ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಕೊನೆಯ ಮತ್ತು ಮೂರನೇ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಆಟದಿಂದ ಭಾರತ ಜಯಭೇರಿ ಸಾಧಿಸಿ ಸರಣಿ ಕ್ಲೀನ್ಸ್ವೀಪ್ ಸಾಧಿಸಿದೆ. ಈ ಪಂದ್ಯದಲ್ಲಿ ಬಲಗೈ ದಾಂಡಿಗ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 65 ರನ್ ಗಳಿಸಿ ತಂಡದ ಜಯಕ್ಕೆ ಕಾರಣೀಭೂತರಾದರು.
ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕ ಗಳಿಸಿ ಪೆವಿಲಿಯನ್ನತ್ತ ಕೈ ಜೋಡಿಸಿ 'ನಮಸ್ಕಾರ' ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೂರ್ಯಕುಮಾರ್ ಯಾದವ್ರ ಭರ್ಜರಿ ಅರ್ಧಶತಕದ ತರುವಾಯ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಈ ವೇಳೆ ಸೂರ್ಯಕುಮಾರ್ ಯಾದವ್ ಮೈದಾನದಲ್ಲಿಯೇ ಕೈ ಜೋಡಿಸಿ 'ನಮಸ್ಕಾರ' ಮಾಡಿದ್ದಾರೆ.
- — Sports Hustle (@SportsHustle3) February 20, 2022 " class="align-text-top noRightClick twitterSection" data="
— Sports Hustle (@SportsHustle3) February 20, 2022
">— Sports Hustle (@SportsHustle3) February 20, 2022
ಸೂರ್ಯಕುಮಾರ್ ಯಾದವ್ ಭಾರತ ತಂಡದ ಮಧ್ಯಮ ಕ್ರಮಾಂಕದ ಬಲ ತುಂಬಿದ್ದು, ಕೆರೆಬಿಯನ್ನರ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಕೊನೆಯ ಓವರ್ಗಳಲ್ಲಿ ರನ್ ಕದಿಯುವುದು ಪ್ರಮುಖವಾಗಿದೆ. ಹೀಗಾಗಿ ರೋಹಿತ್ ಶರ್ಮಾ ಔಟಾದ ಬಳಿಕ ನಾನು ರಕ್ಷಣಾತ್ಮಕವಾಗಿ ಆಟವಾಡಿ ಬಳಿಕ ಬಿರುಸಿನ ಹೊಡೆತಗಳಿಗೆ ಕೈಹಾಕಿದೆ. ಅಲ್ಲದೇ, ಒತ್ತಡದ ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ತಂಡದ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾಹಾ ಹೇಳಿಕೆಯಿಂದ ನೋವಾಗಿಲ್ಲ, ಅವರ ಮೇಲೆ ಅಪಾರ ಗೌರವವಿದೆ: ರಾಹುಲ್ ದ್ರಾವಿಡ್