ಮುಂಬೈ (ಮಹಾರಾಷ್ಟ್ರ): ವಿಶ್ವಕಪ್ 2023ರ ಏಳನೇ ಪಂದ್ಯ ಆಡಲು ಭಾರತ ತಂಡ ಸೋಮವಾರ ಮುಂಬೈ ತಲುಪಿದೆ. ಭಾರತದ ಮುಂದಿನ ಪಂದ್ಯ ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ ನಡೆಯಲಿದೆ. ಪ್ರಸ್ತುತ ಐಸಿಸಿ ವಿಶ್ವಕಪ್ನಲ್ಲಿ ಭಾರತವು 12 ಅಂಕಗಳೊಂದಿಗೆ ಟೇಬಲ್‌ನ ಅಗ್ರಸ್ಥಾನದಲ್ಲಿದೆ. ಟೀಮ್ ಇಂಡಿಯಾ ಸೆಮೀಸ್ಗೆ ಪ್ರವೇಶ ಪ್ರವೇಶ ಪಡೆದಿರುವುದರಿಂದ ಆಟಗಾರರು ಸ್ವಲ್ಪ ರಿಲ್ಯಾಕ್ಸ್ ಮೂಡ್ಗೆ ಬಂದಿದ್ದಾರೆ.
-
Presenting Suryakumar Yadav in a never seen before avatar 😲🤯
— BCCI (@BCCI) November 1, 2023 " class="align-text-top noRightClick twitterSection" data="
What's our Mr. 360 doing on the streets of Marine Drive 🌊
Shoutout 👋🏻 if you were on SURYA CAM last evening 🤭#TeamIndia | #CWC23 | #MenInBlue | #INDvSL
WATCH 🎥🔽 - By @28anand
">Presenting Suryakumar Yadav in a never seen before avatar 😲🤯
— BCCI (@BCCI) November 1, 2023
What's our Mr. 360 doing on the streets of Marine Drive 🌊
Shoutout 👋🏻 if you were on SURYA CAM last evening 🤭#TeamIndia | #CWC23 | #MenInBlue | #INDvSL
WATCH 🎥🔽 - By @28anandPresenting Suryakumar Yadav in a never seen before avatar 😲🤯
— BCCI (@BCCI) November 1, 2023
What's our Mr. 360 doing on the streets of Marine Drive 🌊
Shoutout 👋🏻 if you were on SURYA CAM last evening 🤭#TeamIndia | #CWC23 | #MenInBlue | #INDvSL
WATCH 🎥🔽 - By @28anand
ಶ್ರೀಲಂಕಾ ವಿರುದ್ಧ ತಂಡ ಮೈದಾನಕ್ಕಿಳಿಯುವ ಮೊದಲು ಲೋಕಲ್ ಬಾಯ್ ಸೂರ್ಯಕುಮಾರ್ ಯಾದವ್ ಜನರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಮುಂಬೈನ ಮರೈನ್ ಡ್ರೈವ್ನ ಸುತ್ತ ಇರುವ ಕ್ರಿಕೆಟ್ ಅಭಿಮಾನಿಗಳ ಜೊತೆ ಸಂದರ್ಶನ ಮಾಡಲು ಸೂರ್ಯ ಮಾರು ವೇಷದಲ್ಲಿ ತೆರಳಿದ್ದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಆ್ಯಪ್ ಖಾತೆಯಲ್ಲಿ ಹಂಚಿಕೊಂಡಿದೆ. ಟೀಮ್ ಇಂಡಿಯಾದ ಆಟಗಾರರ ಮೇಲೆ ಜನರಿಗಿರುವ ನಿರೀಕ್ಷೆಯನ್ನು ಸೂರ್ಯ ಕ್ಯಾಮೆರಾ ಮೆನ್ ಆಗಿ ಸೆರೆಹಿಡಿದಿದ್ದಾರೆ.
ಮೈದಾನದಲ್ಲಿ ಸೂರ್ಯಕುಮಾರ್ ಯಾದವ್ ಸಿಕ್ಸರ್ ಮತ್ತು ಬೌಂಡರಿ ಬಾರಿಸುವುದನ್ನು ನಾವು ನೋಡಿದ್ದೇವೆ. ಆದರೆ, ಇಂದು ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ವ್ಲಾಗ್ ಮಾಡಲು ಮರೈನ್ ಡ್ರೈವ್‌ಗೆ ಹೋಗಿದ್ದಾರೆ. ಈ ಸಮಯದಲ್ಲಿ ಸ್ಕೈ ತಮ್ಮ ಸಂಪೂರ್ಣ ಗುರುತನ್ನು ಬದಲಾಯಿಸಿಕೊಂಡಿದ್ದು, ಸಾಮಾನ್ಯರಂತೆ ತೆರಳಿದ್ದಾರೆ. ಟ್ಯಾಟೂವನ್ನು ಮರೆಮಾಡಲು, ಅವರು ಪೂರ್ಣ ತೋಳಿನ ಶರ್ಟ್, ಮಾಸ್ಕ್, ಕಪ್ಪು ಕನ್ನಡಕ ಮತ್ತು ಕ್ಯಾಪ್ ಧರಿಸಿದ್ದಾರೆ. ಈ ರೀತಿ ವೇಷ ಬದಲಿಸಿಕೊಂಡು ಕೊಠಡಿಯಿಂದ ಹೊರಗೆ ಬಂದಾಗ ರವೀಂದ್ರ ಜಡೇಜಾ ಕೂಡ ಸೂರ್ಯ ಅವರನ್ನು ಗುರುತಿಸಿಲ್ಲ.
ಹೊಟೇಲ್ನಿಂದ ಹೊಬಂದ ಸೂರ್ಯ ಮೆರೈನ್ ಡ್ರೈವ್ ವ್ಲಾಗ್ ಪ್ರಾರಂಭವಾಗುತ್ತದೆ. ಕ್ಯಾಮರಾಮನ್ ಆಗಿ ನಟಿಸಿರುವ ಸೂರ್ಯ ವಿಶ್ವಕಪ್ ಮತ್ತು ಕ್ರಿಕೆಟ್ ಬಗ್ಗೆ ಜನರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಕ್ರಿಕೆಟ್ ಅಭಿಮಾನಿಗಳ ಬಳಿ ಈ ವಿಶ್ವಕಪ್ನಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳಿದ್ದಾರೆ. "ಕೆಲವರು ಸೂರ್ಯಕುಮಾರ್ ಯಾದವ್ ಇನ್ನೂ ಅವಕಾಶ ಸಿಗಬೇಕು, ಮೇಲಿನ ಕ್ರಮಾಂಕದಲ್ಲಿ ಅವರಿಗೆ ಬ್ಯಾಟಿಂಗ್ಗೆ ಅವಕಾಶ ಮಾಡಿಕೊಡಬೇಕು" ಎಂದೆಲ್ಲಾ ತಿಳಿಸಿದ್ದಾರೆ. ಇದನ್ನು ಕೇಳಿ ಕ್ಯಾಮೆರಾ ಹಿಡಿದಿದ್ದ ಸೂರ್ಯ ಅವರಿಗೆ ನಗು ತಡೆಯಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಮಾಸ್ಕ್ ಅಭಿಮಾನಿಗಳ ಜತೆಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಹೊಟೇಲ್ಗೆ ಮರಳುವಾಗ ಸೂರ್ಯ ತಮಗೆ ತಾವೇ ಉತ್ತಮ ನಟ ಎಂಬ ಬಿರುದನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾಂಗರೂ ಪಡೆಗೆ ಭಾರಿ ಹಿನ್ನಡೆ: ಸ್ಟಾರ್ ಆಟಗಾರ ಮ್ಯಾಕ್ಸ್ವೆಲ್ಗೆ ಗಾಯ.. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