ಸಿಡ್ನಿ : 10ನೇ ಆವೃತ್ತಿ ಬಿಗ್ ಬ್ಯಾಷ್ ಲೀಗ್ನ (ಬಿಬಿಎಲ್) ಫೈನಲ್ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಬಗ್ಗುಬಡಿದ ಸಿಡ್ನಿ ಸಿಕ್ಸರ್ಸ್ ಸತತ ಎರಡನೇ ಬಾರಿ ಹಾಗೂ ಒಟ್ಟಾರೆ 3ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಶನಿವಾರ (ಫೆ.6) ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಸಿಡ್ನಿ, 20 ಓವರ್ನಲ್ಲಿ 6 ವಿಕೆಟ್ ಕಳೆದುಗೊಂಡು 188 ರನ್ ಗಳಿಸಿತ್ತು. ಬೃಹತ್ ಮೊತ್ತ ಬೆನ್ನಟ್ಟಿದ ಪರ್ತ್ 9 ವಿಕೆಟ್ಗೆ 161 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಸಿಡ್ನಿ ಸಿಕ್ಸರ್ ತಂಡ 27 ರನ್‌ಗಳ ರೋಚಕ ಗೆಲುವು ಸಾಧಿಸಿತು.
ಸಿಡ್ನಿ ತಂಡದ ಪರ ಆರಂಭಿಕ ಜೇಮ್ಸ್ ವಿನ್ಸ್ ಅಮೋಘ ಅರ್ಧಶತಕ (95, 10*4, 3*6) ಬಾರಿಸಿ ಮಿಂಚುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಜೋಷ್ ಫಿಲಿಪ್ಪೆ, ಡೇನಿಯಲ್ ಹ್ಯೂಸ್ 13, ಮೋಯಿಸ್ ಹೆನ್ರಿಕ್ಸ್ 18, ಜೋರ್ಡನ್ ಸಿಲ್ಕ್ 17*, ಡೇನಿಯಲ್ ಕ್ರಿಶ್ಚಿಯನ್ 20, ಕಾರ್ಲೋಸ್ ಬ್ರಾತ್‌ವೇಟ್ 10 ರನ್ ಗಳಿಸಿದರು. ಪರ್ತ್ನ ಜಾಯ್ ರಿಚರ್ಡ್ಸ್‌ಸನ್, ಆ್ಯಂಡ್ರ್ಯೂ ಟೈ ತಲಾ 2, ಫವಾದ್ ಅಹ್ಮದ್ 1 ವಿಕೆಟ್ ಕಿತ್ತರು.
-
Soak it up, @SixersBBL fans 🏆🏆 #BBL10 | #BBLFinals pic.twitter.com/UkmmMtsZFF
— KFC Big Bash League (@BBL) February 6, 2021 " class="align-text-top noRightClick twitterSection" data="
">Soak it up, @SixersBBL fans 🏆🏆 #BBL10 | #BBLFinals pic.twitter.com/UkmmMtsZFF
— KFC Big Bash League (@BBL) February 6, 2021Soak it up, @SixersBBL fans 🏆🏆 #BBL10 | #BBLFinals pic.twitter.com/UkmmMtsZFF
— KFC Big Bash League (@BBL) February 6, 2021
ಗುರಿ ಬೆನ್ನಟ್ಟಿದ ಪರ್ತ್ ಸ್ಕಾರ್ಚರ್ಸ್ ಯಾವೊಬ್ಬ ಆಟಗಾರನಿಂದಲೂ ಉತ್ತಮ ಪ್ರದರ್ಶನ ತೋರಲಿಲ್ಲ. ಕ್ಯಾಮರೂನ್ ಬೆನ್‌ಕ್ರಾಫ್ಟ್ 30, ಲಿಯಾಮ್ ಲಿವಿಂಗ್‌ಸ್ಟೋನ್ 20, ಜೋಷ್ ಇಂಗ್ಲಿಷ್ 22, ಮಿಚೆಲ್ ಮಾರ್ಷ್ 11, ಟರ್ನರ್ 11, ಹಾರ್ಡಿ 26 ರನ್ ಬಾರಿಸಿದರು. ಸಿಡ್ನಿಯ ಜ್ಯಾಕ್ಸನ್ ಬರ್ಡ್, ಸೀನ್ ಅಬಾಟ್, ಕ್ರಿಶ್ಚಿಯನ್ ತಲಾ 2, ಡ್ವೇನ್ ಡ್ವಾರ್ಷಿಯಸ್ 3 ಪಡೆದು ಮಿಂಚಿದರು. ಜೇಮ್ಸ್ ವಿನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜೋಷ್ ಫಿಲಿಪ್ಪೆ ಪಡೆದುಕೊಂಡರು.
3ನೇ ಬಾರಿಗೆ ಚಾಂಪಿಯನ್
2011ರಲ್ಲಿ ನಡೆದ ಬಿಬಿಎಲ್ನ ಮೊದಲ ಆವೃತ್ತಿಯಲ್ಲೇ ಫೈನಲ್ಗೇರಿದ ಸಿಡ್ನಿ ಸಿಕ್ಸರ್, ಪರ್ತ್ ಸ್ಕಾಚರ್ಸ್ ವಿರುದ್ಧ 7 ವಿಕೆಟ್ಗಳ ಅಂತರದಿಂದ ಗೆದ್ದು ಪ್ರಥಮ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತ್ತು. ನಂತರ 2019ರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 19 ರನ್‌ಗಳ ರೋಚಕ ಗೆಲುವು ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಈ ಬಾರಿಯೂ ಪರ್ತ್ ವಿರುದ್ಧ 27 ರನ್ಗಳಿಂದ ಜಯಿಸುವ ಮೂಲಕ 3ನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತು. 2014 ಮತ್ತು 2016ರ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿತ್ತು.
3ನೇ ಬಾರಿಗೆ ರನ್ನರ್ಅಪ್
ಬಿಬಿಎಲ್ ನಡೆದ 10 ಆವೃತ್ತಿಗಳಲ್ಲಿ ಪರ್ತ್ ಸ್ಕಾಚರ್ಸ್ ತಂಡವು 6 ಬಾರಿ ಫೈನಲ್ ತಲುಪಿದೆ. ಅದರಲ್ಲಿ ಮೂರು ಬಾರಿ ರನ್ನರ್ ಅಪ್ ಆಗಿದ್ದರೆ, ಮೂರು ಬಾರಿ ಪ್ರಶಸ್ತಿ ಗೆದ್ದಿದೆ. 2011, 2012 ಮತ್ತು 2020ರಲ್ಲಿ ಕ್ರಮವಾಗಿ ಸಿಡ್ನಿ ಸಿಕ್ಸರ್, ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಸಿಕ್ಸರ್ ವಿರುದ್ಧ ಅಂತಿಮ ಹಣಾಹಣಿಯಲ್ಲಿ ಸೋಲು ಕಂಡು ರನ್ನರ್ ಆಗಿದೆ. 2013, 2014 ಮತ್ತು 2016ರಲ್ಲಿ ಕ್ರಮವಾಗಿ ಹೋಬಾರ್ಟ್ ಹರಿಕೇನ್ಸ್, 2ಬಾರಿ ಸಿಡ್ನಿ ಸಿಕ್ಸರ್ ವಿರುದ್ಧ ಜಯಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ.