ಪರ್ತ್ (ಆಸ್ಟ್ರೇಲಿಯಾ): ಇಂದು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಹಣಾಹಣಿಗೆ ಪರ್ತ್ ಕ್ರೀಡಾಂಗಣ ಸಜ್ಜಾಗಿದೆ. ಟಾಸ್ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆತಿಥೇಯರು ಎದುರಾಳಿ ಲಂಕನ್ನರನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಆಸ್ಟ್ರೇಲಿಯಾವು ನ್ಯೂಜಿಲೆಂಡ್ ವಿರುದ್ಧ ಸೋತಿದ್ದು ಸದ್ಯ ನಡೆಯುತ್ತಿರುವ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಜಯ ದಾಖಲಿಸಿರುವ ಶ್ರೀಲಂಕಾ ತನ್ನ ಗೆಲುವನ್ನು ಮುಂದುವರೆಸುವ ಉತ್ಸಾಹದಲ್ಲಿದೆ.
-
T20 WC: Australia win toss, opt to field against Sri Lanka; Zampa misses out due to COVID-19
— ANI Digital (@ani_digital) October 25, 2022 " class="align-text-top noRightClick twitterSection" data="
Read @ANI Story | https://t.co/p1yvZ52HN0#AUSvSL #SLvsAUS #T20WorldCup #T20WorldCup2022 #T20worldcup22 pic.twitter.com/hlZCL6w00P
">T20 WC: Australia win toss, opt to field against Sri Lanka; Zampa misses out due to COVID-19
— ANI Digital (@ani_digital) October 25, 2022
Read @ANI Story | https://t.co/p1yvZ52HN0#AUSvSL #SLvsAUS #T20WorldCup #T20WorldCup2022 #T20worldcup22 pic.twitter.com/hlZCL6w00PT20 WC: Australia win toss, opt to field against Sri Lanka; Zampa misses out due to COVID-19
— ANI Digital (@ani_digital) October 25, 2022
Read @ANI Story | https://t.co/p1yvZ52HN0#AUSvSL #SLvsAUS #T20WorldCup #T20WorldCup2022 #T20worldcup22 pic.twitter.com/hlZCL6w00P
ತಂಡದ ಪ್ರಮುಖ ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್-19 ಸೋಂಕು ತಗುಲಿದ್ದು, ಆಷ್ಟನ್ ಅಗರ್ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಗಿದೆ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್.
ಶ್ರೀಲಂಕಾ (ಆಡುವ XI): ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಬಿನೂರ ಫೆರ್ನಾಂಡೊ, ಲಹಿರು ಕುಮಾರ.
ಇದನ್ನೂ ಓದಿ: ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾಗೆ ಕೊರೊನಾ.. ಶ್ರೀಲಂಕಾ ಪಂದ್ಯದಿಂದ ಔಟ್