ರಾಯಪುರ(ಛತ್ತೀಸ್ಗಢ): ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್- ಇಂಗ್ಲೆಂಡ್ ಲೆಜೆಂಡ್ಸ್ ನಡುವಿನ ಪಂದ್ಯದಲ್ಲಿ, ಇಂಗ್ಲೆಂಡ್ ಲೆಜೆಂಡ್ಸ್ ತಂಡ 6 ರನ್ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಲೆಜೆಂಡ್ಸ್ ತಂಡ ಉತ್ತಮ ಆರಂಭ ಪಡೆಯಿತು. ಇಂಗ್ಲೆಂಡ್ ಲೆಜೆಂಡ್ಸ್ ನಾಯಕ ಕೆವಿನ್ ಪೀಟರ್ಸನ್ ಅಬ್ಬರದ ಆಟದ ನೆರವಿನಿಂದ, ಇಂಗ್ಲೆಂಡ್ ಲೆಜೆಂಡ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 188 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇಂಗ್ಲೆಂಡ್ ಲೆಜೆಂಡ್ಸ್ ಪರ ನಾಯಕ ಕೆವಿನ್ ಪೀಟರ್ಸನ್ 39 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ನೇರವಿನಿಂದ 75 ರನ್ ಗಳಿಸಿದರು.
ಈ ಬೃಹತ್ ಮೊತ್ತ ಬೆನ್ನಟ್ಟಿದ ಇಂಡಿಯಾ ಲೆಜೆಂಡ್ಸ್ ತಂಡ ಆರಂಭದಲ್ಲೆ ಸಚಿನ್ ಮತ್ತು ಸೆಹ್ವಾಗ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ವೀರೇಂದ್ರ ಸೆಹ್ವಾಗ್ (6), ಸಚಿನ್ ತೆಂಡೂಲ್ಕರ್ (9), ಮೊಹಮ್ಮದ್ ಕೈಫ್ (1), ಎಸ್.ಬದ್ರಿನಾಥ್ (8), ಯುವರಾಜ್ ಸಿಂಗ್ ಕೇವಲ 22 ರನ್ ಗಳಿಸಿ ಔಟಾದರು. ಕೆಳ ಕ್ರಮಾಂಕದಲ್ಲಿ ಮಿಂಚಿದ ಪಠಾಣ್ ಮತ್ತು ಗೋನಿ ಕೇವಲ 26 ಎಸೆತಗಳಲ್ಲಿ 63 ಸಿಡಿಸಿದರು, ತಂಡಕ್ಕೆ ಗೆಲವು ತಂದುಕೊಡುವಲ್ಲಿ ವಿಫಲರಾದರು. ಇರ್ಫಾನ್ ಪಠಾಣ್ 34 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ನೇರವಿನಿಂದ 61 ರನ್ ಗಳಿಸಿದರೆ, ಗೋನಿ 16 ಎಸೆತಗಳಲ್ಲಿ1 ಬೌಂಡರಿ 4 ಸಿಕ್ಸರ್ ನೆರವಿನಿಂದ 35 ರನ್ ಬಾರಿಸಿದರು.
ಓದಿ : ಭಾರತ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ: ಬಟ್ಲರ್
ಸಂಕ್ಷಿಪ್ತ ಸ್ಕೋರ್ : ಇಂಗ್ಲೆಂಡ್ ಲೆಜೆಂಡ್ಸ್ 20 ಓವರ್ಗಳಲ್ಲಿ 188/7 ( ಕೆವಿನ್ ಪೀಟರ್ಸನ್ 75, ಡಿ ಮ್ಯಾಡಿ 29 , ಯೂಸಫ್ ಪಠಾಣ್ 3/28, ಇರ್ಫಾನ್ ಪಠಾಣ್ 2/28, ಇಂಡಿಯಾ ಲೆಜೆಂಡ್ಸ್ 20 ಓವರ್ಗಳಲ್ಲಿ 182/7 ( ಇರ್ಫಾನ್ ಪಠಾಣ್ 61*, ಗೋನಿ 35* , ಪನಿಸರ್ 3/15, ಟ್ರೇಡವೇಲ್ 2/44 )