ಟಿ20 ಪಂದ್ಯಾವಳಿಯ ಸೂಪರ್ 12 ಹಂತಗಳಿಗೆ ಮುಂಚಿತವಾಗಿ ಭಾರತವು ತಮ್ಮ ಎರಡು ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿ ಜಯದ ಹಾದಿ ಹಿಡಿದಿದೆ. ಭಾರತದ ಅತ್ಯುತ್ತಮ ಪ್ರದರ್ಶನದಿಂದ ಪ್ರಭಾವಿತರಾದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ವಾನ್, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಟಿ20 ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದೆ ಎಂದು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
-
The way India are playing the warm up games suggests they may be now Hot favourites to Win the #T20WorldCup !!!
— Michael Vaughan (@MichaelVaughan) October 20, 2021 " class="align-text-top noRightClick twitterSection" data="
">The way India are playing the warm up games suggests they may be now Hot favourites to Win the #T20WorldCup !!!
— Michael Vaughan (@MichaelVaughan) October 20, 2021The way India are playing the warm up games suggests they may be now Hot favourites to Win the #T20WorldCup !!!
— Michael Vaughan (@MichaelVaughan) October 20, 2021
ಭಾರತ ತಂಡದ ವಾರ್ಮ್ ಅಪ್ ಆಟದ ವೈಖರಿ ನೋಡಿದರೆೆ ಕಪ್ ಗೆಲ್ಲೋದು ಖಚಿತ ಎಂದು ಅವರು ಹೇಳಿದ್ದಾರೆ.
ಸೋಮವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಬುಧವಾರ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿ ಟೀಂ ಕೊಹ್ಲಿ ಮತ್ತಷ್ಟು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
2007ರ ಟಿ20 ವಿಶ್ವಕಪ್ ಚಾಂಪಿಯನ್ನರು ಅಕ್ಟೋಬರ್ 24 ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಹೈ-ವೋಲ್ಟೇಜ್ ಪಂದ್ಯದೊಂದಿಗೆ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.