ಬೆಂಗಳೂರು: 2021-22ರ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ಗೆ 20 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಮನೀಶ್ ಪಾಂಡೆ ನಾಯಕರಾಗಿದ್ದಾರೆ. ನವೆಂಬರ್ 4ರಿಂದ 2021ರ ಟೂರ್ನಮೆಂಟ್ ಆರಂಭವಾಗಲಿದ್ದು, ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಆರಂಭಿಕರಾಗಿ ಆಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಡಿಕ್ಕಲ್ 12 ಪಂದ್ಯಗಳಿಂದ 40ರ ಸರಾಸರಿಯಲ್ಲಿ 441 ರನ್ಗಳಿಸಿದ್ದರು. ಇನ್ನು ಐಪಿಎಲ್ನಲ್ಲೂ 14 ಪಂದ್ಯಗಳಿಂದ 411 ರನ್ಗಳಿಸಿದ್ದರು.
ಕಳೆದ ಆವೃತ್ತಿಯಲ್ಲಿ ಮನೀಶ್ ಪಾಂಡೆ ಭುಜದ ನೋವಿನ ಕಾರಣ ಆಡಿರಲಿಲ್ಲ. ಕರುಣ್ ನಾಯರ್ ತಂಡವನ್ನು ಮುನ್ನಡೆಸಿದ್ದರು. ಪವನ್ ದೇಶಪಾಂಡೆ ಉಪನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಟೂರ್ನಿಯ ಮೊದಲ 10 ಆವೃತ್ತಿಗಳಲ್ಲಿ ಕರ್ನಾಟಕ ಉತ್ತಮ ಪ್ರದರ್ಶನ ತೋರಿರಲಿಲ್ಲ. ಆದರೆ, 2018-19, 2019-20ರರಲ್ಲಿ ಬೌನ್ಸ್ಬ್ಯಾಕ್ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ, 2020ರಲ್ಲಿ ಪಂಜಾಬ್ ವಿರುದ್ಧ ಕ್ವಾರ್ಟರ್ ಫೈನಲ್ಸ್ನಲ್ಲಿ ಪಂಜಾಬ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2021-22 ಗಾಗಿ ಕರ್ನಾಟಕದ ತಂಡ ಇಲ್ಲಿದೆ:
ಮನೀಶ್ ಪಾಂಡೆ (ನಾಯಕ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕೆವಿ ಸಿದ್ಧಾರ್ಥ್, ರೋಹನ್ ಕಡಮ್, ಅನಿರುದ್ಧ ಜೋಶಿ, ಅಭಿನವ್ ಮನೋಹರ್, ಕರುಣ್ ನಾಯರ್, ಶರತ್ ಬಿಆರ್, ನಿಹಾಲ್ ಉಳ್ಳಾಲ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ಪ್ರವೀಣ್ ದುಬೆ, ಕೆಸಿ ಕಾರಿಯಪ್ಪ, ಪ್ರಸಿದ್ ಕೃಷ್ಣ , ಪ್ರತೀಕ್ ಜೈನ್, ವೈಶಾಕ್ ವಿಜಯಕುಮಾರ್, ಎಂಬಿ ದರ್ಶನ್, ವಿದ್ಯಾಧರ್ ಪಾಟೀಲ್.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2021-22 ಗೆ ಕರ್ನಾಟಕದ ವೇಳಾಪಟ್ಟಿ ಇಲ್ಲಿದೆ:
ಪಂದ್ಯ 1: ಕರ್ನಾಟಕ v ಮುಂಬೈ, ನವೆಂಬರ್ 4
ಪಂದ್ಯ 2: ಕರ್ನಾಟಕ v ಛತ್ತೀಸ್‌ಗಡ, ನವೆಂಬರ್ 5
ಪಂದ್ಯ 3: ಕರ್ನಾಟಕ v ಸೇವೆಗಳು, ನವೆಂಬರ್ 6
ಪಂದ್ಯ 4: ಕರ್ನಾಟಕ v ಬರೋಡಾ, ನವೆಂಬರ್ 8
ಪಂದ್ಯ 5: ಕರ್ನಾಟಕ v ಬಂಗಾಳ, ನವೆಂಬರ್ 9
ಇದನ್ನು ಓದಿ:ಸೈಯದ್ ಮುಸ್ತಾಕ್ ಅಲಿ ಟಿ-20 ಟ್ರೋಪಿ: ಮುಂಬೈ ಕ್ಯಾಪ್ಟನ್ ಆಗಿ ರಹಾನೆ ಆಯ್ಕೆ