ETV Bharat / sports

ಪ್ಲೇ-ಆಫ್​ಗೆ ಅರ್ಹತೆ ಪಡೆಯಲು ಉಳಿದ ಐದೂ ಪಂದ್ಯ ಗೆಲ್ಲಲೇಬೇಕು: ಸ್ಟೀವ್ ಸ್ಮಿತ್ - ರಾಜಸ್ಥನ ರಾಯಲ್ಸ್​​

ನಾವು ಪ್ಲೇ-ಆಫ್‌ ತಲುಪಲು ನಾವು ಕೊನೆಯ ಐದೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಈ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ. ನಾವು ಪಂದ್ಯ ಗೆಲ್ಲಲು ಎಲ್ಲ ಶ್ರಮವನ್ನೂ ಹಾಕಿದ್ದೇವೆ. ಇನ್ನು ಮುಂದೆಯೂ ನಮ್ಮ ಶ್ರಮ ಹೀಗೆ ಮುಂದುವರೆಯಲಿದೆ. ಕಷ್ಟದ ಸಂದರ್ಭಗಳಲ್ಲಿ ನಮ್ಮನ್ನು ನಾವು ಬೆಂಬಲಿಸುತ್ತೇವೆ ಎಂದು ಸ್ವೀವ್​ ಸ್ಮಿತ್​ ತಂಡದ ಆಟಗಾರರಿಗೆ ಧೈರ್ಯ ತುಂಬಿದ್ದಾರೆ.

smith
ಸ್ಟೀವ್ ಸ್ಮಿತ್
author img

By

Published : Oct 18, 2020, 7:22 AM IST

ದುಬೈ: ಆರ್‌ಸಿಬಿ ವಿರುದ್ಧ ಏಳು ವಿಕೆಟ್‌ಗಳ ಪತನದ ನಂತರ, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ತಂಡವು ಉಳಿದ ಐದೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನಾವು ಪ್ಲೇ - ಆಫ್‌ ತಲುಪಲು ನಮ್ಮ ಕೊನೆಯ ಐದು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ನಾವು ಗೆಲುವಿಗಾಗಿ ಬಹಳಷ್ಟು ಶ್ರಮವಹಿಸಿದ್ದೇವೆ. ಇನ್ನು ಮುಂದೆಯೂ ನಮ್ಮ ಶ್ರಮ ಹೀಗೆ ಮುಂದುವರೆಯಲಿದೆ. ಕಷ್ಟದ ಸಂದರ್ಭಗಳಲ್ಲಿ ನಮ್ಮನ್ನು ನಾವು ಬೆಂಬಲಿಸುತ್ತೇವೆ ಎಂದು ತಂಡದ ಇತರ ಆಟಗಾರರಲ್ಲಿ ಹುಮ್ಮಸ್ಸು ತುಂಬಿದ್ದಾರೆ.

ಆರಂಭಿಕ 22 ಎಸೆತಗಳಲ್ಲಿ 41 ರನ್ ಗಳಿಸಿದ ರಾಬಿನ್ ಉತ್ತಪ್ಪ ಅವರನ್ನು ಕಳುಹಿಸುವ ಹಿಂದಿನ ಕಾರಣದ ಬಗ್ಗೆ ಪ್ರತಿಕ್ರಿಯಿಸಿ, ಜೋಸ್​​ ಅದ್ಬುತ ಆರಂಭಿಕ ಆಟಗಾರ, ಆದರೆ ಆತನೊಂದಿಗೆ ಮಧ್ಯಮ ಕ್ರಮಾಂಕದ ಅನುಭವ ಬೇಕಿತ್ತು. ಆದ್ದರಿಂದ ರಾಬಿನ್ ಅವ​ರನ್ನು ಕಳುಹಿಸಲಾಯಿತು. ತಂಡಕ್ಕೆ ಹೆಚ್ಚಿನ ಸಮತೋಲನವನ್ನು ನೀಡಿ ರಾಬಿನ್ ಸಾಕಷ್ಟು ಆರಂಭಿಕ ಪಂದ್ಯಗಳನ್ನು ಆಡಿದ್ದಾರೆ. ಮುಂದೆಯೂ ಉತ್ತಮವಾಗಿ ಆಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ipl-2020-need-to-win-remaining-five-games-to-qualify-for-play-offs-says-smith
ಆರ್​ಆರ್​ ವಿರುದ್ಧ 22 ಎಸೆತಗಳಲ್ಲಿ 55 ರನ್ ಗಳಿಸಿದ ಎಬಿ ಡಿವಿಲಿಯರ್ಸ್

ಸ್ಟೀವ್ ಸ್ಮಿತ್ 36 ಎಸೆತಗಳಲ್ಲಿ 57 ರನ್​ ಗಳಿಸುವ ಮೂಲಕ ತಂಡ 20 ಓವರ್‌ಗಳಲ್ಲಿ177 ರನ್​ ಮುಟ್ಟಲು ನೆರವಾದರು. ಕ್ರಿಸ್ ಮೋರಿಸ್ 4 ಓವರ್‌ಗಳಲ್ಲಿ 24 ರನ್​ಗಳನ್ನು ನೀಡುವ ಮೂಲಕ ಪಂದ್ಯದಲ್ಲಿ ಉತ್ತಮ ಬೌಲರ್​ ಎನಿಸಿಕೊಂಡರು​. ಎಬಿ ಡಿವಿಲಿಯರ್ಸ್ 22 ಎಸೆತಗಳಲ್ಲಿ 55 ರನ್ ಗಳಿಸಿ ಆರ್‌ಸಿಬಿಯನ್ನು ಗೆಲ್ಲುವಂತೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.