ರಾಯಪುರ( ಛತ್ತೀಸ್ಗಢ): ರಸ್ತೆ ಸುರಕ್ಷತೆ ವಿಶ್ವ ಸರಣಿ 2021 ಕ್ರಿಕೆಟ್ ಪಂದ್ಯಾವಳಿ ಇಂದಿನಿಂದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ. ಮಾರ್ಚ್ 21 ರವರೆಗೆ ಪಂದ್ಯಾವಳಿ ನಡೆಯಲಿದೆ.
-
WATCH: Say hello to the 🇿🇦#SouthAfricaLegends squad! 👋
— Road Safety World Series (@RSWorldSeries) March 4, 2021 " class="align-text-top noRightClick twitterSection" data="
The @Unacademy Road Safety World Series returns TOMORROW 5th March 2021! #YehJungHaiLegendary 🏏
🎟️Get your tickets here: https://t.co/Puc2pfFq4b pic.twitter.com/eHCYmcxiWV
">WATCH: Say hello to the 🇿🇦#SouthAfricaLegends squad! 👋
— Road Safety World Series (@RSWorldSeries) March 4, 2021
The @Unacademy Road Safety World Series returns TOMORROW 5th March 2021! #YehJungHaiLegendary 🏏
🎟️Get your tickets here: https://t.co/Puc2pfFq4b pic.twitter.com/eHCYmcxiWVWATCH: Say hello to the 🇿🇦#SouthAfricaLegends squad! 👋
— Road Safety World Series (@RSWorldSeries) March 4, 2021
The @Unacademy Road Safety World Series returns TOMORROW 5th March 2021! #YehJungHaiLegendary 🏏
🎟️Get your tickets here: https://t.co/Puc2pfFq4b pic.twitter.com/eHCYmcxiWV
ಕಳೆದ ಮಾರ್ಚ್‌ನಲ್ಲಿ ಚೊಚ್ಚಲ ಆವೃತ್ತಿಯ ರೋಡ್ ಸೇಫ್ಟಿ ವಿಶ್ವ ಸರಣಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ನಾಲ್ಕು ಪಂದ್ಯಗಳು ಯಶಸ್ವಿಯಾಗಿ ಆಯೋಜನೆ ಆದ ನಂತರ ಕೋವಿಡ್-19 ಮಹಾಮಾರಿ ಸೋಂಕಿನ ಆರ್ಭಟ ಹೆಚ್ಚಾದ ಕಾರಣ ಟೂರ್ನಿ ರದ್ದು ಪಡಿಸಲಾಗಿತ್ತು.
-
📢Team Announcement: #WestIndiesLegends🏝️
— Road Safety World Series (@RSWorldSeries) March 4, 2021 " class="align-text-top noRightClick twitterSection" data="
The 2021 @Unacademy Road Safety World Series returns TOMORROW 5th March 2021!
🎟️Get your tickets here: https://t.co/Puc2pfFq4b pic.twitter.com/DRlQMotYX5
">📢Team Announcement: #WestIndiesLegends🏝️
— Road Safety World Series (@RSWorldSeries) March 4, 2021
The 2021 @Unacademy Road Safety World Series returns TOMORROW 5th March 2021!
🎟️Get your tickets here: https://t.co/Puc2pfFq4b pic.twitter.com/DRlQMotYX5📢Team Announcement: #WestIndiesLegends🏝️
— Road Safety World Series (@RSWorldSeries) March 4, 2021
The 2021 @Unacademy Road Safety World Series returns TOMORROW 5th March 2021!
🎟️Get your tickets here: https://t.co/Puc2pfFq4b pic.twitter.com/DRlQMotYX5
ಕಳೆದ ಬಾರಿ ನಾಲ್ಕು ಪಂದ್ಯಗಳು ನಡೆದಿದ್ದು ಆ 4 ಪಂದ್ಯಗಳಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಹಾಗೂ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು.
ಇಂದು ಇಂಡಿಯಾ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್ ವಿರುದ್ಧ ಸೆಣಸಾಡಲಿದೆ. ಈ ವರ್ಷದ ಮೊದಲ ಪಂದ್ಯ ಇದಾಗಿದ್ದು, ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಇತ್ತ ಭಾರತ- ಇಂಗ್ಲೆಂಡ್ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಕ್ರಿಕೆಟ್ ಪ್ರಿಯರಿಗೆ ಯಾವ ಪಂದ್ಯ ನೋಡಬೇಕು ಎನ್ನುವ ಗೊಂದಲದಲ್ಲಿದ್ದಾರೆ.
ಓದಿ : ರೋಡ್ ಸೇಫ್ಟಿ ವಿಶ್ವ ಸರಣಿ ಕ್ರಿಕೆಟ್ ಟೂರ್ನಿ: ಮಾರ್ಚ್ 5 ರಿಂದ ಕಣದಲ್ಲಿ ಕ್ರಿಕೆಟ್ ಲೆಜೆಂಡ್ಸ್
ಇದೀಗ ಟೂರ್ನಿ ಸಂಘಟಕರು ಎರಡನೇ ಆವೃತ್ತಿಯ ಆಯೋಜನೆಗೆ ಕೈ ಹಾಕಿದ್ದಾರೆ. ಕಳೆದ ಬಾರಿ ಮುಂಬೈ ಮತ್ತು ಪುಣೆಯಲ್ಲಿ ನಡೆಸಲಾಗಿದ್ದ ಟೂರ್ನಿಯನ್ನು, ಈ ಬಾರಿ ರಾಯ್ಪುರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ರಾಯ್ಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಎಲ್ಲ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಇಂಡಿಯಾ ಲೆಜೆಂಡ್ಸ್ :
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ಖಾನ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ನೋಯೆಲ್ ಡೇವಿಡ್, ಮುನಾಫ್ ಪಟೇಲ್, ಮನ್‌ಪ್ರೀತ್ ಗೋನಿ, ನಮನ್ ಓಜಾ, ಪ್ರಜ್ಞಾನ್ ಓಜಾ, ಯುಸೂಫ್ ಪಠಾಣ್.
ಬಾಂಗ್ಲಾದೇಶ ಲೆಜೆಂಡ್ಸ್ :
ಅಬ್ದುರ್ ರಝಾಕ್, ಖಲೀದ್ ಮಹಮೂದ್, ನಫೀಸ್ ಇಕ್ಬಾಲ್, ಮೊಹಮ್ಮದ್ ರಫೀಕ್, ಖಲೀದ್ ಮಶುದ್, ಹನ್ನನ್ ಸರ್ಕರ್, ಜಾವೇದ್ ಒಮರ್, ರಜೀನ್ ಸಲೇಹ್, ಮೆಹ್ರಾಬ್ ಹೊಸೈನ್, ಅಫ್ತಾಬ್ ಅಹ್ಮದ್, ಆಲಮ್‌ಗೀರ್ ಕಬೀರ್, ಮೊಹಮ್ಮದ್ ಷರೀಫ್, ಮುಷ್ಫಿಕೂರ್ ರಹಮಾನ್ ಮತ್ತು ಮಾಮುನ್ ಉರ್ ರಹಮಾನ್.
ಇಂದು ಪಂದ್ಯ ಸಂಜೆ 7 ಗಂಟೆಯಿಂದ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಲಿದೆ.