ETV Bharat / sports

0,0,0 ಚಕ್ರವ್ಯೂಹದಲ್ಲಿ ಸಿಲುಕಿದ ಸೂರ್ಯಕುಮಾರ್ ಯಾದವ್! - ಸೂರ್ಯಕುಮಾರ್ ಯಾದವ್​ ಕೆಟ್ಟ ದಾಖಲೆ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ​ಸೂರ್ಯಕುಮಾರ್​ ಪೂರ್ಣ ವೈಫಲ್ಯ ಅನುಭವಿಸಿದರು. ಆಡಿದ ಮೂರು ಪಂದ್ಯಗಳಲ್ಲಿ ಒಂದು ಎಸೆತವನ್ನು ಬ್ಯಾಟ್​ಗೆ ತಾಗಿಸದೇ, ಮೊದಲ ಎಸೆತದಲ್ಲಿ ಔಟಾಗಿ ಕೆಟ್ಟ ದಾಖಲೆಗೆ ಒಳಗಾದರು.

ಸೂರ್ಯಕುಮಾರ್
ಸೂರ್ಯಕುಮಾರ್
author img

By

Published : Mar 23, 2023, 7:13 AM IST

ಚೆನ್ನೈ(ತಮಿಳುನಾಡು): ದುರಾದೃಷ್ಟವೋ, ಕೆಟ್ಟ ಬ್ಯಾಟಿಂಗ್​ ಕೌಶಲ್ಯವೋ? ಒಟ್ಟಿನಲ್ಲಿ ಟಿ20 ಕ್ರಿಕೆಟ್​​ನ ನಂಬರ್ 1 ಬ್ಯಾಟರ್​ ಸೂರ್ಯಕುಮಾರ್​ ಏಕದಿನ ಮಾದರಿಯಲ್ಲಿ ನೆಲಕಚ್ಚಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೂರು ಪಂದ್ಯಗಳಲ್ಲಿ ಸತತ ಸೊನ್ನೆ ಸುತ್ತುವ ಮೂಲಕ ಅತೀ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ. ಸರಣಿಯೊಂದರಲ್ಲಿ ಸತತವಾಗಿ ಮೊದಲ ಎಸೆತದಲ್ಲೇ ಔಟಾದ 6ನೇ ಬ್ಯಾಟರ್​ ಎಂಬ ಅಪಖ್ಯಾತಿಗೂ ಒಳಗಾದರು.

ಟಿ20 ಕ್ರಿಕೆಟ್​ನಲ್ಲಿ ಅದ್ಭುತ ಲಯದಲ್ಲಿರುವ ಸೂರ್ಯಕುಮಾರ್​ ಯಾದವ್​ ಏಕದಿನ ಮಾದರಿಯಲ್ಲೂ ಅದೇ ಖದರ್​ ತೋರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಪೂರ್ಣ ವೈಫಲ್ಯ ಅನುಭವಿಸಿದರು. ವಿಶ್ವಕಪ್​ ತಂಡದಲ್ಲಿ ಸ್ಥಾನ ಮತ್ತು ಹೆಚ್ಚಿನ ನಿರೀಕ್ಷೆ ಹೊಂದಿದ್ದ ಆಟಗಾರರಲ್ಲಿ ಸೂರ್ಯಕುಮಾರ್ ಒಬ್ಬರಾಗಿದ್ದರು. ಆದರೆ, ಅವರ ಈಗಿನ ಪ್ರದರ್ಶನ ತಂಡಕ್ಕೆ ಚಿಂತೆಗೀಡು ಮಾಡಿದೆ.

ಸಚಿನ್​ ಪಟ್ಟಿ ಸೇರ್ಪಡೆ: ವಿಶ್ವಕಪ್​ ಸಿದ್ಧತಾ ಭಾಗವಾಗಿ ನಡೆದ ಆಸೀಸ್​ ಸರಣಿಯಲ್ಲಿ ಸೂರ್ಯಕುಮಾರ್​ ಯಾದವ್​ ಪ್ರಮುಖ ಪಾತ್ರ ನಿರ್ವಹಿಸಿ ತಾವು ಏಕದಿನಕ್ಕೂ ಸಿದ್ಧ ಎಂಬುದನ್ನು ಸಾಬೀತುಪಡಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಸರಣಿಯಲ್ಲಿ ಮುಗ್ಗರಿಸಿದ ಆಟಗಾರ, ಮೂರೂ ಪಂದ್ಯಗಳಲ್ಲೂ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿ ಅತಿ ಕೆಟ್ಟ ಪ್ರದರ್ಶನ ನೀಡಿದರು.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಏಕದಿನದಲ್ಲಿ ಬ್ಯಾಟ್​​ ಬೀಸಲು ಬಂದ ಸೂರ್ಯಕುಮಾರ್ ಯಾದವ್​ಗೆ ಮೊದಲ ಎಸೆತದಲ್ಲೇ ಆಸೀಸ್​ ಉರಿ ಚೆಂಡಿನ ವೇಗಿ ಮಿಚೆಲ್​ ಸ್ಟಾರ್ಕ್​ ಎಲ್​ಬಿ ಬಲೆಗೆ ಬೀಳಿಸಿದ್ದರು. ಇದಾದ ಬಳಿಕ ವಿಶಾಖಪಟ್ಟಣಂನಲ್ಲಿ ನಡೆದ 2ನೇ ಪಂದ್ಯದಲ್ಲಿ ಸೂರ್ಯನನ್ನು ಮತ್ತೆ ಕಾಡಿ ಮಿಚೆಲ್​ ಸ್ಟಾರ್ಕ್​ ಎಲ್​ಬಿ ಮಾಡುವ ಮೂಲಕ ಮೊದಲ ಎಸೆತದಲ್ಲೇ ಔಟ್​ ಮಾಡಿದ್ದರು. ಇದರಿಂದ ಸೂರ್ಯಕುಮಾರ್​ ಬ್ಯಾಟಿಂಗ್​ ಕ್ರಿಕೆಟ್​ ವಲಯದಲ್ಲಿ ಟೀಕೆಗೆ ಗುರಿಯಾಗಿತ್ತು.

