ETV Bharat / sports

ಮಹಿಳಾ ಟಿ-20 ಚಾಲೆಂಜ್‌.. ಇಂದು ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ Vs ಮಿಥಾಲಿ ರಾಜ್ ಸೆಣೆಸಾಟ - ವೆಲಾಸಿಟಿ

ಇಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರ್ಮನ್‌ಪ್ರೀತ್ ಕೌರ್ ಪಡೆ ಸೂಪರ್ನೋವಾ, ಕಳೆದ ವರ್ಷದ ರನ್ನರ್ಸ್ ಅಪ್ ಮಿಥಾಲಿ ರಾಜ್ ಪಡೆ ವೆಲಾಸಿಟಿ ತಂಡ ಕಣಕ್ಕಿಳಿಯಲಿವೆ..

Women's T20 challenge
ಮಹಿಳಾ ಟಿ-20 ಚಾಲೆಂಜ್ ಇಂದಿನಿಂದ ಆರಂಭ
author img

By

Published : Nov 4, 2020, 3:41 PM IST

Updated : Nov 4, 2020, 3:49 PM IST

ಶಾರ್ಜಾ: ಇಂದು ದುಬೈನ ಶಾರ್ಜಾ ಮೈದಾನದಲ್ಲಿ ಮಹಿಳಾ ಟಿ-20 ಚಾಲೆಂಜ್‌ನ ಮೂರನೇ ಆವೃತ್ತಿ ಆರಂಭವಾಗಿಲಿದೆ. ಭಾರತ ತಂಡದ ಟಾಪ್​ ಆಟಗಾರ್ತಿಯರು ಹಾಗೂ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ನ ಆಟಗಾರ್ತಿಯರು ಸಹ ಈ ಟೂರ್ನಿಯಲ್ಲಿ ಆಡಲಿದ್ದಾರೆ.

ಇದು ನಾಲ್ಕು ಪಂದ್ಯಗಳ ಟೂರ್ನಿಯಾಗಿದ್ದು, ಈ ಟೂರ್ನಿಯಲ್ಲಿ ಮೂರು ತಂಡಗಳು ಸೆಣೆಸಾಡಲಿವೆ. ಇಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರ್ಮನ್‌ಪ್ರೀತ್ ಕೌರ್ ಪಡೆ ಸೂಪರ್ನೋವಾ, ಕಳೆದ ವರ್ಷದ ರನ್ನರ್ಸ್ ಅಪ್ ಮಿಥಾಲಿ ರಾಜ್ ಪಡೆ ವೆಲಾಸಿಟಿ ತಂಡ ಕಣಕ್ಕಿಳಿಯಲಿವೆ.

ಮಹಿಳಾ ಟಿ-20 ಚಾಲೆಂಜ್ ಇಂದಿನಿಂದ ಆರಂಭ

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್ನೋವಾಸ್ ಈ ಹಿಂದಿನ ಎರಡು ಆವೃತ್ತಿಗಳನ್ನು ಗೆದ್ದಿದೆ. ಹರ್ಮನ್​ ಪ್ರೀತ್ ಕೌರ್​ ಮಹಿಳಾ ಟಿ20 ಚಾಲೆಂಜ್ ಇತಿಹಾಸದಲ್ಲೇ ಯಶಸ್ವಿ ಆಟಗಾರ್ತಿಯರಾಗಿದ್ದಾರೆ. ಇವರ ನೇತೃತ್ವದ ತಂಡ ಸತತವಾಗಿ 2 ಬಾರಿ ಚಾಂಪಿಯನ್ ಆಗಿದೆ.

ಹರ್ಮನ್‌ಪ್ರೀತ್ ಕೌರ್ ಕೊನೆಯ ಆವೃತ್ತಿಯಲ್ಲಿ ಮೂರು ಪಂದ್ಯಗಳಲ್ಲಿ ಅವರು ಎರಡು ಅರ್ಧಶತಕಗಳನ್ನ ಗಳಿಸಿದ್ದರು. ಫೈನಲ್‌ ಪಂದ್ಯದಲ್ಲಿ 37 ಬೌಲ್​ಗಳಲ್ಲಿ 51ರನ್​ ಸಿಡಿಸಿ ಗೆಲುವಿನ ರೂವಾರಿಯಾಗಿದ್ದರು. ಭಾರತದ ಪರ ಟಿ-20ಯಲ್ಲಿ ಸೆಂಚುರಿ ಸಿಡಿಸಿದ ಮೊದಲ ಮಹಿಳಾ ಕ್ರಿಕೆಟಿಗೆ ಹಾಗೂ 100 ಟಿ20 ಪಂದ್ಯವನ್ನಾಡಿದ ಮೊದಲ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ.

