ಶಾರ್ಜಾ: ಐಸಿಸಿ ಟಿ-20 ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪಾಕಿಸ್ತಾನ ತಂಡ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಈಚೆಗೆ ಭದ್ರತೆ ನೆಪ ಹೇಳಿ ಪಾಕಿಸ್ತಾನದಿಂದ ದಿಢೀರ್ ಆಗಿ ವಾಪಸ್ ಬಂದಿದ್ದ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೇಡು ತೀರಿಸಿಕೊಂಡಿದೆ.
-
New Zealand post a score of 134/8 after some brilliant bowling from Pakistan 🔢
— ICC (@ICC) October 26, 2021 " class="align-text-top noRightClick twitterSection" data="
Will this score prove to be enough? #T20WorldCup | #PAKvNZ | https://t.co/E7Fewf9q6J pic.twitter.com/iIyMn0vDfi
">New Zealand post a score of 134/8 after some brilliant bowling from Pakistan 🔢
— ICC (@ICC) October 26, 2021
Will this score prove to be enough? #T20WorldCup | #PAKvNZ | https://t.co/E7Fewf9q6J pic.twitter.com/iIyMn0vDfiNew Zealand post a score of 134/8 after some brilliant bowling from Pakistan 🔢
— ICC (@ICC) October 26, 2021
Will this score prove to be enough? #T20WorldCup | #PAKvNZ | https://t.co/E7Fewf9q6J pic.twitter.com/iIyMn0vDfi
ಶಾರ್ಜಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದ ನ್ಯೂಜಿಲ್ಯಾಂಡ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 134ರನ್ಗಳಿಕೆ ಮಾಡಿತು. ತಂಡದ ಪರ ಮಿಚೆಲ್ 27 ರನ್, ವಿಲಿಯಮ್ಸನ್ 25 ಹಾಗೂ ಕಾನ್ವೆ 27ರನ್ಗಳಿಕೆ ಮಾಡಿ ತಂಡ 130ರ ಗಡಿ ದಾಟುವಂತೆ ಮಾಡಿದರು.
135ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭಿಕ ಆಘಾತದ ನಡುವೆ ಕೂಡ ಸಂಘಟಿತ ಬ್ಯಾಟಿಂಗ್ ಬಲದಿಂದ ಕಿವೀಸ್ ವಿರುದ್ಧ ಗೆಲುವು ದಾಖಲು ಮಾಡಿದೆ. ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 33ರನ್ಗಳಿಕೆ ಮಾಡಿದ್ರೆ, ಶೊಯೆಬ್ ಮಲಿಕ್ ಅಜೇಯ 26 ಹಾಗೂ ಆಸೀಫ್ ಅಲಿ ಸ್ಪೋಟಕ 27ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ತಂಡ 18.4 ಓವರ್ಗಳಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು 135ರನ್ಗಳಿಕೆ ಮಾಡಿ, ಸತತ ಎರಡನೇ ಜಯ ಸಾಧಿಸಿದೆ.
ಪಾಕ್ ತಂಡದ ಪರ ಬೌಲಿಂಗ್ನಲ್ಲಿ ಮಿಂಚಿದ ಹ್ಯಾರಿಸ್ ರೌಫ್ 4 ವಿಕೆಟ್ ಪಡೆದು ಮಿಂಚಿದ್ರೆ, ಶಾಹಿನ್ ಆಫ್ರಿದಿ, ವಾಸೀಂ ಹಾಗೂ ಹಫೀಜ್ ತಲಾ 1 ವಿಕೆಟ್ ಪಡೆದುಕೊಂಡರು. ತಂಡದ ಪರ ನಾಲ್ಕು ವಿಕೆಟ್ ಪಡೆದುಕೊಂಡು ಮಿಂಚಿದ ರೌಫ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಗೆಲ್ಲುವ ಪಂದ್ಯ ಕೈಚೆಲ್ಲಿದ ನ್ಯೂಜಿಲ್ಯಾಂಡ್
ಒಂದು ಸಮಯದಲ್ಲಿ ತಂಡದ ಮೇಲೆ ಸಂಪೂರ್ಣವಾದ ಹಿಡಿತ ಸಾಧಿಸಿದ್ದ ನ್ಯೂಜಿಲ್ಯಾಂಡ್ ತಂಡ ಕೊನೆಯ 5 ಓವರ್ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರಿಂದ ಪಂದ್ಯ ಕೈಚೆಲ್ಲುವಂತಾಯಿತು. ಇಮಾದ್ ವಾಸೀಂ ನಂತರ ಬ್ಯಾಟ್ ಮಾಡಲು ಕಣಕ್ಕಿಳಿದ ಆಸೀಫ್ ಅಲಿ ತಾವು ಎದುರಿಸಿದ 12 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸೇರಿ 27ರನ್ಗಳಿಕೆ ಮಾಡಿದ್ರೆ, ಇವರಿಗೆ ಸಾಥ್ ನೀಡಿದ ಹಿರಿಯ ಆಟಗಾರ ಶೋಯೆಬ್ ಮಲಿಕ್ ಅಜೇಯ 26ರನ್ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.
ನ್ಯೂಜಿಲ್ಯಾಂಡ್ ತಂಡದ ಪರ ಸೋಧಿ 2 ವಿಕೆಟ್, ಸ್ಯಾಟ್ನರ್, ಸೌಥಿ ಹಾಗೂ ಬೊಲ್ಟ್ ತಲಾ 1 ವಿಕೆಟ್ ಪಡೆದುಕೊಂಡರು.
ಸೇಡು ತೀರಿಸಿಕೊಂಡ ಪಾಕ್
ಈಚೆಗೆ ಕ್ರಿಕೆಟ್ ಸರಣಿ ಆಡಲು ಪಾಕಿಸ್ತಾನಕ್ಕೆ ತೆರಳಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತೆಯ ನೆಪ ಹೇಳಿ ಅಲ್ಲಿಂದ ದಿಢೀರ್ ಆಗಿ ವಾಪಸ್ ಆಗಿತ್ತು. ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿತ್ತು. ಜೊತೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಇದೀಗ ವಿಶ್ವಕಪ್ನಲ್ಲಿ ಗೆಲುವು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡಿದೆ.