ETV Bharat / sports

ಟಿ20 ವಿಶ್ವಕಪ್​ನಲ್ಲಿ ಆರ್​  ಅಶ್ವಿನ್​ ದಾಖಲೆ.. ಅತ್ಯಧಿಕ ವಿಕೆಟ್​ ಕಿತ್ತ ಮೊದಲ ಭಾರತೀಯ - ಐಸಿಸಿ ಟಿ 20 ವಿಶ್ವಕಪ್​

ಟಿ20 ವಿಶ್ವಕಪ್​ನಲ್ಲಿ ಭಾರತದ ಪರವಾಗಿ ಅತ್ಯಧಿಕ ವಿಕೆಟ್​ ಪಡೆದ ದಾಖಲೆಯನ್ನು ಹಿರಿಯ ಸ್ಪಿನ್ನರ್​ ಆರ್​.ಅಶ್ವಿನ್​ ಬರೆದರು. 23 ಪಂದ್ಯಗಳಿಂದ 32 ವಿಕೆಟ್​ ಕಬಳಿಸಿದ್ದಾರೆ.

t20-wc-ravichandran-ashwin
ಟಿ 20 ವಿಶ್ವಕಪ್​ನಲ್ಲಿ ಆರ್​. ಅಶ್ವಿನ್​ ದಾಖಲೆ
author img

By

Published : Nov 8, 2022, 5:04 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ): ಟಿ 20 ವಿಶ್ವಕಪ್​ನಲ್ಲಿ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್​​ ಅತ್ಯಧಿಕ ವಿಕೆಟ್​ ಪಡೆದ ಭಾರತೀಯ ಎಂಬ ದಾಖಲೆ ಬರೆದರು. ಜಿಂಬಾಬ್ವೆ ವಿರುದ್ಧ 3 ವಿಕೆಟ್​ ಗಳಿಸಿದ ಅಶ್ವಿನ್​ ಈ ಸಾಧನೆಗೆ ಪಾತ್ರರಾದರು.

ಐಸಿಸಿ ಟಿ 20 ವಿಶ್ವಕಪ್​ನಲ್ಲಿ 23 ಪಂದ್ಯಗಳಾಡಿರುವ ಅಶ್ವಿನ್ 16.40 ರ ಸರಾಸರಿಯಲ್ಲಿ 32 ವಿಕೆಟ್​ ಕಬಳಿಸಿದ್ದಾರೆ. ಇದರಲ್ಲಿ 11 ರನ್​ಗೆ 4 ವಿಕೆಟ್​ ಅತ್ಯುತ್ತಮ ಬೌಲಿಂಗ್​ ಪ್ರದರ್ಶನವಾಗಿದೆ. 6.32 ರ ಎಕಾನಮಿ ಹೊಂದಿದ್ದಾರೆ. ಭಾರತದ ಇನ್ನೊಬ್ಬ ಸ್ಪಿನ್ನರ್​ ರವೀಂದ್ರ ಜಡೇಜಾ 21 ವಿಕೆಟ್​ ಗಳಿಸಿದ್ದು, ನಂತರದ ಸ್ಥಾನದಲ್ಲಿದ್ದಾರೆ.

ಅಶ್ವಿನ್​ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಮುಖ 3 ವಿಕೆಟ್​ ಕಿತ್ತರು. ಪಂದ್ಯದಲ್ಲಿ ಭಾರತ 71 ರನ್​ಗಳಿಂದ ಜಿಂಬಾಬ್ವೆ ವಿರುದ್ಧ ಜಯ ಸಾಧಿಸಿತು. ಈ ಆವೃತ್ತಿಯ ವಿಶ್ವಕಪ್​ನಲ್ಲಿ ಅಶ್ವಿನ್ ಇದುವರೆಗೆ 6 ವಿಕೆಟ್ ಕಬಳಿಸಿದ್ದಾರೆ.

ಇನ್ನು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ 47 ವಿಕೆಟ್​ಗಳೊಂದಿಗೆ ಟಿ20 ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ (39), ಶ್ರೀಲಂಕಾದ ಲಸಿತ್ ಮಾಲಿಂಗ (38), ಪಾಕಿಸ್ತಾನದ ಸಯೀದ್ ಅಜ್ಮಲ್ (36) ಮತ್ತು ಶ್ರೀಲಂಕಾದ ಅಜಂತಾ ಮೆಂಡಿಸ್ (35) ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿದ್ದಾರೆ.

ಭಾರತ ಗ್ರೂಪ್​ 2 ರ ಅಗ್ರಸ್ಥಾನಿಯಾಗಿ ಸೆಮಿಫೈನಲ್​ ತಲುಪಿದ್ದು, ಇಂಗ್ಲೆಂಡ್​ ವಿರುದ್ಧ ನವೆಂಬರ್​ 10 ರಂದು ಅಡಿಲೇಡ್​ನಲ್ಲಿ ಕಾದಾಡಲಿದೆ.

ಓದಿ: ಟಿ20 ವಿಶ್ವಕಪ್‌: ಆರ್‌ ಅಶ್ವಿನ್‌ ಪ್ರದರ್ಶನದ ಬಗ್ಗೆ ಕಪಿಲ್ ದೇವ್ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.