ಮುಂಬೈನ 20 ವರ್ಷದ ಪ್ರತಿಭಾನ್ವಿತ ಬ್ಯಾಟ್ಸ್​ವುಮನ್ ಜೆಮಿಮಾ ರೋಡ್ರಿಗಸ್ 2019ರ ಮಹಿಳಾ ಟಿ20 ಚಾಲೆಂಜ್​ನಲ್ಲಿ 61.50 ಸರಾಸರಿಯಲ್ಲಿ 123 ರನ್​ಗಳಿಸುವ ಮೂಲಕ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ಸೂಪರ್ ನೊವಾಸ್​ನ ಪ್ರಮುಖ ಬ್ಯಾಟರ್ ಆಗಲಿದ್ದಾರೆ.

ಮಹಿಳಾ ಟಿ20 ಟೂರ್ನಿಯಲ್ಲೇ ಅತ್ಯಂತ ಕಿರಿಯ ನಾಯಕಿ ಎಂಬ ದಾಖಲೆಯನ್ನ ಸ್ಮೃತಿ ಮಂಧಾನ ಹೊಂದಿದ್ದಾರೆ. ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಮಂಧಾನ ಟಿ20 ವಿಶ್ವಕಪ್​ನಲ್ಲಿ 4 ಇನ್ನಿಂಗ್ಸ್​ಗಳಲ್ಲಿ ಕೇವಲ 49 ರನ್​ಗಳಿಸಿ ವಿಫಲರಾಗಿದ್ದರು. ಆದರೆ, ಮಹಿಳಾ ಟಿ20 ಚಾಲೆಂಜ್​ ಮೂಲಕ ಮತ್ತೆ ಫಾರ್ಮ್​ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಟ್ರೈಲ್​ಬ್ಲೇಜರ್ಸ್ ನಾಯಕಿಯಿದ್ದಾರೆ.

ದೇಶದ ಮಹಿಳಾ ಕ್ರಿಕೆಟ್‌ಗೆ ಹೆಚ್ಚು ಉತ್ತೇಜನವನ್ನು ನೀಡಲು ಈ ಪಂದ್ಯಾವಳಿಯನ್ನು ಬಿಸಿಸಿಐ 2018 ರಲ್ಲಿ ಮೊದಲು ಪರಿಚಯಿಸಿತು. ವೆಲಾಸಿಟಿ ಮತ್ತು ಟ್ರೈಲ್​ಬ್ಲೇಜರ್ಸ್ ನಡುವಿನ ಪಂದ್ಯವನ್ನು ಹೊರತುಪಡಿಸಿ ಎಲ್ಲಾ ಪಂದ್ಯಗಳು ಸಂಜೆ 7:30 ರಿಂದ ಪ್ರಾರಂಭವಾಗುತ್ತವೆ. ವೆಲಾಸಿಟಿ ಮತ್ತು ಟ್ರೈಲ್​ಬ್ಲೇಜರ್ಸ್ ನಡುವಿನ ಪಂದ್ಯ ಮಧ್ಯಾಹ್ನ 3:30ಕ್ಕೆ ನಡೆಯಲಿದೆ.

ಸೂಪರ್​ನೊವಾಸ್​ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್, ಚಮರಿ ಅತಪತ್ತು, ಪ್ರಿಯಾ ಪುನಿಯಾ, ಅನುಜಾ ಪಾಟೀಲ್, ರಾಧಾ ಯಾದವ್, ತಾನಿಯಾ ಭಾಟಿಯಾ, ಶಶಿಕಲಾ ಶ್ರೀವರ್ಧನೆ, ಪೂನಂ ಯಾದವ್, ಶಕೇರಾ ಸೆಲ್ಮಾನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್​​, ಆಯುಷಿ ಸೋನಿ, ಆಯಭೋಂಗ ಖಾಕ, ಮುಸ್ಕಾನ್​​ ಮಲಿಕ್​​ ಈ ತಂಡದ ಆಟಗಾರ್ತಿಯರು.

ವೆಲಾಸಿಟಿ ತಂಡ : ಮಿಥಾಲಿ ರಾಜ್ (ನಾಯಕಿ), ವೇದ ಕೃಷ್ಣಮೂರ್ತಿ (ಉಪ ನಾಯಕಿ), ಶಫಾಲಿ ವರ್ಮಾ, ಸುಷ್ಮಾ ವರ್ಮಾ , ಏಕ್ತಾ ಬಿಶ್ತ್, ಮಾನ್ಸಿ ಜೋಶಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿಬ್ಯಾದರ್ಶಿನಿ, ಮನಾಲಿ ದಕ್ಷಿಣೇಶಿ, ಲೇಘ್ ಕಾಶ್ನೆ ಜಹನಾರಾ ಆಲಂ ಮತ್ತು ಎಂ ಅನಘಾ.

Last Updated : Nov 4, 2020, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.