗ್ ಮಾಡಿರಲಿಲ್ಲ. ಆದರೆ ನಿನ್ನೆಯ ಪಾಕ್​ ವಿರುದ್ಧದ ಪಂದ್ಯದಲ್ಲೂ ಅವರು ಬೌಲ್​ ಮಾಡಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.