ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ಕ್ವಾಲಿಫೈಯರ್ 1 ಸೋತರೂ, ದೆಹಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ತಂಡದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ನಮ್ಮ ತಂಡವು ಮುಂಬರುವ ಪಂದ್ಯದಲ್ಲಿ ಗೆಲ್ಲುವ ದೃಢ ಮನಸ್ಥಿತಿಯೊಂದಿಗೆ ಆಡುತ್ತದೆ ಎಂದು ಹೇಳಿದ್ದಾರೆ.
ದೆಹಲಿ ವಿರುದ್ಧ 57 ರನ್‌ಗಳ ಜಯ ಸಾಧಿಸಿರುವ ಮುಂಬೈ, ಐಪಿಎಲ್‌ನ ಫೈನಲ್‌ಗೆ ತಲುಪಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ. ಇಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಎಲಿಮಿನೇಟರ್ ಹಣಾಹಣಿ ನಡೆಯಲಿದೆ. ಇದರಲ್ಲಿ ಗೆದ್ದವರು ದೆಹಲಿ ತಂಡದ ವಿರುದ್ಧ ಆಡುತ್ತಾರೆ.
201ರನ್ ಬೃಹತ್ ಗುರಿ ಬೆನ್ನಟ್ಟಿದ ಡಿಸಿ 20 ಓವರ್‌ಗಳಲ್ಲಿ ಕೇವಲ 143/8 ರನ್ ಗಳಿಸಲು ಸಾಧ್ಯವಾಯಿತು. ಆಲ್‌ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ಮತ್ತು ಅಕ್ಸರ್ ಪಟೇಲ್ ಮಾತ್ರ ಬ್ಯಾಟಿಂಗ್ನಲ್ಲಿ ಮಿಂಚಿದರು. ಸ್ಟೊಯ್ನಿಸ್ 46 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಆರು ಬೌಂಡರಿ ಸೇರಿದಂತೆ 65 ರನ್ ಳಿಸಿದರೆ, ಪಟೇಲ್ 33 ಎಸೆತಗಳಲ್ಲಿ 42 ರನ್ ಗಳಿಸಿದರು.
"ಇದು ತುಂಬಾ ಕಠಿಣವಾದದ್ದು. ನಾನು ತಂಡದ ಬಗ್ಗೆ ನಕಾರಾತ್ಮಕವಾಗಿ ಏನನ್ನು ಮಾತನಾಡಲು ಬಯಸುವುದಿಲ್ಲ, ಆದರೆ, ಮುಂದಿನ ಪಂದ್ಯಗಳಲ್ಲಿ ನಾವು ದಿಟ್ಟ ಮನಸ್ಥಿತಿಯೊಂದಿಗೆ ಆಡಲು ಬಯಸುಯತ್ತೇವೆ. ಪಂದ್ಯದ ಆರಂಭದಲ್ಲಿ 2 ವಿಕೆಟ್ ಪಡೆದಾಗ ನಮ್ಮ ತಂಡ ಉತ್ತಮ ಸ್ಥಿತಿಯಲ್ಲಿತ್ತು. 14 ಓವರ್‌ಗಳಲ್ಲಿ ಎದುರಾಳಿ ತಂಡ 110 ರನ್ ಗಳಿಸಿತ್ತು. ಆಗ ಅದನ್ನು ನಾವು ಉತ್ತಮಗೊಳಿಸಬೇಕಿತ್ತು. ಎದುರಾಳಿ ತಂಡವನ್ನು 170 ರನ್ಗಳಿಗೆ ನಿಯಂತ್ರಿಸಿದ್ದರೆ, ನಾವು ಸುಲಭವಾಗಿ ಚೇಸ್ ಮಾಡಿ ಗೆಲವು ಪಡೆಯಬಹುದಿತ್ತು, ಆದರೆ ಇದು ಆಟದ ಒಂದು ಭಾಗ. ಪ್ರತಿ ರಾತ್ರಿ ನಿಮ್ಮದಾಗಲು ಸಾಧ್ಯವಿಲ್ಲ. ನಾವು ಕೇವಲ ನಮಗೆ ಇರುವ ಅವಕಾಶಗಳ ಬಗ್ಗೆ ಮಾತನಾಡುತ್ತೇವೆ " ಎಂದು ಅಯ್ಯರ್ ಹೇಳಿದ್ದಾರೆ.