ಚೆನ್ನೈನಲ್ಲಿ ಬುಧವಾರ ನಡೆದ ಪಂದ್ಯದಲ್ಲೂ ಸೂರ್ಯ ಆ್ಯಸ್ಟರ್​ ಅಗರ್​ ಸ್ಪಿನ್​ಗೆ ಕ್ಲೀನ್​ಬೌಲ್ಡ್​ ಆಗುವ ಮೂಲಕ ತೀವ್ರ ನಿರಾಸೆಗೆ ಒಳಗಾದರು. ವಿಲಕ್ಷಣವಾಗಿ ಔಟಾದ ಸೂರ್ಯ ಡಗೌಟ್​ನಲ್ಲಿದ್ದ ತಂಡವನ್ನು ಅಚ್ಚರಿಗೆ ದೂಡಿದರು. ಸತತ ಮೂರು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಚುಟುಕು ಕ್ರಿಕೆಟ್​ನ ದೊರೆ ಏಕದಿನದಲ್ಲಿ ಭಾರಿ ಹಿನ್ನಡೆ ಅನುಭವಿಸಿದರು.

ಇದಕ್ಕೂ ಮೊದಲು "ಕ್ರಿಕೆಟ್​ ದೇವರು" ಎಂದೇ ಖ್ಯಾತಿಯಾದ ಸಚಿನ್​ ತೆಂಡೂಲ್ಕರ್​ ಇಂತಹ ಅಪಖ್ಯಾತಿ ಪಡೆದ ಮೊದಲ ಭಾರತೀಯ ಬ್ಯಾಟರ್ ಆಗಿದ್ದಾರೆ. 1994 ರಲ್ಲಿ ಅವರು ಈ ಕೆಟ್ಟ ದಾಖಲೆಗೆ ಒಳಗಾಗಿದ್ದರು. ಇದಲ್ಲದೇ, ಅನಿಲ್ ಕುಂಬ್ಳೆ (1996), ಜಹೀರ್ ಖಾನ್ (2003-04), ಇಶಾಂತ್ ಶರ್ಮಾ (2010-11), ಜಸ್ಪ್ರೀತ್ ಬೂಮ್ರಾ (2017-2019) ಈ ಪಟ್ಟಿಯಲ್ಲಿದ್ದಾರೆ.

ವಿಶ್ವಕಪ್​ ತಂಡದ್ದೇ ಚಿಂತೆ: ಆಸೀಸ್ ವಿರುದ್ಧದ ಸರಣಿಯಲ್ಲಿ ಭಾರತದ ಯಾವೊಬ್ಬ ಬ್ಯಾಟರ್​ ಕೂಡಾ ಅದ್ಭುತ ಪ್ರದರ್ಶನ ನೀಡಿಲ್ಲ. ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ, ನಾಯಕ ರೋಹಿತ್​ ಶರ್ಮಾ, ರವೀಂದ್ರ ಜಡೇಜಾ, ಕೆ.ಎಲ್.ರಾಹುಲ್​, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿಲ್ಲ. ಇದು ಆಡಳಿತ ಮಂಡಳಿಯ ತಲೆನೋವು ಹೆಚ್ಚಿಸಿದೆ. ವಿಶ್ವಕಪ್​ಗೆ ಕೇವಲ 6 ತಿಂಗಳು ಇದ್ದು, ತಂಡ ತವರಿನಲ್ಲೇ ವೈಫಲ್ಯ ಕಾಣುತ್ತಿದೆ.

ಇದನ್ನೂ ಓದಿ: ICC Ranking: ಅಗ್ರಸ್ಥಾನ ಕಳೆದುಕೊಂಡ ಸಿರಾಜ್​, ಟೆಸ್ಟ್​ನಲ್ಲಿ ವಿಲಿಯನ್ಸ್​​ ಎರಡನೇ ಸ್ಥಾನಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.